For Quick Alerts
ALLOW NOTIFICATIONS  
For Daily Alerts
 

ಆಸೀಸ್‌ನ ಎಲ್ಲಿಸ್‌ ಪೆರ್ರಿ ಅಜೇಯ 300, ದಾಖಲೆಯತ್ತ ಆಲ್‌ರೌಂಡರ್‌ ಹೆಜ್ಜೆ

ಆಸ್ಟ್ರೇಲಿಯಾ ಮಹಿಳಾ ತಂಡದ ಸ್ಟಾರ್ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 299 ಪಂದ್ಯಗಳನ್ನು ಆಡಿದ್ದು, ಮೂರನೇ ಪಂದ್ಯವನ್ನು ಆಡಲು ಎದುರು ನೋಡುತ್ತಿದ್ದಾರೆ. ಈ ವೇಳೆ ಎಲ್ಲಿಸ್ ತಮ್ಮ ಮನದಾಸೆಯನ್ನು ತಿಳಿಸಿದ್ದಾರೆ

ತಾವು 400 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲು ಬಯಸಿರುವುದಾಗಿ ಹೇಳಿದ್ದಾರೆ. ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡವು ಪ್ರಸ್ತುತ ಭಾರತ ಪ್ರವಾಸದಲ್ಲಿದೆ. ಪ್ರವಾಸದಲ್ಲಿ ಆಸೀಸ್ ಟೆಸ್ಟ್ ಮತ್ತು ODI ನಂತರ ಆತಿಥೇಯರ ಜೊತೆ T20 ಸರಣಿಯನ್ನು ಆಡುತ್ತಿದೆ. ಮೊದಲ ಟಿ20 ಪಂದ್ಯ ನಡೆದಿದ್ದು, ಎರಡನೇ ಟಿ20 ಜನವರಿ 07ರಂದು ನಡೆಯಲಿದ್ದು, ಇದು ಎಲ್ಲಿಸ್ ಪೆರಿಯ 300ನೇ ಅಂತಾರಾಷ್ಟ್ರೀಯ ಪಂದ್ಯವಾಗುವ ಸಾಧ್ಯತೆ ಇದೆ.

Ellyse Perry expressed her desire to play 400 international matches, just one step away from 300th match

400 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುವ ಆಸೆ ಹೊಂದಿರುವ ಎಲ್ಲಿಸ್ ಪೆರ್ರಿ, ಭಾರತ ವಿರುದ್ಧದ ಎರಡನೇ ಟಿ20ಯಲ್ಲಿ ಆಸ್ಟ್ರೇಲಿಯಾದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದರೆ ತನ್ನ 300 ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ. ಆಸ್ಟ್ರೇಲಿಯಾದ ಆಲ್ ರೌಂಡರ್ ಇದುವರೆಗೆ 299 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ವಿಶ್ವದ ನಾಲ್ಕನೇ ಆಟಗಾರ್ತಿ ಪೆರ್ರಿ. ಈ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ 333 ಪಂದ್ಯಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ.ಇಂಗ್ಲೆಂಡ್‌ನ ಚಾರ್ಲೆಟ್ ಎಡ್ವರ್ಡ್ಸ್ ಮತ್ತು ನ್ಯೂಜಿಲೆಂಡ್‌ನ ಸುಜಿ ಬೇಟ್ಸ್ 309 ಪಂದ್ಯಗಳೊಂದಿಗೆ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕಿ ನಂತರ ಇದ್ದಾರೆ.

ಎಲಿಸ್ ಪೆರ್ರಿ ಭಾರತದ ವಿರುದ್ಧ ಎರಡನೇ ಟಿ20 ಆಡಿದರೆ, ಅವರು 300 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ ಆಸ್ಟ್ರೇಲಿಯಾದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ತಮ್ಮದಾಗಿಸಿಕೊಳ್ಳಲಿದ್ದಾರೆ.

Ellyse Perry expressed her desire to play 400 international matches, just one step away from 300th match

ಮುಂದಿನ ಕಠಿಣ ಸವಾಲಿಗೆ ನಾನು ಸಿದ್ಧ. ನಾನು ಇನ್ನೂ ಈ ಗುಂಪಿನ ಭಾಗವಾಗಿರಲು ಇಷ್ಟಪಡುತ್ತೇನೆ. ಹಾಗಾಗಿ ನಾನು 400 ಪಂದ್ಯಗಳನ್ನು ಆಡಲು ಬಯಸುತ್ತೇನೆ ಎಂದಿದ್ದಾರೆ.

ಎಲ್ಲಾ ಮೂರು ಸ್ವರೂಪಗಳನ್ನು ಆಡುವ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟಿಗರಲ್ಲಿ ಎಲ್ಲಿಸ್ ಒಬ್ಬರು. ಇಲ್ಲಿಯವರೆಗೆ, ಅವರು ತಮ್ಮ ವೃತ್ತಿಜೀವನದಲ್ಲಿ 12 ಟೆಸ್ಟ್, 141 ODI ಮತ್ತು 146 T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ ಅವರು 925 ರನ್ ಗಳಿಸಿದ್ದು, 38 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೆ, ಆಸ್ಟ್ರೇಲಿಯಾದ ಆಲ್‌ರೌಂಡರ್ ಏಕದಿನದಲ್ಲಿ 3852 ರನ್ ಗಳಿಸಿ 162 ವಿಕೆಟ್ ಪಡೆದಿದ್ದಾರೆ. ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಪೆರ್ರಿ 1774 ರನ್ ಗಳಿಸಿ 123 ವಿಕೆಟ್ ಪಡೆದಿದ್ದಾರೆ.

Story first published: Sunday, January 7, 2024, 9:07 [IST]
Other articles published on Jan 7, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+