ಅಭಿಮಾನಿಗಳಿಗೆ ದೀಪಾವಳಿ ಗಿಫ್ಟ್ ನೀಡಿದ ಸೌರವ್ ಗಂಗೂಲಿ
ಟೀಮ್ ಇಂಡಿಯಾ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ವೇಳೆ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದೆ. ಆ ಬಳಿಕ ಟಿ20 ಸರಣಿ ಆಡಲಿದೆ. ಆ ಬಳಿಕ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ನಡೆಯಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನವೆಂಬರ್ 14 ರಂದು ನಡೆಯಲಿದೆ. ಈ ಪಂದ್ಯಕ್ಕಾಗಿ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿವೆ. ಈ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಅಭಿಮಾನಿಗಳಿಗೆ ದೀಪಾವಳಿ ಗಿಫ್ಟ್ ಸಿಕ್ಕಿದೆ.
ಸುಮಾರು 6 ವರ್ಷಗಳ ಬಳಿಕ ಕೋಲ್ಕತ್ತಾದಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ. ಕೊನೆಯ ಬಾರಿಗೆ ಈ ಮೈದಾನದಲ್ಲಿ 2019ರಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ನಡೆದಿತ್ತು. ಆಗ ಆ ಟೆಸ್ಟ್ ಪಂದ್ಯ ಡೇ ಆಂಡ್ ನೈಟ್ ಆಗಿತ್ತು. ಇನ್ನು ಆರು ವರ್ಷಗಳ ಬಳಿಕ ನಡೆಯಲಿರುವ ಪಂದ್ಯಕ್ಕಾಗಿ ಅಭಿಮಾನಿಗಳಿಗೆ ಕೈ ಗೆಟಕುವ ದರದಲ್ಲಿ ಟಿಕೆಟ್‌ಗಳನ್ನು ಈಡಲು ನಿರ್ಧರಿಸಲಾಗಿದೆ. ಈ ಪಂದ್ಯದ ಟಿಕೆಟ್‌ಗಳನ್ನು ಜೊಮಾಟೊ ಅಪ್ಲಿಕೇಶನ್‌ನಲ್ಲಿ ಬುಕ್ ಮಾಡಬಹುದು. ಐದು ದಿನಗಳ ಟಿಕೆಟ್ ದರವನ್ನು 300 ರೂ ನಿಗದಿ ಪಡಿಸಲಾಗಿದೆ. ಅಂದರೆ ಪ್ರತಿ ದಿನಕ್ಕೆ 60 ರೂಪಾಯಿ ಆಗಲಿದೆ. ಇನ್ನು ಒಂದೇ ದಿನದ ಟಿಕೆಟ್‌ಗಳು ಬೇಕಿದಲ್ಲೂ ಆ ವ್ಯವಸ್ಥೆಯನ್ನು ಸಹ ಮಂಡಳಿ ಕಲ್ಪಿಸಿದೆ. ಒಂದು ದಿನಕ್ಕೆ 250 ರೂ. ಟಿಕೆಟ್ ಬೆಲೆಯನ್ನು ನಿಗದಿ ಪಡಿಸಲಾಗಿದೆ.

ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ಸೆಪ್ಟೆಂಬರ್ 22, 2025 ರಂದು ಎರಡನೇ ಬಾರಿಗೆ ಬಂಗಾಳ ಕ್ರಿಕೆಟ್ ಸಂಘದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು. ಈ ಮೊದಲು ಸಹ 2015 ರಿಂದ 2019ರ ವರೆಗೂ ಇದೇ ಹುದ್ದೆಯನ್ನು ಅಲಂಕರಿಸಿದ್ದರು. ಆ ಬಳಿಕ ಅವರು ಬಿಸಿಸಿ ಐ ಅಧ್ಯಕ್ಷರಾಗಿ ಆಯ್ಕೆ ಆದರು. ಇವರು ಕಾರ್ಯವ್ಯಪ್ತಿಯಲ್ಲಿ ಟಿಕೆಟ್ ದರಗಳನ್ನು ಕಡಿಮೆ ಮಾಡಿರುವುದು ಅಭಿಮಾನಿಗಳಿಗೆ ಸಿಕ್ಕ ಬಿಗ್ ಬಂಪರ್ ಆಗಿದೆ.
ಎರಡು ಪಂದ್ಯಗಳ ಟೆಸ್ಟ್ ಸರಣಿ
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಡಿಯಲ್ಲಿಯೇ ಈ ಟೆಸ್ಟ್ ಸರಣಿ ನಡೆಯಲಿದೆ. ಈ ಟೆಸ್ಟ್ ಸರಣಿಯಲ್ಲಿ ಗೆಲುವು ದಾಖಲಿಸುವುದು ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾಕಕ್ಕೆ ಮಹತ್ವದಾಗಿದೆ. ಈ ಎರಡು ಪಂದ್ಯಗಳ ಸರಣಿಯ ಮೊದಲ ಪಂದ್ಯ ನವೆಂಬರ್ 14 ರಿಂದ 18 ರವರೆಗೆ ಕೋಲ್ಕತ್ತಾದಲ್ಲಿ ನಡೆದರೆ, ಎರಡನೇ ಟೆಸ್ಟ್ ನವೆಂಬರ್ 22 ರಿಂದ 26 ರವರೆಗೆ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತರಾದ ಬಳಿಕ ಈ ಸ್ಥಾನವನ್ನು ಶುಭಮನ್ ಗಿಲ್ ತುಂಬಿದರು. ಇವರು ತಮ್ಮ ಇಂಗ್ಲೆಂಡ್ ಪ್ರವಾಸದಲ್ಲಿ ಐದು ಪಂದ್ಯಗಳ ಸರಣಿಯನ್ನು 2-2ರಿಂದ ಡ್ರಾ ಸಾಧಿಸಿತ್ತು. ಆ ಬಳಿಕ ತವರಿನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಯಿಂದ ಗೆದ್ದು ಬೀಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications