For Quick Alerts
ALLOW NOTIFICATIONS  
For Daily Alerts
 

Ashes 2023: ಈತ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿ ಆಶಸ್‌ಗೆ ಮರಳಿದ್ದು ಅಚ್ಚರಿ!; ಇಂಗ್ಲೆಂಡ್ ಮಾಜಿ ನಾಯಕ

ಶುಕ್ರವಾರ, ಜೂನ್ 16ರಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗುವ ಆಶಸ್ ಸರಣಿ ಮೊದಲ ಟೆಸ್ಟ್‌ ಪಂದ್ಯದಲ್ಲಿ ಸ್ಪಿನ್ ಆಲ್‌ರೌಂಡರ್ ಮೊಯಿನ್ ಅಲಿ ಅವರನ್ನು ಇಂಗ್ಲೆಂಡ್‌ನ ಆಡುವ 11ರ ಬಳಗದಲ್ಲಿ ಸೇರಿಸಿಕೊಂಡಿದ್ದರ ಬಗ್ಗೆ ಮಾಜಿ ನಾಯಕ ಮೈಕಲ್ ಅಥರ್ಟನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ 2021ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದ ಮೊಯಿನ್ ಅಲಿ ಅವರು ಅನಂತರ ಒಂದೂ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಇದೀಗ ನೇರವಾಗಿ ಆಶಸ್ ಸರಣಿಗೆ ಮರಳಿದ್ದು, ತಾವು ಇದರಿಂದ ಸಂತೋಷವಾಗಿಲ್ಲ ಎಂದಿದ್ದಾರೆ.

ENG vs AUS: England Former Captain Michael Atherton Surprised On Moeen Alis Return In Ashes 2023


ಸ್ಕೈ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಮೈಕಲ್ ಅಥರ್ಟನ್, "ನಾನು ಮೊಯಿನ್ ಅಲಿಯನ್ನು ಆಯ್ಕೆ ಮಾಡುತ್ತಿರಲಿಲ್ಲ. ಏಕೆಂದರೆ, ಅವರು ಪಂದ್ಯವನ್ನು ನಿರ್ಧರಿಸಬಲ್ಲ ಆಟಗಾರನಲ್ಲ. ಮೊಯಿನ್ ಅಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು ಮತ್ತು ಸೆಪ್ಟೆಂಬರ್ 2021ರಿಂದ ಆಡದಿರುವುದನ್ನು ಪರಿಗಣಿಸಿ ಅವರ ಆಯ್ಕೆಯನ್ನು ಆಶ್ಚರ್ಯಕರ," ಎಂದು ವಿವರಿಸಿದ್ದಾರೆ.

ಮೊಯಿನ್ ಅಲಿ ಅವರು ಇಂಗ್ಲೆಂಡ್ ತಂಡದ ಪಾಕಿಸ್ತಾನ ಪ್ರವಾಸಕ್ಕೂ ಮುನ್ನ ಕೋಚ್ ಬ್ರೆಂಡನ್ ಮೆಕಲಮ್ ಅವರೊಂದಿಗೆ ಸಂಭಾವ್ಯ ಪುನರಾಗಮನದ ಬಗ್ಗೆ ಚರ್ಚಿಸಿದ್ದರು. ಆದರೆ ಅಂತಿಮವಾಗಿ ಟೆಸ್ಟ್ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಿಂದ ದೂರವಿರಲು ನಿರ್ಧರಿಸಿದರು ಎಂದು ಮೈಕಲ್ ಅಥರ್ಟನ್ ಉಲ್ಲೇಖಿಸಿದ್ದಾರೆ.
ENG vs AUS: England Former Captain Michael Atherton Surprised On Moeen Alis Return In Ashes 2023

ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ಅಥರ್ಟನ್ ಅವರು ಮೊಯಿನ್ ಅಲಿಯ ಅನುಮಾನಗಳನ್ನು ಒಪ್ಪಿಕೊಂಡಿದ್ದು, ಆಸ್ಟ್ರೇಲಿಯಾ ವಿರುದ್ಧ ಉನ್ನತ ಫಾರ್ಮ್‌ಗೆ ಮರಳಿದರೆ ಅವರ ಸೇರ್ಪಡೆಯ ಸಂಭಾವ್ಯ ಮೌಲ್ಯವನ್ನು ಗುರುತಿಸಬಹುದು ಎಂದು ತಿಳಿಸಿದರು.

ಮೈಕಲ್ ಅಥರ್ಟನ್ ಪ್ರಕಾರ, "ಮೊಯಿನ್ ಅಲಿ ಅತ್ಯುತ್ತಮ ಪ್ರದರ್ಶನ ನೀಡಿದರೆ, ಇಂಗ್ಲೆಂಡ್ ತಂಡಕ್ಕೆ ವಿಶೇಷವಾಗಿ, ಬ್ಯಾಟಿಂಗ್ ವಿಭಾಗದಲ್ಲಿ ಹೆಚ್ಚಿನ ಮೌಲ್ಯವನ್ನು ನೀಡಬಹುದು. ಪ್ರಸ್ತುತ ತಂಡದ ಅವಶ್ಯಕತೆಗಳಿಗೆ ಸರಿಹೊಂದುವ ಬ್ಯಾಟಿಂಗ್ ಕೌಶಲ್ಯವನ್ನು ಮೊಯಿನ್ ಅಲಿ ಹೊಂದಿದ್ದಾರೆ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ ಪರ ಹೆಚ್ಚಿನ ವಿಕೆಟ್‌ಗಳನ್ನು ಪಡೆದಿದ್ದಾರೆ," ಎಂದು ಹೇಳಿದರು.

ಮೊಯಿನ್ ಅಲಿ ನಿವೃತ್ತಿಗೂ ಮುನ್ನ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಾಧಾರಣ ದಾಖಲೆಯನ್ನು ಹೊಂದಿದ್ದರು ಎಂಬುದನ್ನು ಮೈಕಲ್ ಅಥರ್ಟನ್ ಗಮನ ಸೆಳೆದರು.

ಎಡ್ಜ್‌ಬಾಸ್ಟನ್‌ನಲ್ಲಿ ನಿರೀಕ್ಷಿತವಾಗಿ ಮೊದಲ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರಲಿದೆ. ವಿಶೇಷವಾಗಿ ಇಂಗ್ಲೆಂಡ್ ತಂಡದಲ್ಲಿ ಸ್ಟುವರ್ಟ್ ಬ್ರಾಡ್ ಉಪಸ್ಥಿತಿ ಮತ್ತು ಸ್ಥಳೀಯ ಆಟಗಾರ ಮೊಯಿನ್ ಅಲಿ ಮರಳಿರುವುದು. ಮೈದಾನದಲ್ಲಿ ಸೇರುವ ಅಭಿಮಾನಿಗಳು ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಮೈಕಲ್ ಅಥರ್ಟನ್ ಹೇಳಿದರು.

ಸ್ಪಿನ್-ಆಲ್‌ರೌಂಡರ್ ಮೊಯಿನ್ ಅಲಿ ಆಸ್ಟ್ರೇಲಿಯಾ ವಿರುದ್ಧ 11 ಟೆಸ್ಟ್‌ಗಳಲ್ಲಿ 20 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ ಎರಡು ಅರ್ಧ ಶತಕಗಳು ಸೇರಿದಂತೆ 25.05 ಸರಾಸರಿಯಲ್ಲಿ 476 ರನ್ ಗಳಿಸಿದ್ದಾರೆ. ಅಲಿ ಇಂಗ್ಲೆಂಡ್‌ನಲ್ಲಿ ಉತ್ತಮ ಅಂಕಿ-ಅಂಶಗಳನ್ನು ಹೊಂದಿದ್ದಾರೆ. ಅಲ್ಲಿ 35 ಟೆಸ್ಟ್‌ಗಳಲ್ಲಿ 104 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಪ್ರಸ್ತುತ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಲಿಯಾಮ್ ಡಾಸನ್ ಅಥವಾ ವಿಲ್ ಜ್ಯಾಕ್ಸ್ ಅವರಂತಹ ಆಟಗಾರರನ್ನು ಆಯ್ಕೆ ಮಾಡಬಹುದಿತ್ತು ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ಅಥರ್ಟನ್ ಸಲಹೆ ನೀಡಿದ್ದಾರೆ.

Story first published: Thursday, June 15, 2023, 15:56 [IST]
Other articles published on Jun 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+