Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Emerging Women's Asia Cup 2023: ಶ್ವೇತಾ ಶೆಹ್ರಾವತ್ ನಾಯಕತ್ವದ ಭಾರತ ಎ ತಂಡ ಪ್ರಕಟಿಸಿದ ಬಿಸಿಸಿಐ

ಮುಂಬರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಉದಯೋನ್ಮುಖ ಮಹಿಳಾ ಏಷ್ಯಾ ಕಪ್ 2023ಕ್ಕಾಗಿ ಭಾರತ ಎ (ಉದಯೋನ್ಮುಖ) ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ. ಈ ಪಂದ್ಯಾವಳಿಯು ಜೂನ್ 12ರಿಂದ ಹಾಂಗ್‌ಕಾಂಗ್‌ನಲ್ಲಿ ಪ್ರಾರಂಭವಾಗಲಿದೆ.

ಜೂನ್ 13ರಂದು ಟಿನ್ ಕ್ವಾಂಗ್ ರೋಡ್ ರಿಕ್ರಿಯೇಷನ್ ಮೈದಾನದಲ್ಲಿ ಹಾಂಗ್‌ಕಾಂಗ್‌ ವಿರುದ್ಧದ ಪಂದ್ಯದೊಂದಿಗೆ ಭಾರತ ಎ ಮಹಿಳಾ ತಂಡ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

Emerging Womens Asia Cup 2023

ಮಹಿಳಾ ಏಷ್ಯಾ ಕಪ್ 2023ರ ಪಂದ್ಯಾವಳಿಯಲ್ಲಿ ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಎ ತಂಡ ಎ ಗುಂಪಿನ ಭಾಗವಾಗಿದ್ದು, ಗುಂಪಿನಲ್ಲಿ ಹಾಂಗ್‌ಕಾಂಗ್‌, ಥಾಯ್ಲೆಂಡ್ ಎ ಮತ್ತು ಪಾಕಿಸ್ತಾನ ಎ ತಂಡಗಳು ಇವೆ.

ಮತ್ತೊಂದೆಡೆ, ಬಿ ಗುಂಪಿನಲ್ಲಿ ಬಾಂಗ್ಲಾದೇಶ ಎ, ಶ್ರೀಲಂಕಾ ಎ, ಮಲೇಷ್ಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳನ್ನು ಒಳಗೊಂಡಿದೆ. ಮಹಿಳಾ ಏಷ್ಯಾ ಕಪ್ 2023ರ ಪಂದ್ಯಾವಳಿಯ ಫೈನಲ್ ಪಂದ್ಯ ಜೂನ್ 21ರಂದು ನಡೆಯಲಿದೆ.

Emerging Womens Asia Cup 2023

ಉದಯೋನ್ಮುಖ ಭಾರತ ಎ ಮಹಿಳಾ ತಂಡಕ್ಕೆ ಶ್ವೇತಾ ಶೆಹ್ರಾವತ್ ಸಾರಥ್ಯ

ಭಾರತ ಎ ಮಹಿಳಾ ತಂಡ ಲೀಗ್ ಹಂತದಲ್ಲಿ ಮೂರು ಪಂದ್ಯಗಳನ್ನು ಆಡಲಿದೆ. ಭಾರತ ಜೂನ್ 13ರಂದು ಹಾಂಗ್‌ಕಾಂಗ್, ಜೂನ್ 15ರಂದು ಥಾಯ್ಲೆಂಡ್ ಎ ತಂಡದ ವಿರುದ್ಧ ಮತ್ತು ಜೂನ್ 17ರಂದು ಪಾಕಿಸ್ತಾನ ಎ ತಂಡದ ವಿರುದ್ಧ ಸೆಣಸಲಿದೆ.

2023ರ ಮಹಿಳಾ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ಮಹಿಳಾ ತಂಡವು ಯಾವ ರೀತಿಯ ಪ್ರದರ್ಶನ ನೀಡಲಿದೆ ಮತ್ತು ಅವರು ಪ್ರಶಸ್ತಿ ಗೆಲ್ಲಲು ಸಮರ್ಥರಾಗಿದ್ದಾರೆಯೇ ಎಂಬುದನ್ನು ನೋಡಲು ಕುತೂಹಲಕಾರಿಯಾಗಿದೆ.

ಭಾರತೀಯ ಮಹಿಳಾ ಎ ತಂಡವನ್ನು ಪ್ರಕಟಿಸಿದ ಬಿಸಿಸಿಐ ಶ್ವೇತಾ ಸೆಹ್ರಾವತ್ ಅವರನ್ನು ತಂಡದ ನಾಯಕಿ ಎಂದು ಘೋಷಿಸಿದೆ. ಸೌಮ್ಯ ತಿವಾರಿ ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಗಮನಾರ್ಹವಾಗಿ, ಮಹಿಳಾ ಪ್ರೀಮಿಯರ್ ಲೀಗ್ (WPL)ನ ಉದ್ಘಾಟನಾ ಆವೃತ್ತಿಯಲ್ಲಿ ಶ್ವೇತಾ ಸೆಹ್ರಾವತ್ ಯುಪಿ ವಾರಿಯರ್ಜ್ ಪರ ಆಡಿದ್ದರು. ಭಾರತೀಯ ತಂಡದಲ್ಲಿ ಕರ್ನಾಟಕದ ಶ್ರೇಯಾಂಕಾ ಪಾಟೀಲ್ ಸೇರಿದಂತೆ ಕನಿಕಾ ಅಹುಜಾ ಮತ್ತು ಇತರ ಆಟಗಾರ್ತಿಯರನ್ನು ಸಹ ಒಳಗೊಂಡಿದೆ. ಇನ್ನು ಭಾರತೀಯ ಮಹಿಳಾ ತಂಡವು ಮುಖ್ಯ ಕೋಚ್ ನೂಶಿನ್ ಅಲ್ ಖದೀರ್ ಅವರ ಮಾರ್ಗದರ್ಶನದಲ್ಲಿ ಪ್ರಯಾಣ ಬೆಳೆಸಲಿದೆ.

ತಂಡದಲ್ಲಿರುವ ಅನೇಕ ಆಟಗಾರ್ತಿಯರು ಇತ್ತೀಚೆಗೆ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) 2023ರ ಉದ್ಘಾಟನಾ ಋತುವಿನಲ್ಲಿ ಆಡದವರಾಗಿದ್ದಾರೆ ಮತ್ತು ಅನೇಕ ಅದ್ಭುತ ಪ್ರದರ್ಶನಗಳನ್ನು ನೀಡಿದ್ದಾರೆ. ಶ್ವೇತಾ ಸೆಹ್ರಾವತ್ ಅವರ ನಾಯಕತ್ವದಲ್ಲಿ ಭಾರತ ಎ ತಂಡವು ಉದಯೋನ್ಮುಖ ಮಹಿಳಾ ಏಷ್ಯಾ ಕಪ್‌ನ ಚಾಂಪಿಯನ್ ಆಗಲು ಎದುರು ನೋಡುತ್ತಿದೆ.

ಭಾರತ ಎ ಉದಯೋನ್ಮುಖ ಮಹಿಳಾ ತಂಡ

ಶ್ವೇತಾ ಸೆಹ್ರಾವತ್ (ನಾಯಕಿ), ಸೌಮ್ಯ ತಿವಾರಿ (ಉಪನಾಯಕಿ), ತ್ರಿಶಾ ಗೊಂಗಡಿ, ಮುಸ್ಕಾನ್ ಮಲಿಕ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಉಮಾ ಚೆಟ್ರಿ (ವಿಕೆಟ್ ಕೀಪರ್), ಮಮತಾ ಮಡಿವಾಳ (ವಿಕೆಟ್ ಕೀಪರ್), ಟಿಟಾಸ್ ಸಧು, ಯಶಸ್ರಿ ಎಸ್, ಕಶ್ವೀ ಗೌತಮ್, ಪಾರ್ಶವಿ ಚೋಪ್ರಾ, ಮನ್ನತ್ ಕಶ್ಯಪ್, ಬಿ ಅನುಷಾ.

Story first published: Friday, June 2, 2023, 14:42 [IST]
Other articles published on Jun 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+