For Quick Alerts
ALLOW NOTIFICATIONS  
For Daily Alerts
 

ಈಡನ್ ಗಾರ್ಡನ್‌ನಲ್ಲಿ ಬೆಂಕಿ ಅವಘಡ: ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಸ್ನೇಹಾಶೀಷ್ ಗಂಗೂಲಿ

ಬುಧವಾರ ರಾತ್ರಿ ಕೊಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದ ಡ್ರೆಸ್ಸಿಂಗ್‌ರೂಮ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ ಆತಂಕ ಮೂಡಿಸಿತ್ತು. ವಿಶ್ವಕಪ್ ಟೂರ್ನಿಯ ಸನಿಹದಲ್ಲಿ ಟೂರ್ನಿಯ ಆತಿಥ್ಯದ ತಾಣದಲ್ಲಿಯೇ ಈ ಘಟನೆರ ನಡೆದಿದ್ದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಆದರೆ ಈ ಘಟನೆಯ ಬಗ್ಗೆ ಕ್ರಿಕೆಟ್ ಅಸಿಸಿಯೇಶನ್ ಆಫ್ ಬೆಂಗಾಲ್(ಸಿಎಬಿ) ಅಧ್ಯಕ್ಷ ಸ್ನೇಹಾಶೀಷ್ ಗಂಗೂಲಿ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ವಿಶ್ವಕಪ್ 2023ರ ಆಯೋಜನೆಗೆ ನವೀಕರಣ ಕಾರ್ಯಗಳು ನಡೆಯುತ್ತಿರುವಾಗ ಆಗಸ್ಟ 9ರ ರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ ಕಾರಣ ಅಗ್ನಿ ನಿಯಂತ್ರಣಕ್ಕೆ ಬಂದಿತ್ತು. ಕೆಲ ವರದಿಗಳ ಪ್ರಕಾರ ಡ್ರೆಸ್ಸಿಂಗ್‌ರೂಮ್ ಅಗ್ನಿಗೆ ಬಹುತೇಕ ಆಹುತಿಯಾಗಿದ್ದು ಅಲ್ಲಿನ ವಸ್ತುಗಳೆಲ್ಲಾ ಸಂಪೂರ್ಣ ಸುಟ್ಟುಹೋಗಿದೆ ಎನ್ನಲಾಗಿತ್ತು. ಆದರೆ ಈ ಘಟನೆಯ ಬಗ್ಗೆ ಸಿಎಬಿ ಬಿ ಅಧ್ಯಕ್ಷ ಮಾಹಿತರಿ ನೀಡಿದ್ದು ದೊಡ್ಡ ಪ್ರಮಾಣದ ಅಗ್ನಿ ಅನಾಹುತ ಅಲ್ಲ ಎಂದು ಮಾಹಿತಿ ನೀಡಿದ್ದಾರೆ.

Eden Gardens fire: Snehasish Ganguly gives update, said no damage to the dressing room

ಘಟನೆಗೆ ಸಂಗಂಧಿಸಿದಂತೆ ಪರಿಶೀಲನೆ ಬಾಕಿಯಿದ್ದು ಈ ಸಂದರ್ಭದಲ್ಲಿ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಸಿಎಬಿ) ಅಧ್ಯಕ್ಷ ಸ್ನೇಹಾಶೀಷ್ ಗಂಗೂಲಿ ಅವರು ಸ್ಟೇಡಿಯಂನಲ್ಲಿರುವ ಡ್ರೆಸ್ಸಿಂಗ್ ಕೋಣೆಗೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿದ್ದಾರೆ. ಎರಡು ಅಗ್ನಿಶಾಮಕ ಟೆಂಡರ್‌ಗಳು ಕೆಲವೇ ಸಮಯದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದವು. ಕೆಲವೇ ಕೇಬಲ್‌ಗಳು ಸುಟ್ಟುಹೋಗಿವೆ ಎಂದು ಅವರು ಹೇಳಿದ್ದಾರೆ.

"ನಿನ್ನೆ ರಾತ್ರಿ 11.50ಕ್ಕೆ ಬೆಂಕಿ ಕಾಣಿಸಿಕೊಂಡಿತು.ಇಲ್ಲಿ ಕೆಲಸ ಮಾಡುತ್ತಿದ್ದ ಜನರು ಹೊಗೆ ಮತ್ತು ನಂತರ ಬೆಂಕಿ ಕಾಣಿಸಿಕೊಳ್ಳುವುದನ್ನು ಗಮನಿಸಿದರು. ತಕ್ಷಣವೇ ಎರಡು ಅಗ್ನಿಶಾಮಕ ಟೆಂಡರ್‌ಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಲಾಯಿತು. ಡ್ರೆಸ್ಸಿಂಗ್ ರೂಮ್‌ಗೆ ಯಾವುದೇ ಹಾನಿಯಾಗಿಲ್ಲ. ಕೆಲವು ಕೇಬಲ್‌ಗಳು ಮಾತ್ರ ಸುಟ್ಟುಹೋಗಿವೆ" ಎಂದು ಸ್ನೇಹಾಶೀಷ್ ಗಂಗೂಲಿ ಅವರ ಹೇಳಿಕೆಯನ್ನು ಉಲ್ಲೇಖಿಸಿ 'ದಿ ಹಿಂದೂ' ವರದಿ ಮಾಡಿದೆ.

ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ನಿಯೋಗಗಳು ಈಡನ್ ಗಾರ್ಡನ್ ಕ್ರೀಡಾಂಗಣಕ್ಕೆ ಭೇಟಿ ನೀಡಿ, 2023ರ ವಿಶ್ವಕಪ್ ಪಂದ್ಯಾವಳಿಗೆ ಮೊದಲು ಸ್ಥಳದ ಮೂಲಸೌಕರ್ಯ ಮತ್ತು ಪ್ರೇಕ್ಷಕರ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದ್ದವು.

ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣ 2023ರ ಐದು ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ಅಕ್ಟೋಬರ್ 28ರಂದು ಮೊದಲ ಪಂದ್ಯವನ್ನು ಆಡಲಿವೆ. ನಂತರ ಬಾಂಗ್ಲಾದೇಶ ತಂಡವು ಅಕ್ಟೋಬರ್ 31ರಂದು ಪಾಕಿಸ್ತಾನ ತಂಡವನ್ನು ಇದೇ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಬಳಿಕ ಆತಿಥೇಯ ಭಾರತ ತಂಡವು ನವೆಂಬರ್ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಇಲ್ಲಿ ಸೆಣಸಾಡಲಿದೆ. ನವೆಂಬರ್ 11ರಂದು ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಎರಡನೇ ಸೆಮಿಫೈನಲ್ ಪಂದ್ಯವು ನವೆಂಬರ್ 16ರಂದು ಈಡನ್ ಗಾರ್ಡನ್ಸ್‌ನಲ್ಲಿಯೇ ನಡೆಯಲಿದೆ.

Story first published: Thursday, August 10, 2023, 23:44 [IST]
Other articles published on Aug 10, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+