Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲ್ ಕ್ಲಾಸಿಕೋ: ಸೌರೆಜ್ ಹ್ಯಾಟ್ರಿಕ್ ಗೋಲು, ಮ್ಯಾಡ್ರಿಡ್‌ಗೆ ಹೀನಾಯ ಸೋಲು

El Clasico: Suarez strikes hat-trick as Barcelona blow away Madrid

ಬೆಂಗಳೂರು, ಅಕ್ಟೋಬರ್ 29: ಬಲು ಕುತೂಹಲ ಮೂಡಿಸಿದ್ದ ಸ್ಪೇನ್ ನ ಕ್ಯಾಂಪ್ ನೌ ಸ್ಟೇಡಿಯಂನಲ್ಲಿ ಭಾನುವಾರ (ಅಕ್ಟೋಬರ್ 28) ನಡೆದ ಲಾ ಲಿಗಾ ಟೂರ್ನಿಯ ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ತಂಡಗಳ ಮುಖಾಮುಖಿಯಲ್ಲಿ ಎಫ್‌ಸಿ ಬಾರ್ಸಿಲೋನಾ 5-1 ಅಂತರದ ಗೆಲುವನ್ನಾಚರಿಸಿತು.

ಪಂದ್ಯದ ಸ್ಕೋರ್ ಕಾರ್ಡ್

ಲೂಯಿಸ್ ಸೌರೆಜ್ ಹ್ಯಾಟ್ರಿಕ್ ಗೋಲ್ ನೆರವಿನಿಂದ ಬಾರ್ಸಿಲೋನಾ ಸುಲಭ ಜಯ ಸಾಧಿಸಿತು. ಪಂದ್ಯದ ಮೊದಲಾರ್ಧದಲ್ಲೇ ಬಾರ್ಸಿಲೋನಾ ಎರಡು ಗೋಲ್ ಮುನ್ನಡೆ ಸಾಧಿಸಿದ್ದು, ಎದುರಾಳಿ ರಿಯಲ್ ಮ್ಯಾಡ್ರಿಡ್ ತಂಡವನ್ನು ಇನ್ನಷ್ಟು ಒತ್ತಡಕ್ಕೀಡು ಮಾಡಿತ್ತು.

ವಿಶೇಷವೆಂದರೆ ಈ ಬಾರಿ ಬಾರ್ಸಿಲೋನಾ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಮತ್ತು ಮ್ಯಾಡ್ರಿಡ್ ಮಾಜಿ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೋ ಇಬ್ಬರ ಆಟವನ್ನೂ ಫೂಟ್ಬಾಲ್ ಅಭಿಮಾನಿಗಳಿಗೆ ನೋಡುವ ಅವಕಾಶವಿರಲಿಲ್ಲ. ಕಾರಣ ಮೆಸ್ಸಿ ಗಾಯಕ್ಕೀಡಾಗಿದ್ದರೆ, ರೊನಾಲ್ಡೋ ಅವರು ಮ್ಯಾಡ್ರಿಡ್ ತೊರೆದು ಯುವೆಂಟಸ್ ಸೇರಿರುವುದು.

ಪಂದ್ಯಾರಂಭಗೊಂಡ 10ನೇ ನಿಮಿಷಲದಲ್ಲಿ ಬಾರ್ಸಿಲೋನಾದಿಂದ ಸ್ಟಾರ್ ಫಿಲಿಪ್ ಕೌಟಿನ್ಹೋ ಗೋಲ್ ಬಾರಿಸಿ ಮುನ್ನಡೆ ಕೊಟ್ಟರು. ಅನಂತರ ಲೂಯಿಸ್ ಸ್ವಾರೇಜ್ ಕ್ರಮವಾಗಿ 29, 74, 82ನೇ ನಿಮಿಷಗಳಲ್ಲಿ ಗೋಲ್ ಬಾರಿಸಿ ಪಂದದ ಹೀರೋ ಎನಿಸಿಕೊಂಡರಲ್ಲದೆ ತಂಡದ ಗೆಲುವನ್ನು ಅದಾಗಲೇ ಬರೆದರು. ದ್ವಿತೀಯಾರ್ಧದಲ್ಲಿ (49ನೇ ನಿಮಿಷ) ಮ್ಯಾಡ್ರಿಡ್ ನಿಂದ ಮಾರ್ಸೆಲೋ ಗೋಲ್ ಸಿಡಿಸಿ ಸೋಲಿನ ಅಂತರವನ್ನು ಕಿರಿದುಗೊಳಿಸಿದರು.

Story first published: Monday, October 29, 2018, 14:56 [IST]
Other articles published on Oct 29, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+