ಇಂಗ್ಲೆಂಡ್ ವಿರುದ್ಧ ಎಡವಿದ ಆಸ್ಟ್ರೇಲಿಯಾ: ಹೈಸ್ಕೋರಿಂಗ್ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ರೋಚಕ ಗೆಲುವು

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಟಿ20 ಸರಣಿಯಲ್ಲಿ ಮುಖಾಮುಖಿಯಾಗಿದ್ದು ಮೊದಲ ಪಂದ್ತ ಅಂತ್ಯವಾಗಿದೆ. ರೋಚಕವಾಗಿ ನಡೆದ ಈ ಸೆಣೆಸಾಟದಲ್ಲಿ ಇಂಗ್ಲೆಂಡ್ ತಂಡ ಆತಿಥೇಯ ಆಸಿಸ್ ಪಡೆಗೆ ಸೋಲಿನ ರುಚಿ ತೋರಿಸುವಲ್ಲಿ ಯಶಸ್ವಿಯಾಗಿದೆ. ಎರಡು ತಂಡಗಳು ಕೂಡ ಭಾರೀ ಪೈಪೋಟಿ ನಡೆಸಿದ್ದು ಅಂತಿಮವಾಗಿ ಇಂಗ್ಲೆಂಡ್ ತಂಡ 8 ರನ್‌ಗಳ ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸರಣಿ ಇದಾಗಿದ್ದು ಈ ಸರಣಿಯಲ್ಲಿ ಗೆದ್ದು ಆತ್ಮವಿಶ್ವಾಸದೊಂದಿಗೆ ವಿಶ್ವಕಪ್‌ಗೆ ಕಣಕ್ಕಿಳಿಯಲು ಎರಡು ತಂಡಗಳು ಕೂಡ ರೋಚಕ ಕಾದಾಟಕ್ಕೆ ಇಳಿದಿದೆ. ಇದರಲ್ಲಿ ಮೊದಲ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ ನಿರಾಸೆಯಾಗಿದೆ. ಆದರೆ ಈ ಪಂದ್ಯಲ್ಲಿ ಆಸಿಸ್ ಪಡೆ ಕೂಡ ಗೆಲ್ಲುವ ಎಲ್ಲಾ ಅವಕಾಶಗಳನ್ನು ಹೊಂದಿತ್ತು ಎಂಬುದನ್ನು ಮರೆಯುವಂತಿಲ್ಲ. ಅಂತಿಮ ಹಂತದಲ್ಲಿ ಎಡವಿದ ಕಾರಣ ಆಸಿಸ್ ಪಡೆ ಸೋಲು ಅನುಭವಿಸಬೇಕಾಯಿತು.

ಆರಂಭದಿಂದಲೇ ಅಬ್ಬರಿಸಿದ ಇಂಗ್ಲೆಂಡ್
ಈ ಪಂದ್ಯದಲ್ಲಿ ಆರಂಭದಿಂದಲೇ ಇಂಗ್ಲೆಂಡ್ ತಂಡ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಲು ಆರಂಬಿಸಿತ್ತು. ಆರಂಭಿಕ ಆಟಗಾರರಾದ ಜೋಸ್ ಬಟ್ಲರ್ ಹಾಗೂ ಅಲೆಕ್ಸ್ ಹೇಲ್ಸ್ ಜೋಡಿ ಮೊದಲ ವಿಕೆಟ್‌ಗೆ ಕೇವಲ 11.2 ಓವರ್‌ಗಳಲ್ಲಿ 132 ರನ್‌ಗಳನ್ನು ಪೇರಿಸಿ ಬೇರ್ಪಟ್ಟಿತ್ತು. ಆರಂಭಿಕ ಆಟಗಾರರಿಬ್ಬರು ಕೂಡ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. 32 ಎಸೆತಗಳಲ್ಲಿ 68 ರನ್‌ಗಳಿಸಿದ ಜೋಸ್ ಬಟ್ಲರ್ ನಥನ್ ಎಲ್ಲೀಸ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಈ ಜೋಡಿ ಬೇರ್ಪಟ್ಟಿತು. ಹೇಲ್ಸ್ ಆಟ ಮತ್ತು ಮುಂದಿವರಿದಿದ್ದು 15.2 ಓವರ್‌ಗಳ ವರೆಗೆ ತಮ್ಮ ಆಟವನ್ನು ಮುಂದುವರಿಸಿದರು. ಈ ಸಂದರ್ಭದಲ್ಲಿ ರಿಚರ್ಡ್ಸನ್‌ಗೆ ವಿಕೆಟ್ ಒಪ್ಪಿಸಿದಾಗ ಹೇಲ್ಸ್ 84 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು.

ಇತರ ಆಟಗಾರರಿಂದ ನೀರಸ ಪ್ರದರ್ಶನ
ಉತ್ತಮ ಆರಂಭವನ್ನು ಪಡೆದ ಇಂಗ್ಲೆಂಡ್ ತಂಡ ಪರವಾಗಿ ಮಧ್ಯಮ ಕ್ರಮಾಂಕದಿಂದ ನಿರೀಕ್ಷಿತ ಪ್ರದರ್ಶನ ಬಾರಲೇ ಇಲ್ಲ. ಹಾಗಿದ್ದರೂ ಇಂಗ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 208 ರನ್‌ಗಳನ್ನು ಗಳಿಸಿ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಬೃಹತ್ ಗುರಿಯನ್ನು ನಿಗದಿಪಡಿಸುವಲ್ಲಿ ಯಶಸ್ವಿಯಾಯಿತು. ಆಸ್ಟ್ರೇಲಿಯಾ ಪರವಾಗಿ ನಥನ್ ಎಲ್ಲೀಸ್ ಮೂರು ವಿಕೆಟ್ ಕಿತ್ತು ಮಿಂಚಿದರು.

ಆಸಿಸ್ ಹೋರಾಟದಲ್ಲಿ ಮಿಂಚಿದ ವಾರ್ನರ್
ಇಂಗ್ಲೆಂಡ್ ತಂಡ ನಿಗದಿಪಡಿಸಿದ ಬೃಹತ್ ಗುರಿಯನ್ನು ಬೆನ್ನಟ್ಟುವ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ಪರವಾಗಿ ಡೇವಿಡ್ ವಾರ್ನರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ ತಮ್ಮ ಉತ್ತಮ ಫಾರ್ಮ್ ಮುಂದುವರಿಸಿದ್ದಾರೆ. ಮಿಚೆಲ್ ಮಾರ್ಶ್ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಕೂಡ ಕ್ರಮವಾಗಿ 36 ಹಾಗೂ 35 ರನ್‌ಗಳ ಕೊಡುಗೆ ನೀಡಿದರು. ಡೇವೊಡ್ ವಾರ್ನರ್ ಮಾತ್ರ 44 ಎಸೆತಗಳಲ್ಲಿ 73 ರನ್‌ಗಳನ್ನು ಬಾರಿಸಿ ವಿಕೆಟ್ ಕಳೆದುಕೊಂಡರು. ಅಂತಿಮ ಹಂತದಲ್ಲಿ ಮ್ಯಾಥ್ಯೂ ವೇಡ್ ಫಿನಿಷರ್ ಜವಾಬ್ಧಾರಿಯನ್ನು ಈ ಪಂದ್ಯದಲ್ಲಿ ನಿಭಾಯಿಸುವಲ್ಲಿ ವಿಫಲವಾದರು. 21 ರನ್‌ಗಳ ಕೊಡುಗೆಯನ್ನು ವೇಡ್ ನೀಡಿದರಾದರೂ ಪಂದ್ಯವನ್ನು ಗೆಲ್ಲಿಸುವಲ್ಲಿ ವಿಫಲವಾದರು. ಅಂತಿಮ ಓವರ್‌ನಲ್ಲಿ ಸ್ಯಾಮ್ ಕರನ್ ಪರಿಣಾಮಕಾರಿಯಾಗಿ ಬೌಲಿಂಗ್ ಪ್ರದರ್ಶನ ನಿಡಿದ ಕಾರಣದಿಂದಾಗಿ ಆಸ್ಟ್ರೇಲಿಯಾ ತಂಡ 200 ರನ್‌ಗಳಿಗೆ ತನ್ನ ಆಟವನ್ನು ಮುಗಿಸಿತು.

ಇತ್ತಂಡಗಳ ಆಡುವ ಬಳಗ
ಆಸ್ಟ್ರೇಲಿಯಾ ಪ್ಲೇಯಿಂಗ್ XI: ಡೇವಿಡ್ ವಾರ್ನರ್, ಆರೋನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಮಾರ್ಕಸ್ ಸ್ಟೋನಿಸ್, ಟಿಮ್ ಡೇವಿಡ್, ಕ್ಯಾಮೆರಾನ್ ಗ್ರೀನ್, ಮ್ಯಾಥ್ಯೂ ವೇಡ್ (WK), ಡೇನಿಯಲ್ ಸ್ಯಾಮ್ಸ್, ನಾಥನ್ ಎಲ್ಲಿಸ್, ಕೇನ್ ರಿಚರ್ಡ್ಸನ್, ಮಿಚೆಲ್ ಸ್ವೆಪ್ಸನ್
ಬೆಂಚ್: ಆಷ್ಟನ್ ಅಗರ್, ಸೀನ್ ಅಬಾಟ್, ಜೋಶ್ ಇಂಗ್ಲಿಸ್, ಸ್ಟೀವನ್ ಸ್ಮಿತ್
ಇಂಗ್ಲೆಂಡ್ ಪ್ಲೇಯಿಂಗ್ XI: ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಸ್ಯಾಮ್ ಕುರಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ರೀಸ್ ಟೋಪ್ಲಿ, ಮಾರ್ಕ್ ವುಡ್
ಬೆಂಚ್: ಫಿಲಿಪ್ ಸಾಲ್ಟ್, ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ವಿಲ್ಲಿ, ಕ್ರಿಸ್ ಜೋರ್ಡಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications