For Quick Alerts
ALLOW NOTIFICATIONS  
For Daily Alerts
 

ಮೈದಾನದಲ್ಲೇ ಬಾಂಗ್ಲಾ, ಆಫ್ರಿಕಾ ಆಟಗಾರರ ಮಾರಾಮಾರಿ: ವಿಡಿಯೋ ವೈರಲ್‌

ಕ್ರಿಕೆಟ್‌ ಅಂಗಳದಲ್ಲಿ ತಂಡಗಳ ಆಟಗಾರರು ಗೆಲುವಿಗಾಗಿ ಹೋರಾಟ ನಡೆಸುತ್ತಾರೆ. ಇದಕ್ಕಾಗಿ ಎದುರಾಳಿ ತಂಡದ ಆಟಗಾರರನ್ನು ಕೆಣಕುವುದು, ಎದುರಾಳಿ ಆಟಗಾರರೊಂದಿಗೆ ವಾಗ್ವಾದ ನಡೆಯುವುದು ಕಾಮನ್‌. ಇನ್ನು ಮುಂದೆ ಹೋದಲ್ಲಿ ಎದುರಾಳಿ ತಂಡದ ಆಟಗಾರರ ಘರ್ಷಣೆ ನಡೆದಿರುತ್ತವೆ. ಆದರೆ ಬುಧವಾರ ಉದಯೋನ್ಮುಖ ಆಟಗಾರರ ಘರ್ಷಣೆ ತೀವ್ರವಾಗಿದ್ದು, ಅಂಪೈರ್‌ ಹಾಗೂ ಇತರೆ ಆಟಗಾರರು ಬಂದು ಇದನ್ನು ತಡೆಯಲು ಹರ ಸಾಹಸ ಪಟ್ಟಿದ್ದಾರೆ.

ಕ್ರಿಕೆಟ್‌ ಹವಾ ಈಗ ಶುರುವಾಗಲು ಆರಂಭವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್‌ ಮುಗಿಯುತ್ತವೆ. ಈ ಲೀಗ್‌ ಮುಗಿದ ಬಳಿಕ ಟೆಸ್ಟ್‌ ಪಂದ್ಯಗಳು ಆರಂಭವಾಗಲಿವೆ. ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಈ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇದೇ ವೇಳೆ ಹಲವು ದೇಶಗಳ ಅಂಡರ್‌ 19 ತಂಡ, "ಎ" ತಂಡಗಳು ಸಹ ಮೈದಾನದಲ್ಲಿ ಕಾದಾಟ ನಡೆಸಿವೆ. ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ನಡುವಣ ಉದಯೋನ್ಮುಖ ಆಟಗಾರರ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲೇ ಘರ್ಷಣೆ ನಡೆದಿದೆ.

Emerging Test Match Bangladesh and South Africa Players Clash

ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ನಡುವೆ ಉದಯೋನ್ಮುಖ ಆಟಗಾರರ ನಾಲ್ಕು ದಿನಗಳ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಈ ವೇಳೆ ಬುಧವಾರ (ಮೇ 28)ರಂದು ನಡೆದ ಜಗಳ ತಿವ್ರ ಸ್ವರೂಪ ಪಡೆದುಕೊಂಡಿದೆ. ಈ ಜಿದ್ದನ್ನು ಬಗೆಹರಿಸಲು ಮೈದಾನದಲ್ಲಿದ್ದ ಆಟಗಾರರು ಹಾಗೂ ಅಂಪೈರ್‌ಗಳು ಹರಸಾಹಸ ಪಟ್ಟಿದ್ದಾರೆ. ಆದರೂ ಇವರಿಬ್ಬರ ನಡುವಣ ಜಗಳ ಬಗೆ ಹರಿಯಲಿಲ್ಲ. ಬೌಲರ್‌ ಹಾಗೂ ಬ್ಯಾಟರ್‌ಗಳ ನಡುವಿನ ಫೈಟ್‌ ಕೆಲ ಹೊತ್ತ ಆತಂಕ ಸೃಷ್ಟಿಸಿತ್ತು.

ಆಗಿದ್ದೇನು?

ಬಾಂಗ್ಲಾದೇಶದಲ್ಲಿ ಉದಯೋನ್ಮುಖ ಆಟಗಾರರ ಅನಧಿಕೃತ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಈ ಟೆಸ್ಟ್‌ ಮೇ 27 ರಂದು ಆರಂಭವಾಗಿದೆ. ಈ ಟೆಸ್ಟ್‌ನ ಎರಡನೇ ದಿನದಂದು ಈ ಸನ್ನಿವೇಶ ಕಂಡು ಬಂದಿದೆ. ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬಾಂಗ್ಲಾ ಮೊದಲ ದಿನದ ಅಂತ್ಯಕ್ಕೆ 7 ವಿಕೆಟ್‌ಗಳಿಗೆ 242 ರನ್ ಗಳಿಸಿತು. ಎರಡನೇ ದಿನದಂದು ಬಾಂಗ್ಲಾ ಕೆಳ ಕ್ರಮಾಂಕದ ಆಟಗಾರರು ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಬಹುವಾಗಿ ಕಾಡಿದರು. 8ನೇ ವಿಕೆಟ್‌ಗೆ 45 ರನ್‌, 9ನೇ ವಿಕೆಟ್‌ಗೆ 67 ರನ್‌ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು ಹಿಗ್ಗಿಸಿದ್ದರು. ಈ ವೇಳೆ ಬಾಂಗ್ಲಾ ಉತ್ತಮ ಸ್ಥಿತಿಯಲ್ಲಿತ್ತು.

ಬಾಂಗ್ಲಾದೇಶದ 10ನೇ ಕ್ರಮಾಂಕದ ಬ್ಯಾಟರ್‌ ಮೊಂಡೋಲ್ 105ನೇ ಓವರ್‌ನಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ ಬೌಲರ್‌ ತ್ಸೆಪೊ ನ್ಟುಲಿ ಅವರಿಗೆ ಸಿಕ್ಸರ್ ಬಾರಿಸಿದರು. ಇದೇ ವೇಳೆ ಬೌಲರ್ ಬ್ಯಾಟ್ಸ್‌ಮನ್ ಬಳಿಗೆ ಬಂದರು ಮತ್ತು ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಯಿತು. ಅಂಪೈರ್ ಕೂಡ ಅವರ ಬಳಿಗೆ ಓಡಿ ಬಂದರು. ಬೌಲರ್ ಬ್ಯಾಟ್ಸ್‌ಮನ್‌ನ ಹೆಲ್ಮೆಟ್ ಹಿಡಿದು ಎರಡು ಬಾರಿ ಎಳೆದರು, ಆ ಸಮಯದಲ್ಲಿ ಬ್ಯಾಟ್ಸ್‌ಮನ್ ಬ್ಯಾಟ್ ಎತ್ತಿ ಆಕ್ರೋಶವನ್ನು ಹೊರ ಹಾಕಿದರು.

ಬೌಲರ್‌ ಕೋಪದಿಂದ ಬ್ಯಾಟರ್‌ ಕಡೆಗೆ ಬರುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಇದನ್ನು ಕಂಡ ಅಂಪೈರ್‌ ಸಹ ಅವರೆಡೆಗೆ ಓಡಿ ಬಂದರು. ಬೌಲರ್‌ ಕೋಪದಿಂದ ಬ್ಯಾಟರ್‌ನನ್ನು ತಳ್ಳುತ್ತಾರೆ. ಬ್ಯಾಟರ್‌ನ ಹೆಲ್ಮೆಟ್‌ ಗ್ರಿಲ್‌ ಹಿಡಿದ ಬೌಲರ್ ಎಳೆದಾಡಿದರು. ಇದೇ ವೇಳೆ ಬ್ಯಾಟರ್‌ ಬ್ಯಾಟ್ ಎತ್ತುತ್ತಿರುವ ವಿಡಿಯೋ ಕಂಡು ಬಂದಿದೆ. ಈ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Story first published: Thursday, May 29, 2025, 12:52 [IST]
Other articles published on May 29, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+