Emerging Asia Cup 2023 Semifinal: ಭಾರತ ಎ vs ಬಾಂಗ್ಲಾದೇಶ ಎ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
ಶುಕ್ರವಾರ, ಜುಲೈ 21ರಂದು ಕೊಲಂಬೊದ ಆರ್ ಪ್ರೇಮದಾಸ್ ಸ್ಟೇಡಿಯಂನಲ್ಲಿ ನಡೆಯುತತ್ತಿರುವ 2023ರ ಎಸಿಸಿ ಉದಯೋನ್ಮುಖ ಏಷ್ಯಾ ಕಪ್‌ನ ಸೆಮಿಫೈನಲ್‌ನಲ್ಲಿ ಪಂದ್ಯದಲ್ಲಿ ಭಾರತ ಎ ಮತ್ತು ಬಾಂಗ್ಲಾದೇಶ ಎ ತಂಡಗಳು ಮುಖಾಮುಖಿಯಾಗಿವೆ.

ಟಾಸ್ ಗೆದ್ದ ಬಾಂಗ್ಲಾದೇಶ ಎ ತಂಡದ ನಾಯಕ ಸೈಫ್ ಹಸನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದ್ದರಿಂದ, ಯಶ್ ಧುಲ್ ನಾಯಕತ್ವದ ಭಾರತ ಎ ತಂಡ ಮೊದಲು ಬ್ಯಾಟಿಂಗ್ ಆರಂಭಿಸಲಿದೆ.
ಭಾರತ ಎ ತಮ್ಮ ಅಂತಿಮ ಗುಂಪು ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎ ತಂಡದ ವಿರುದ್ಧ 8 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತ್ತು. ಇದೀಗ ಉದಯೋನ್ಮುಖ ಏಷ್ಯಾ ಕಪ್ ಪಂದ್ಯಾವಳಿ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಎ ತಂಡವನ್ನು ಎದುರಿಸುವ ಮೂಲಕ ಫೈನಲ್‌ನಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎದುರು ನೋಡುತ್ತಿದೆ.
ವೇಗಿ ರಾಜವರ್ಧನ್ ಹಂಗರ್ಕೇಕರ್ ಅವರು ಪಾಕಿಸ್ತಾನ ವಿರುದ್ಧ 42 ರನ್‌ಗೆ 5 ವಿಕೆಟ್‌ಗಳನ್ನು ಪಡೆದರೆ, ಬ್ಯಾಟಿಂಗ್‌ನಲ್ಲಿ ಸಾಯಿ ಸುದರ್ಶನ್ 104 ರನ್‌ಗಳ ಅಮೋಘ ಶತಕ ಬಾರಿಸಿದರು. ಇದೇ ವೇಳೆ ನಿಕಿನ್ ಜೋಸ್ 53 ರನ್ ಗಳಿಸಿದರೆ, ಎಡಗೈ ಸ್ಪಿನ್ನರ್ ಮಾನವ್ ಸುತಾರ್ 36 ರನ್‌ಗೆ 3 ವಿಕೆಟ್ ಕಬಳಿಸಿ ಉತ್ತಮ ಪ್ರದರ್ಶನ ನೀಡಿದರು.
ಮತ್ತೊಂದೆಡೆ, ಬಾಂಗ್ಲಾದೇಶ ಎ ತಂಡವನ್ನು ಸುಲಭವಾಗಿ ಪರಿಗಣಿಸುವಂತಿಲ್ಲ. ಅನುಭವಿ ಸೌಮ್ಯ ಸರ್ಕಾರ್ ಭಾರತ ತಂಡದದ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ.
ಭಾರತ ಎ ಮತ್ತು ಬಾಂಗ್ಲಾದೇಶ ಎ ತಂಡಗಳ ಆಡುವ 11ರ ಬಳಗ
ಬಾಂಗ್ಲಾದೇಶ ಎ: ತಂಝೀದ್ ಹಸನ್, ಸೈಫ್ ಹಸನ್ (ನಾಯಕ), ಮಹಮ್ಮದುಲ್ ಹಸನ್ ಜಾಯ್, ಜಾಕಿರ್ ಹಸನ್, ಸೌಮ್ಯ ಸರ್ಕಾರ್, ಮಹೇದಿ ಹಸನ್, ರಾಕಿಬುಲ್ ಹಸನ್, ತಂಜಿಮ್ ಹಸನ್ ಸಾಕಿಬ್, ರಿಪಾನ್ ಮೊಂಡೋಲ್, ಅಕ್ಬರ್ ಅಲಿ (ವಿಕೆಟ್ ಕೀಪರ್), ಮೊಹಮ್ಮದ್ ನಯಿಮ್.
ಭಾರತ ಎ: ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ, ನಿಕಿನ್ ಜೋಸ್, ಯಶ್ ಧುಲ್ (ನಾಯಕ), ರಿಯಾನ್ ಪರಾಗ್, ನಿಶಾಂತ್ ಸಿಂಧು, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಮಾನವ್ ಸುತಾರ್, ಯುರಾಜ್‌ಸಿನ್ಹ್ ದೋಡಿಯಾ, ಹರ್ಷಿತ್ ರಾಣಾ, ರಾಜವರ್ಧನ್ ಹಂಗರ್ಗೇಕರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications