Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WPL RCB: ಎಲ್ಲಿಸ್‌ ಪೆರ್ರಿ ಹಾಡಿದ ಕನ್ನಡ ಹಾಡು ಯಾವುದು ಗೊತ್ತಾ? ಇಲ್ಲಿದೆ ವಿಡಿಯೋ

ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಈ ಲೀಗ್‌ನಲ್ಲಿ ಆರ್‌ಸಿಬಿ ಸ್ಥಿರ ಪ್ರದರ್ಶನವನ್ನು ನೀಡಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಪ್ರಸಕ್ತ ಲೀಗ್‌ನಲ್ಲಿ ತನ್ನ ಮೊದಲ ಸೋಲು ಕಂಡಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಪರ ಸ್ಟಾರ್‌ ಆಲ್‌ರೌಂಡರ್‌ ಎಲ್ಲಿಸ್‌ ಪೆರ್ರಿ ಮನಮೋಹಕ ಬ್ಯಾಟಿಂಗ್ ನಡೆಸಿ ಎಲ್ಲರ ಗಮನ ಸೆಳೆದರು. ಒತ್ತಡದ ಸನ್ನಿವೇಶದಲ್ಲಿ ಬ್ಯಾಟ್ ಮಾಡಿದ ಎಲ್ಲಿಸ್‌ ಕ್ಲಾಸಿಕ್‌ ಇನಿಂಗ್ಸ್‌ ಕಟ್ಟಿ, ತಂಡದ ಮೊತ್ತ ಹಿಗ್ಗಿಸಲು ನೆರವಾದರು.

ಶುಕ್ರವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿದೆ ಎಂದರೆ ಅದರಲ್ಲಿ ಎಲ್ಲಿಸ್‌ ಪೆರ್ರಿ ಪಾತ್ರ ದೊಡ್ಡದು. ಪೆರ್ರಿಗೆ ಬೆಂಗಳೂರಿನಲ್ಲಿ ಅಪಾರ ಅಭಿಮಾನಿಗಳು ಇದ್ದಾರೆ. ಇವರು ಈ ಸ್ಟಾರ್‌ ಆಟಗಾರ್ತಿಯ ಆಟಕ್ಕೆ ಮನಸೋತಿದ್ದಾರೆ. ಶುಕ್ರವಾರದ ಆಟವನ್ನು ಕಂಡು ಅಭಿಮಾನಿಗಳು ಪೆರ್ರಿಗೆ ಫುಲ್‌ ಮಾರ್ಕ್ಸ್‌ ನೀಡಿದ್ದಾರೆ. ದೂರದ ಆಸ್ಟ್ರೇಲಿಯಾದಿಂದ ಇಲ್ಲಿಗೆ ಕ್ರಿಕೆಟ್‌ ಆಡುವ ಪೆರ್ರಿ ಇಲ್ಲಿನ ಅಭಿಮಾನಿಗಳ ಪ್ರೀತಿಗೆ ಕರಗಿದ್ದಾರೆ.

Ellyse Perry Wins RCB Fans Hearts by Singing a Kannada Song

ಆರ್‌ಸಿಬಿ ಅಭಿಮಾನಿಗಳು ಡಬಲ್‌ ಖುಷಿ ಪಡುವಂತೆ ಎಲ್ಲಿಸ್‌ ಪೆರ್ರಿ ಮಾಡಿದ್ದಾರೆ. ಪೆರ್ರಿ ಸಂದರ್ಶನ ಒಂದರದಲ್ಲಿ ಕನ್ನಡದ ಹಳೆಯ ಗೀತೆಯನ್ನು ಹಾಡಿ ಗಮನ ಸೆಳೆದಿದ್ದಾರೆ. ಮೈದಾನದಲ್ಲಿ ತನ್ನ ಅಮೋಘ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಿಂದ ಅಭಿಮಾನಿಗಳ ಮನ ಗೆದ್ದಿರುವ ಎಲ್ಲಿಸಾ ಈಗ ಕನ್ನಡ ಹಾಡು ಹಾಡಿದ್ದಾರೆ.

