Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ashes 2023: ಜೋ ರೂಟ್ ಭರ್ಜರಿ ಶತಕ; ಬೃಹತ್ ಮೊತ್ತ ಗಳಿಸಿ ಇಂಗ್ಲೆಂಡ್ ಡಿಕ್ಲೇರ್

ಶುಕ್ರವಾರ, ಜೂನ್ 16ರಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಬಹು ನಿರೀಕ್ಷಿತ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ 2023ರ ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಿದೆ. ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಕಲೆ ಹಾಕಿ ಡಿಕ್ಲೇರ್ ಮಾಡಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ 78 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 393 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ವೇಳೆ ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟ್ಸ್‌ಮನ್ ಜೋ ರೂಟ್ ಭರ್ಜರಿ ಶತಕ ಬಾರಿಸಿದರು.

ENG vs AUS Ashes 2023

ಇಂಗ್ಲೆಂಡ್ ಪರ ಆರಂಭಿಕರಾದ ಬೆನ್ ಡಕೆಟ್ ಮತ್ತು ಝಾಕ್ ಕ್ರಾಲಿ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಆರಂಭಿಸಿದರು. ಒಂದು ವರ್ಷಕ್ಕೂ ಹೆಚ್ಚು ಕಾಲ ಇಂಗ್ಲೆಂಡ್ ಆಡುತ್ತಿರುವ "ಬಜ್‌ಬಾಲ್' ಕ್ರಿಕೆಟ್ ಶೈಲಿಯನ್ನು ಮುಂದುವರೆಸಿದರು.

12 ರನ್ ಗಳಿಸಿ ಆಡುತ್ತಿದ್ದ ಬೆನ್ ಡಕೆಟ್ ಮೊದಲ ವಿಕೆಟ್ ರೂಪದಲ್ಲಿ ಹೊರನಡೆದರು. ಝಾಕ್ ಕ್ರಾಲಿ ಬಿಗ್ ಶಾಟ್ ಆಡುವುದನ್ನು ಮುಂದುವರೆಸಿದರು ಮತ್ತು 73 ಎಸೆತಗಳಲ್ಲಿ 7 ಬೌಂರಿಗಳ ಸಮೇತ 61 ರನ್ ಗಳಿಸಿದರು.

ನಂತರ ಒಲ್ಲಿ ಪೋಪ್ ನಿಧಾನಗತಿ ಬ್ಯಾಟಿಂಗ್ ಮೊರೆ ಹೋದರು. ಝಾಕ್ ಕ್ರಾಲಿ ಮತ್ತು ಬೆನ್ ಸ್ಟೋಕ್ಸ್ ತ್ವರಿತವಾಗಿ ಔಟಾಗುವುದರೊಂದಿಗೆ ಇಂಗ್ಲೆಂಡ್ ಸಂಕಷ್ಟ ಪರಿಸ್ಥಿತಿ ಎದುರಿಸಬೇಕಾಗಿ ಬಂತು. ಒಲ್ಲಿ ಪೋಪ್ 31 ರನ್ ಗಳಿಸಿದರೆ, ಬೆನ್ ಸ್ಟೋಕ್ಸ್ ಕೇವಲ 1 ರನ್ ಗಳಿಸಿದರು.

ENG vs AUS Ashes 2023

ನಂತರ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಸ್ಥಿರತೆ ಒದಗಿಸಿದರು ಮಾತ್ರವಲ್ಲದೆ, ವೇಗಾವಗಿ ರನ್ ಗಳಿಸಲು ಉತ್ತಮ ಜೊತೆಯಾಟ ನೀಡಿದರು. 32 ರನ್ ಗಳಿಸಿ ಹ್ಯಾರಿ ಬ್ರೂಕ್ ನಿರ್ಗಮಿಸಿದರು.

ಆ ಬಳಿಕ ಜಾನಿ ಬೈರ್‌ಸ್ಟೋವ್ ಮತ್ತು ಜೋ ರೂಟ್‌ ಜೋಡಿ ಮಧ್ಯಮ ಕ್ರಮಾಂಕದಲ್ಲಿ 121 ರನ್‌ಗಳ ದೊಡ್ಡ ಜೊತೆಯಾಟ ನೀಡಿದರು. ಜಾನಿ ಬೈರ್‌ಸ್ಟೋವ್ 78 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ 78 ರನ್ ಗಳಿಸಿದರು.

ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ, ನೆಲಕಚ್ಚಿ ಆಡಿದ ಜೋ ರೂಟ್‌ 152 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ 118 ರನ್ ಬಾರಿಸಿದರು. ಉಳಿದಂತೆ ಮೊಯಿನ್ ಅಲಿ 18 ರನ್, ಸ್ಟುವರ್ಟ್ ಬ್ರಾಡ್ 16 ರನ್ ಮತ್ತು ಒಲ್ಲೀ ರಾಬಿನ್ಸನ್ 17 ರನ್‌ಗಳ ಕೊಡುಗೆ ನೀಡಿದರು.

ಪ್ರವಾಸಿ ಆಸ್ಟ್ರೇಲಿಯಾ ತಂಡದ ಪರ ಜೋಶ್ ಹೇಜಲ್‌ವುಡ್‌ 2 ವಿಕೆಟ್, ನಾಥನ್ ಲಿಯಾನ್ 4 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಕ್ಯಾಮೆರಾನ್ ಗ್ರೀನ್ ಮತ್ತು ಸ್ಕಾಟ್ ಬೋಲ್ಯಾಂಡ್ ತಲಾ ಒಂದೊಂದು ವಿಕೆಟ್ ಪಡೆದರು.

ಇನ್ನು ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ 4 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 14 ರನ್ ಗಳಿಸಿದೆ. ಆರಂಭಿಕರಾದ ಡೇವಿಡ್ ವಾರ್ನರ್ 8 ರನ್ ಮತ್ತು ಉಸ್ಮಾನ್ ಖವಾಜಾ 4 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Story first published: Friday, June 16, 2023, 23:28 [IST]
Other articles published on Jun 16, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+