For Quick Alerts
ALLOW NOTIFICATIONS  
For Daily Alerts
 

'ನನಗೆ ನಿಜವಾಗಿಯೂ ಇದು ದೊಡ್ಡ ಸಾಧನೆ': ಆರ್‌ಸಿಬಿ ಆಟಗಾರ ದೇವದತ್ ಪಡಿಕ್ಕಲ್

Emerging player of the IPL 2020: It’s really great achievement for me said devdutt padikkal

ಕಳೆದ ನಾಲ್ಕೈದು ವರ್ಷದಲ್ಲಿ ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಸ್ಥಳೀಯ ಆಟಗಾರನಿಗೆ ಸರಿಯಾದ ಅವಕಾಶ ಮತ್ತು ಬೆಂಬಲ ಸಿಕ್ಕಿರಲಿಲ್ಲ. 2020ರಲ್ಲಿ ಸರ್ಪ್ರೈಸ್ ಎಂಬಂತೆ ದೇವದತ್ ಪಡಿಕ್ಕಲ್‌ಗೆ ಅವಕಾಶ ಸಿಕ್ತು.

ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡು ಪಡಿಕ್ಕಲ್ ಈ ಆವೃತ್ತಿಯಲ್ಲಿ ಅದ್ಭುತ ಆಟ ಪ್ರದರ್ಶಿಸಿದರು. ಆರ್‌ಸಿಬಿ ಪರ ಅತಿ ಹೆಚ್ಚು ರನ್ ಕಲೆ ಹಾಕಿರುವ ಆಟಗಾರ ಸಹ ಎನಿಸಿಕೊಂಡರು.

ದೇವದತ್ ಪಡಿಕ್ಕಲ್ ಅಮೋಘ ಆಟಕ್ಕೆ 2020ರ 'ಎಮರ್ಜಿಂಗ್ ಪ್ಲೇಯರ್' ಪ್ರಶಸ್ತಿ ಸಹ ಲಭಿಸಿದೆ. 'ಈ ಪ್ರಶಸ್ತಿ ನನಗೆ ನಿಜವಾಗಿಯೂ ದೊಡ್ಡ ಸಾಧನೆ. ಮುಂದಿನ ಹಾದಿಯ ಬಗ್ಗೆ ನನಗೆ ಆತ್ಮವಿಶ್ವಾಸ ಹೆಚ್ಚಿಸಿದೆ' ಎಂದು ಆರ್‌ಸಿಬಿ ಪರ ಚೊಚ್ಚಲ ಐಪಿಎಲ್ ಟೂರ್ನಿ ಆಡಿದ ಪಡಿಕ್ಕಲ್ ಸಂತಸ ವ್ಯಕ್ತಪಡಿಸಿದ್ದಾರೆ.

Emerging player of the IPL 2020: It’s really great achievement for me said devdutt padikkal

20 ವರ್ಷ ದೇವದತ್ ಪಡಿಕ್ಕಲ್ ಈ ಆವೃತ್ತಿಯಲ್ಲಿ 15 ಪಂದ್ಯಗಳಲ್ಲಿ 473 ರನ್ ಬಾರಿಸಿದ್ದಾರೆ. ಇದರಲ್ಲಿ ಐದು ಅಮೋಘ ಅರ್ಧ ಶತಕ ಸೇರಿದೆ.

ಸನ್‌ರೈಸ್‌ ಹೈದರಾಬಾದ್‌ ವಿರುದ್ಧ ಚೊಚ್ಚಲ ಪಂದ್ಯ ಆಡಿದ ಪಡಿಕ್ಕಲ್ ಅರ್ಧಶತಕ ಬಾರಿಸಿ ದಾಖಲೆಯ ಪ್ರವೇಶ ಮಾಡಿದರು. ಅಲ್ಲಿಂದ ಸ್ಥಿರವಾಗಿ ಪ್ಲೇ ಆಫ್ ಹಂತದವರೆಗೂ ಆರ್‌ಸಿಬಿಗೆ ಬಲವಾಗಿ ನಿಂತರು. ಮೊದಲ ಐದು ಪಂದ್ಯಗಳಲ್ಲಿ ನಾಲ್ಕು ಅರ್ಧ ಶತಕ ಬಾರಿಸಿ ಕ್ರಿಕೆಟ್ ಪ್ರೇಮಿಗಳ ಹೃದಯ ಕದ್ದರು.

ಐಪಿಎಲ್ ಚೊಚ್ಚಲ ಆವೃತ್ತಿಯಲ್ಲಿ 400ಕ್ಕೂ ಹೆಚ್ಚು ರನ್ ಬಾರಿಸಿದ ಅನ್‌ಕ್ಯಾಪ್ ಆಟಗಾರರ ಪೈಕಿ ದೇವದತ್ ಪಡಿಕ್ಕಲ್ ಎರಡನೇಯವರು. 31.53ರ ಸರಾಸರಿಯಂತೆ 124ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಪಡಿಕ್ಕಲ್ 473 ರನ್ ಹೊಡೆದಿದ್ದಾರೆ.

Story first published: Wednesday, November 11, 2020, 14:26 [IST]
Other articles published on Nov 11, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+