ಆರ್‌ಸಿಬಿ ಒಂದು ವಿಡಿಯೋವನ್ನು ತನ್ನ ಸಾಮಾಜಿಕ ತಾಣದಲ್ಲಿ ಹಾಕಿಕೊಂಡಿದೆ. ಈ ವಿಡಿಯೋದಲ್ಲಿ ಪೆರ್ರಿ ಹಳೆಯ ಕನ್ನಡ ಹಾಡು ಹಾಡಿದ್ದಾರೆ. ಮಿಸ್ಟರ್‌ ನ್ಯಾಗ್ಸ್‌ ಅವರೊಂದಿಗಿನ ಸಂವಾದದ ವಿಡಿಯೋವನ್ನು ಹಂಚಿಕೊಂಡಿದೆ. ಈ ವೇಳೆ ನ್ಯಾಗ್ಸ್‌ ಪೆರ್ರಿ ಅವರಿಗೆ ನನ್ನ ಜೊತೆ ಕನ್ನಡ ಹಾಡು ಹೇಳುವಂತೆ ತಿಳಿಸುತ್ತಾರೆ. ಆಗ ಪೆರ್ರಿ ಪ್ರೇಮಲೋಕದ ಹಾಡು ಹಾಡುತ್ತಾರೆ. ಆಸ್ಟ್ರೇಲಿಯಾದ ಬೆಡಗಿ ಹಾಡಿದ ಸುಮಧುರ ಹಾಡಿಗೆ ಅಭಿಮಾನಿಗಳು ಕ್ಲೀನ್‌ ಬೋಲ್ಡ್ ಆಗಿದ್ದಾರೆ.

ಪೆರ್ರಿ ಸಾಧನೆ

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಎಲ್ಲಿಸಾ ಪೆರ್ರಿ ಅಮೋಘ ಅಂಕಿ ಅಂಶಗಳನ್ನು ಹೊಂದಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಪೆರ್ರಿ ಅಬ್ಬರ ನಡೆಸಿದರು. ಇವರು 43 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್‌ ಸಹಾಯದಿಂದ 81 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸದರು. ಇವರ ಅಮೋಘ ಬ್ಯಾಟಿಂಗ್ ಮೂರನೇ ಆವೃತ್ತಿಯಲ್ಲೂ ಮುಂದುವರೆದಿದೆ. ಇವರು ಆಡಿದ 3 ಪಂದ್ಯಗಳಲ್ಲಿ 145 ರನ್‌ ಸಿಡಿಸಿ ಭರವಸೆಯ ಮೂಡಿಸಿದ್ದಾರೆ.

ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿರುವಲ್ಲಿ ಪೆರ್ರಿ ಸಾಧನೆ ದೊಡ್ಡದು. ಇವರು 69ರ ಸರಾಸರಿಯಲ್ಲಿ ಎರಡನೇ ಆವೃತ್ತಿಯಲ್ಲಿ 347 ರನ್‌ ಕಲೆ ಹಾಕಿದ್ದರು.

34 ವರ್ಷ ಎಲ್ಲಿಸಾ ಪೆರ್ರಿ ಒಬ್ಬ ಸ್ಟಾರ್ ಆಲ್‌ರೌಂಡರ್‌. ಇವರು ಆಸೀಸ್ ಪರ ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿರುವ ಹೆಗ್ಗಳಿಕೆ ಹೊಂದಿದ್ದಾರೆ. ಇವರು ಆಸ್ಟ್ರೇಲಿಯಾ ಪರ ಏಕದಿನ ವಿಶ್ವಕಪ್‌ ಹಾಗೂ ಟಿ20 ವಿಶ್ವಕಪ್‌ ಗೆದ್ದ ತಂಡದ ಸದಸ್ಯೆ.

Story first published: Saturday, February 22, 2025, 10:34 [IST]
Other articles published on Feb 22, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+