Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Emerging Asia Cup 2023 Semifinal: ಬಾಂಗ್ಲಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು; ಪಾಕ್ ವಿರುದ್ಧ ಫೈನಲ್

ಶುಕ್ರವಾರ, ಜುಲೈ 21ರಂದು ಕೊಲಂಬೊದ ಆರ್ ಪ್ರೇಮದಾಸ್ ಸ್ಟೇಡಿಯಂನಲ್ಲಿ ನಡೆದ 2023ರ ಎಸಿಸಿ ಉದಯೋನ್ಮುಖ ಏಷ್ಯಾ ಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎ ತಂಡವು ಬಾಂಗ್ಲಾದೇಶ ಎ ತಂಡದ ವಿರುದ್ಧ 51 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಫೈನಲ್‌ ತಲುಪಿತು.

ಬಾಂಗ್ಲಾದೇಶ ವಿರುದ್ಧ ಭಾರತ ತಂಡ ಬ್ಯಾಟಿಂಗ್‌ನಲ್ಲಿ ಸಾಧಾರಣ ಮೊತ್ತ ಗಳಿಸಿದರೂ, ಬೌಲಿಂಗ್‌ನಲ್ಲಿ ನಿಶಾಂತ್ ಸಿಂಧು ಅವರ ಐದು ವಿಕೆಟ್‌ಗಳ ಸಹಾಯದಿಂದ ಎದುರಾಳಿ ತಂಡವನ್ನು ಕಡಿಮೆ ರನ್‌ಗಳಿಗೆ ನಿಯಂತ್ರಿಸಿತು.

emerging-asia-cup-2023

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡ 49.1 ಓವರ್‌ಗಳಲ್ಲಿ 211 ರನ್‌ಗಳಿಗೆ ಆಲೌಟ್ ಆಯಿತು. ನಾಯಕ ಯಶ್ ಧುಲ್ ಮಾತ್ರ ತಂಡದ ಪರ ಏಕೈಕ ಅರ್ಧಶತಕ ಬಾರಿಸಿದರು. ಯಶ್ ಧುಲ್ 85 ಎಸೆತಗಳಲ್ಲಿ 8 ಬೌಂಡರಿ ಸಮೇತ 66 ರನ್ ಗಳಿಸಿದರು.

ಇನ್ನು ಇದಕ್ಕೂ ಮೊದಲು ಆರಂಭಿಕರಾದ ಹಾಗೂ ಕಳೆದ ಪಂದ್ಯದ ಶತಕವೀರ ಸಾಯಿ ಸುದರ್ಶನ್ 21 ರನ್, ಅಭಿಷೇಕ್ ಶರ್ಮಾ 34 ರನ್ ಗಳಿಸಿ ಔಟಾದರೆ, ನಂತರ ಬಂದ ನಿಕಿನ್ ಜೋಸ್ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಉಳಿದಂತೆ ನಿಶಾಂತ್ ಸಂಧು 5 ರನ್, ರಿಯಾನ್ ಪರಾಗ್ 12 ರನ್, ಹರ್ಷಿತ್ ರಾಣಾ 9 ರನ್, ಮಾನವ್ ಸುತಾರ 21 ರನ್, ರಾಹವರ್ಧನ್ ಹಂಗೇರ್ಕರ್ 15 ರನ್ ಗಳಿಸಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು.

Emerging Asia Cup 2023 Semifinal: India A Beat Bangladesh A By 51 Runs And Enters To Final

ಬಾಂಗ್ಲಾದೇಶ ತಂಡದ ಪರ ಬೌಲಿಂಗ್‌ನಲ್ಲಿ ಮಹೇದಿ ಹಸನ್, ತಂಝೀದ್ ಹಸನ್ ಶಕೀಬ್, ರಾಕಿಬುಲ್ ಹಸನ್ ತಲಾ ಎರಡೆರಡು ವಿಕೆಟ್ ಕಬಳಿಸಿದರೆ, ರಿಪಾನ್ ಮೊಂಡೋಲ್, ಸೈಫ್ ಹಸನ್ ಮತ್ತು ಸೌಮ್ಯ ಸರ್ಕಾರ್ ತಲಾ ಒಂದೊಂದು ವಿಕೆಟ್ ಪಡೆದರು.

212 ರನ್‌ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ ಎ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕರಾದ ಮೊಹಮ್ಮದ್ ನಯಿಮ್ ಮತ್ತು ತಂಝೀದ್ ಹಸನ್ ಮೊದಲ ವಿಕೆಟ್‌ಗೆ 12.4 ಓವರ್‌ಗಳಲ್ಲಿ 70 ರನ್‌ಗಳ ಜೊತೆಯಾಟ ನೀಡಿದರು.

ಮೊಹಮ್ಮದ್ ನಯಿಮ್ 38 ರನ್, ತಂಝೀದ್ ಹಸನ್ ಮಾತ್ರ 56 ಎಸೆತಗಳಲ್ಲಿ 8 ಬೌಂಡರಿ ಸಜಾಯದಿಂದ 51 ರನ್ ಗಳಿಸಿದರು. ಇನ್ನು ಸೈಫ್ ಹಸನ್ 22 ರನ್, ಮಹಮ್ಮದುಲ್ ಹಸನ್ ಜಾಯ್ 20 ರನ್, ಮಹೇದಿ ಹಸನ್ 12 ರನ್ ಗಳಿಸಿದ್ದು ಬಿಟ್ಟರೆ, ಉಳಿದವರಾರು ಎರಡಂಕಿ ಮೊತ್ತ ದಾಟಲಿಲ್ಲ.

ಇನ್ನು ಬೌಲಿಂಗ್‌ನಲ್ಲಿ ಭಾರತ ಎ ತಂಡದ ಪರ ನಿಶಾಂತ್ ಸಂಧು 8 ಓವರ್‌ಗಳಲ್ಲಿ 20 ರನ್ ನೀಡಿ 5 ವಿಕೆಟ್ ಗೊಂಚಲು ಪಡೆದರು. ಇನ್ನು ಮಾನವ್ ಸುತಾರ್ 8.4 ಓವರ್‌ಗಳಲ್ಲಿ 32 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ಯುರಾಜ್‌ಸಿನ್ಹ್ ದೋಡಿಯಾ ಮತ್ತು ಅಭಿಷೇಕ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.

ಭಾರತ ಎ ತಂಡದ ಪರ ಆಕರ್ಷಕ ಅರ್ಧಶತಕ ಬಾರಿಸಿದ ಯಶ್ ಧುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನು ಭಾರತ ಎ ತಂಡವು ಭಾನುವಾರ, ಜುಲೈ 23ರಂದು ನಡೆಯುವ 2023ರ ಎಸಿಸಿ ಉದಯೋನ್ಮುಖ ಏಷ್ಯಾ ಕಪ್‌ನ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎ ತಂಡದ ವಿರುದ್ಧ ಸೆಣಸಾಡಲು ಸಜ್ಜಾಗಿದೆ.

Story first published: Friday, July 21, 2023, 21:15 [IST]
Other articles published on Jul 21, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+