ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಮರ್ಜಿಂಗ್‌ ಏಷ್ಯಾಕಪ್: ಭಾರತ ತಂಡ ಪ್ರಕಟ, ಕನ್ನಡಿಗ ಶರತ್ ನಾಯಕ

Emerging Asia Cup: BR Sharath to lead India Emerging Team

ನವದೆಹಲಿ, ಸೆಪ್ಟೆಂಬರ್ 30: ಮುಂಬರಲಿರುವ ಎಮರ್ಜಿಂಗ್ ಏಷ್ಯಾಕಪ್‌ ಟೂರ್ನಿಗಾಗಿ ಬಿಸಿಸಿಐ ಸೋಮವಾರ (ಸೆಪ್ಟೆಂಬರ್ 30) ತಂಡ ಪ್ರಕಟಿಸಿದೆ. ಕನ್ನಡಿಗ ಬಿಆರ್‌ ಶರತ್‌ ಯುವ ತಂಡವನ್ನು ಮುನ್ನಡೆಸಲಿದ್ದಾರೆ. ಈ ಟೂರ್ನಿ 2019ರ ನವೆಂಬರ್‌ನಲ್ಲಿ ಬಾಂಗ್ಲಾದೇಶದಲ್ಲಿ ನಡೆಯಲಿದೆ.

ದಾಖಲೆಗಾಗಿ ಕೊಹ್ಲಿ ಜೊತೆ ಸೇರಿದ ಪಾಕ್ ಕ್ರಿಕೆಟರ್ ಬಾಬರ್ ಅಝಾಮ್ದಾಖಲೆಗಾಗಿ ಕೊಹ್ಲಿ ಜೊತೆ ಸೇರಿದ ಪಾಕ್ ಕ್ರಿಕೆಟರ್ ಬಾಬರ್ ಅಝಾಮ್

19 ತಿಂಗಳಕಾಲ ಗಾಯದ ಸಮಸ್ಯೆಯಿಂದಾಗಿ ಕ್ರಿಕೆಟ್‌ನಿಂದ ದೂರ ಉಳಿದಿದ್ದ ರಾಜಸ್ಥಾನ ತಂಡದ ವೇಗಿ ಕಮಲೇಶ್ ನಗರ್‌ಕೋಟಿ ಚೇತರಿಸಿಕೊಂಡಿದ್ದು, ಪ್ರಕಟಿತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಅಂಡರ್ 19 ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಗೆಲುವಿನಲ್ಲಿ ಕಮಲೇಶ್ ಪ್ರಮುಖ ಪಾತ್ರ ವಹಿಸಿದ್ದರು.

ಇತಿಹಾಸ ನಿರ್ಮಿಸಿದ ಪರಾಸ್ ಖಡ್ಕ: ಕೊಹ್ಲಿ, ಸ್ಮಿತ್ ವಿಶ್ವ ದಾಖಲೆ ಧೂಳೀಪಟ!ಇತಿಹಾಸ ನಿರ್ಮಿಸಿದ ಪರಾಸ್ ಖಡ್ಕ: ಕೊಹ್ಲಿ, ಸ್ಮಿತ್ ವಿಶ್ವ ದಾಖಲೆ ಧೂಳೀಪಟ!

19ರ ಹರೆಯದ ಕಮಲೇಶ್ ನಗರ್‌ಕೋಟಿ ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ರಾಜಸ್ಥಾನ ಪರ ಚೊಚ್ಚಲ ಹ್ಯಾಟ್ರಿಕ್ ವಿಕೆಟ್ ಸಾಧನೆ ಮೆರೆದಿದ್ದರು. ಕಳೆದ ವರ್ಷ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಕಡೆಯ ಸಾರಿ ನಗರ್ಕರ್ ಮೈದಾನಕ್ಕಿಳಿದಿದ್ದರು. ಆ ಬಳಿಕ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು.

ಚೆನ್ನೈ ಸೂಪರ್ ಕಿಂಗ್ಸ್‌ ಅಂದ್ರೆ ಶ್ರೀಶಾಂತ್‌ಗೆ ಭಯಂಕರ ದ್ವೇಷವಂತೆ!ಚೆನ್ನೈ ಸೂಪರ್ ಕಿಂಗ್ಸ್‌ ಅಂದ್ರೆ ಶ್ರೀಶಾಂತ್‌ಗೆ ಭಯಂಕರ ದ್ವೇಷವಂತೆ!

ಎಮಿರ್ಜಿಂಗ್‌ ಟೀಮ್ಸ್ ಏಷ್ಯಾಕಪ್‌ಗಾಗಿ ಭಾರತ ತಂಡ
ವಿನಾಯಕ್ ಗುಪ್ತಾ (ಎನ್‌ಸಿಎ-ಬೆಂಗಳೂರು), ಆರ್ಯನ್ ಜೂಯಲ್ (ಯುಪಿಸಿಎ-ಉತ್ತರ ಪ್ರದೇಶ), ಶರತ್ ಬಿಆರ್ (ನಾಯಕ, ವಿಕೆ, ಕೆಎಸ್‌ಸಿಎ-ಬೆಂಗಳೂರು), ಚಿನ್ಮಯ್ ಸುತಾರ್ (ಎಂಸಿಎ-ಮುಂಬೈ), ಯಶ್ ರಾಥೋಡ್ (ವಿಸಿಎ-ವಿದರ್ಭ), ಅರ್ಮಾನ್ ಜಾಫರ್ (ಎಂಸಿಎ-ಮುಂಬೈ), ಸನ್ವೀರ್‌ ಸಿಂಗ್ (ಪಿಸಿಎ-ಪಂಜಾಬ್), ಕಮಲೇಶ್ ನಗರ್‌ಕೋಟಿ (ಟೀಮ್ ರಾಜಸ್ಥಾನ್), ಹೃತಿಕ್ ಶೊಕೀನ್ (ಡಿಡಿಸಿಎ-ದೆಹಲಿ), ಎಸ್‌ಎ ದೇಸಾಯ್ (ಜಿಸಿಎ-ಗುಜರಾತ್), ಅರ್ಶ್‌ದೀಪ್ ಸಿಂಗ್ (ಪಿಸಿಎ-ಪಂಜಾಬ್), ಎಸ್‌ಆರ್ ದೂಬೆ (ವಿಸಿಎ-ವಿದರ್ಭ), ಕುಮಾರ್ ಸೂರಜ್ (ಜೆಎಸ್‌ಸಿಎ-ಝಾರ್ಖಂಡ್), ಪಿ ರೇಖಡೆ (ವಿಸಿಎ-ವಿದರ್ಭ), ಕುಲ್‌ದೀಪ್ ಯಾದವ್ (ಡಿಡಿಸಿಎ-ದೆಹಲಿ).

Story first published: Monday, September 30, 2019, 23:10 [IST]
Other articles published on Sep 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X