ಮುರಳಿ ವಿಜಯ್ ಡಿನ್ನರ್ ಬಯಕೆಗೆ ಆಸಿಸ್ ಕ್ರಿಕೆಟ್‌ನ 'ಅಪ್ರತಿಮ ಸುಂದರಿ'ಯಿಂದ ಗ್ರೀನ್ ಸಿಗ್ನಲ್!

ಇತ್ತೀಚೆಗೆ ತಾನೆ ಟೀಮ್ ಇಂಡಿಯಾದ ಕ್ರಿಕೆಟ್ ಆಟಗಾರ ಮುರುಳಿ ವಿಜಯ್ ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ನೀಡಿದ್ದ ಹೇಳಿಕೆಯೊಂದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕ್ರಿಕೆಟ್ ಅಭಿಮಾನಿಗಳು ಈ ವಿಚಾರವಾಗಿ ಮುರುಳಿ ವಿಜಯ್ ಕಾಲೆಳೆದು ಮಜಾ ತೆಗೆದುಕೊಂಡಿದ್ದರು.
ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಕಾಣಿಸಿಕೊಂಡಿದ್ದ ಮುರಳಿ ವಿಜಯ್ ಕ್ರೀಡಾ ನಿರ್ಮಾಪಕಿ ರೂಪಾ ರಮಣಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಈ ಲೈವ್‌ನಲ್ಲಿ ಮುರಳಿ ವಿಜಯ್‌ಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರವನ್ನು ಪಡೆಯುತ್ತಿದ್ದರು. ಜೊತೆಗೆ ಅಭಿಮಾನಿಗಳು ಕೂಡ ಮುರಳಿ ವಿಜಯ್ ಪ್ರಶ್ನೆಗಳನ್ನು ಎಸೆಯುತ್ತಿದ್ದರು.
ಈ ಸಂದರ್ಭದಲ್ಲಿ ಆಸಿಸ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಇಲ್ಯಾಸ್ ಪೆರ್ರಿ ಜೊತೆಗೆ ಡಿನ್ನರ್ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇದು ಸಾಕಷ್ಟು ಸುದ್ದಿಯಾಗಿತ್ತು. ಇದಕ್ಕೆ ಸ್ವತಃ ಇಲ್ಯಾಸ್ ಪೆರ್ರಿ ಪ್ರತಿಕ್ರಿಯಿಸಿದ್ದಾರೆ.

"ಡಿನ್ನರ್ ಮಾಡಲು ಬಯಸುವ ಕ್ರಿಕೆಟಿಗರು?"
ಇನ್ಸ್ಟಾಗ್ರಾಮ್ ಲೈವ್ ವೇಳೆ ನಿರೂಪಕಿ ರೂಪಾ ರಮಣಿ ಡಿನ್ನರ್ ಮಾಡಲು ಬಯಸುವ ಕ್ರಿಕೆಟಿಗರು ಯಾರು ಎಂಬ ಪ್ರಶ್ನೆಯನ್ನು ಕೇಳಿದ್ದರು. ಒಂದು ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಹೆಸರು ಸೂಚಿಸಿದ ಮುರಳಿ ಇನ್ನೊಂದು ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟರ್ ಇಲ್ಯಾಸ್ ಪೆರ್ರಿ ಹೆಸರನ್ನು ಹೇಳಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾದರು.

ಮುರಳಿ ಆಸೆಗೆ ಪೆರ್ರಿ ಪ್ರತಿಕ್ರಿಯೆ
ಮುರುಳಿ ವಿಜಯ್ ಬಯಕೆಗೆ ಸ್ವತಃ ಇಲ್ಯಾಸ್ ಪೆರ್ರಿ ಪ್ರತಿಕ್ರಿಯಿಸಿದ್ದಾರೆ. ಸ್ವತಃ ಪೆರ್ರಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಲೈವ್‌ಗೆ ಆಗಮಿಸಿದ್ದರು. ಈ ವೇಳೆ ನಿರೂಪಕಿ ಪೆರ್ರಿಗೆ ಮುರಳಿ ವಿಜಯ್ ವ್ಯಕ್ತಪಡಿಸಿದ್ದ ಬಯಕೆಯನ್ನು ತಿಳಿಸಿದ್ದಾರೆ. ಅದಕ್ಕೆ ಪೆರ್ರಿ ಸಕಾರಾತ್ಮಕ ಉತ್ತರವನ್ನು ನೀಡಿದ್ದಾರೆ.

ಮುರಳಿ ಬಯಕೆಗೆ ಪೆರ್ರಿಯಿಂದ ಗ್ರೀನ್ ಸಿಗ್ನಲ್
ಡಿನ್ನರ್ ಮಾಡುವಾಸೆಯನ್ನು ವ್ಯಕ್ತಪಡಿಸಿದ್ದ ಮುರಳಿ ವಿಜಯ್ ಬಯಕೆಗೆ ಒಂದು ರೀತಿಯಲ್ಲಿ ಗ್ರೀನ್ ಸಿಗ್ನಲ್ ಕೊಟ್ಟಂತೆ ಪೆರ್ರಿ ಮಾತನಾಡಿದ್ದಾರೆ. "ಡಿನ್ನರ್ ಬಿಲ್ಲನ್ನು ಅವರೇ(ಮುರಳಿ ವಿಜಯ್) ಪಾವತಿಸುತ್ತಾರೆ ಎಂದು ಭಾವಿಸುತ್ತೇನೆ, ಅದು ಅವರ ಒಳ್ಳೆಯತನ, ನಾನು ಅವರನ್ನು ಪ್ರಶಂಸಿಸುತ್ತೇನೆ ಎಂದು ಪೆರ್ರಿ ಹೇಳಿದ್ದಾರೆ.

"ಆಕೆ ಅಪ್ರತಿಮ ಸುಂದರಿ"
ಇಲ್ಯಾಸ್ ಪೆರ್ರಿ ಹೆಸರು ಹೇಳಿದ್ದಕ್ಕೆ ಮುರಳಿ ವಿಜಯ್ ಕಾರಣವನ್ನೂ ಕೊಟ್ಟಿದ್ದರು. ಆಕೆಯೋರ್ವ ಅಪ್ರತಿಮ ಸುಂದರಿ. ಆಕೆಯ ಜೊತೆಗೆ ಡಿನ್ನರ್ ಮಾಡಬೇಕು ಎಂಬ ಆಸೆ ಎಂದು ಮುರಳಿ ವಿಜಯ್ ಈ ಲೈವ್ ನಲ್ಲಿ ಹೇಳಿದ್ದರು. ಇದಕ್ಕೆ ಸ್ವತಃ ಪೆರ್ರಿ ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications