For Quick Alerts
ALLOW NOTIFICATIONS  
For Daily Alerts
 

Emerging Asia Cup 2024: ಅಭಿಷೇಕ್ ಶರ್ಮಾ ಬಿರುಸಿನ ಅರ್ಧಶತಕ; ಯುಎಇ ಮಣಿಸಿದ ಭಾರತ

ಒಮಾನ್‌ನಲ್ಲಿ ನಡೆಯುತ್ತಿರುವ ಐಸಿಸಿ ಉದಯೋನ್ಮುಖ ಏಷ್ಯಾಕಪ್‌ 2024ರ ಟೂರ್ನಿಯಲ್ಲಿ ಭಾರತ ಎ ತಂಡ ಗೆಲುವಿನ ಓಟವನ್ನು ಮುಂದುವರೆಸಿದೆ. ತಿಲಕ್ ವರ್ಮಾ ಅವರು ಮುನ್ನಡೆಸುತ್ತಿರುವ ಭಾರತ ತಂಡ ತನ್ನ ಎರಡನೇ ಪಂದ್ಯದಲ್ಲಿ ಯುಎಇ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಬಿರುಸಿನ ಅರ್ಧಶತಕದ ನೆರವಿನಿಂದ ಭಾರತ 55 ಎಸೆತಗಳು ಬಾಕಿ ಇರುವಂತೆಯೇ ಯುಎಇ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಈ ಟೂರ್ನಿಯಲ್ಲಿ ಭಾರತದ ಅಜೇಯ ಓಟ ಮುಂದುವರಿದಿದೆ.

Emerging Asia Cup 2024 India continue their winning run after defeating UAE

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಯುಎಇ ತಂಡ ಭಾರತ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ . ರಾಸಿಖ್ ಸಲಾಮ್ ಅವರ ಅದ್ಭುತ ಬೌಲಿಂಗ್ ದಾಳಿಗೆ ಕಂಗೆಟ್ಟ ಯುಎಇ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ ಯುಎಇ ತಂಡ 107 ರನ್‌ಗಳಿಗೆ ಆಲೌಟ್ ಆಯಿತು. ಯುಎಇ ಪರ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದ ರಾಹುಲ್ ಚೌಪ್ರಾ (50) ಅರ್ಧಶತಕ ಸಿಡಿಸಿದರು. ಇದಲ್ಲದೇ ನಾಯಕ ಬಾಸಿಲ್ ಹಮೀದ್ 22 ರನ್ ಗಳಿಸಲಷ್ಟೇ ಶಕ್ತರಾದರು. ಈ ಇಬ್ಬರು ಬ್ಯಾಟರ್‌ಗಳ ಪ್ರದರ್ಶನವನ್ನು ಬಿಟ್ಟರೆ, ಅವರಿಗಿಂತ ಹೆಚ್ಚಿನ ರನ್ ಗಳಿಸಲು ಬೇರಾವ ಬ್ಯಾಟರ್‌ಗೆ ಸಾಧ್ಯವಾಗಲಿಲ್ಲ.

ಯುಎಇ ನೀಡಿದ 107 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 5 ಓವರ್‌ಗಳಲ್ಲಿ 62 ರನ್ ಗಳಿಸಿ ಉತ್ತಮ ಆರಂಭ ಪಡೆಯಿತು. ಆದರೆ, ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಭಾರತಕ್ಕೆ ದೊಡ್ಡ ಪೆಟ್ಟು ಬಿದ್ದಿತು. ಪ್ರಭಾಸಿಮ್ರಾನ್ ಸಿಂಗ್ 8 ರನ್‌ಗಳಿಗೆ ಔಟಾದರು.

ಬಿರುಸಿನ ಅರ್ಧಶತಕ

ಪ್ರಭಾಸಿಮ್ರನ್ ಔಟಾದ ಬಳಿಕ ಅಭಿಷೇಕ್ ಶರ್ಮಾ ಸ್ಪೋಟಕ ಇನಿಂಗ್ಸ್ ಆಡುವ ಮೂಲಕ ಕೇವಲ 10 ಓವರ್ ಗಳಲ್ಲಿ ಭಾರತದ ಗೆಲುವಿಗೆ ಕಾರಣರಾದರು. ಅಭಿಷೇಕ್ ಶರ್ಮಾ 20 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು. ಮತ್ತೊಂದೆಡೆ ನಾಯಕ ತಿಲಕ್ ವರ್ಮಾ 18 ಎಸೆತಗಳಲ್ಲಿ 21 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇದಾದ ಬಳಿಕ ಅಭಿಷೇಕ್ ಶರ್ಮಾ 11ನೇ ಓವರ್‌ನಲ್ಲಿ ಭಾರತವನ್ನು ಗೆಲುವಿನ ದಡ ಸೇರಿಸಿದರು.

ಉರಿ ಬೌಲಿಂಗ್ ದಾಳಿ

ಯುಎಇ ವಿರುದ್ಧ ಭಾರತದ ಪರ 8 ಬೌಲರ್‌ಗಳು ಬೌಲಿಂಗ್ ಮಾಡಿದರು. ರಾಹುಲ್ ಚಹರ್ ಮಾತ್ರ ತಮ್ಮ ಕೋಟಾದ ಎಲ್ಲಾ ನಾಲ್ಕು ಓವರ್‌ಗಳನ್ನು ಪೂರ್ಣಗೊಳಿಸಿದರು. ಆದರೆ, ಒಂದೇ ಒಂದು ವಿಕೆಟ್ ಪಡೆಯದೆ 38 ರನ್ ಬಿಟ್ಟುಕೊಟ್ಟರು. ರಾಸಿಖ್ ಸಲಾಮ್ ಒಂದೇ ಓವರ್‌ನಲ್ಲಿ 3 ವಿಕೆಟ್ ಪಡೆಯುವ ಮೂಲಕ ಪಂದ್ಯಕ್ಕೆ ತಿರುವು ಕೊಟ್ಟರು. ಆದರೆ, ಹ್ಯಾಟ್ರಿಕ್‌ ವಂಚಿತರಾದರು. ಇದಲ್ಲದೆ ರಮಣದೀಪ್ ಸಿಂಗ್ 2, ಅಭಿಷೇಕ್ ಶರ್ಮಾ, ರಾಹುಲ್ ಕಾಂಬೋಜ್, ವೈಭವ್ ಅರೋರಾ ಮತ್ತು ನೆಹಾಲ್ ವಧೇರಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

Story first published: Monday, October 21, 2024, 22:50 [IST]
Other articles published on Oct 21, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+