Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇತಿಹಾಸದ ಅತ್ಯಂತ ಕೆಟ್ಟ ಡಿಆರ್‌ಎಸ್ ತೆಗೆದುಕೊಂಡಿತಾ ಬಾಂಗ್ಲಾದೇಶ!: ಟ್ವಿಟ್ಟರ್‌ನಲ್ಲಿ ಭಾರೀ ಟ್ರೋಲ್: ವಿಡಿಯೋ

Eng vs Bang 2nd ODI: After ball hits middle of bat Bangladesh DRS for LBW: Video

ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ತಂಡಗಳು ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಿದ್ದು ಎರಡನೇ ಪಂದ್ಯ ಢಾಕಾದ ಶೇರ್ ಬಾಂಗ್ಲಾ ನ್ಯಾಶನಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿರುವ ಪ್ರವಾಸಿ ಇಂಗ್ಲೆಂಡ್ ತಂಡ ಬಾಂಗ್ಲಾದೇಶಕ್ಕೆ ಬೃಹತ್ ಮೊತ್ತದ ಗುರಿ ನೀಡಿದೆ. ಜೇಸನ್ ರಾಯ್ ಭರ್ಜರಿ ಶತಕ ಹಾಗೂ ಜೋಸ್ ಬಟ್ಲರ್ ಅರ್ಧ ಶತಕದ ನೆರವಿನಿಂದಾಗಿ ಇಂಗ್ಲೆಂಡ್ ತಂಡ 7 ವಿಕೆಟ್ ಕಳೆದುಕೊಂಡು 326 ರನ್‌ಗಳಿಸಿದೆ.

ಆದರೆ ಈ ಪಂದ್ಯದಲ್ಲಿ ಬಾಂಗ್ಲಾದೇಶ ತೆಗೆದುಕೊಂಡ ಒಂದು ನಿರ್ಧಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್‌ಗೆ ಆಹಾರವಾಗಿದೆ. ಇಂಗ್ಲೆಂಡ್ ಆಟಗಾರ ಮೊಯೀನ್ ಅಲಿ ಬ್ಯಾಟಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಎಲ್‌ಬಿಡಬ್ಲ್ಯುಗಾಗಿ ಬಾಂಗ್ಲಾದೇಶ ಮನವಿ ಮಾಡಿತು. ಇದನ್ನು ಫೀಲ್ಡ್ ಅಂಪೈರ್ ನೇರವಾಗಿಯೇ ನಿರಾಕರಿಸಿದರು. ಚೆಂಡು ಪ್ಯಾಡ್‌ನ ಹತ್ತಿರದಲ್ಲಿ ಇರದಿದ್ದರೂ ಬಾಂಗ್ಲಾದೇಶ ತಂಡ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ ವೀಕ್ಷಕರನ್ನು ಅಚ್ಚರಿಗೆ ದೂಡಿತು.

ಮೂರನೇ ಅಂಪಾಯರ್ ಪರಿಶೀಲಿಸಿದಾಗ ಚೆಂಡು ನೇರವಾಗಿ ಬ್ಯಾಟ್‌ನ ಮಧ್ಯಭಾಗಕ್ಕೆ ಬಡಿದಿರುವುದು ಸ್ಪಷ್ಟವಾಗಿತ್ತು. ಹೀಗಾಗಿ ಫೀಲ್ಡ್ ಅಂಪೈರ್ ನಿರ್ಧಾರವನ್ನು ಎತ್ತಿ ಹಿಡಿದ ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿತು. ಬಾಂಗ್ಲಾದೇಶ ನಾಯಕ ತಮೀಮ್ ಇಕ್ಬಾಳ್ ತೆಗೆದುಕೊಂಡ ಈ ಡಿಆರ್‌ಎಸ್ ನಿರ್ಧಾರವನ್ನು ಈಗ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಇನ್ನಿಲ್ಲದಂತೆ ಟ್ರೋಫಿ ಮಾಡುತ್ತಿದ್ದಾರೆ.

ಒಬ್ಬ ಅಭಿಮಾನಿಯಂತೂ "ಕ್ರಿಕೆಟ್ ಇತಿಹಾಸದ ಅತ್ಯಂತ ಕೆಟ್ಟ ಡಿಆರ್‌ಎಸ್ ತೆಗೆದುಕೊಂಡಿರುವುದಕ್ಕೆ ಬಹುಮಾನ ಯಾವುದು?" ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಅಭಿಮಾನಿ "ನನ್ನ ಕಣ್ಣುಗಳನ್ನು ನಂಬಲಾಗುತ್ತಿಲ್ಲ. ಬ್ಯಾಟ್‌ನ ಮಧ್ಯಕ್ಕೆ ಬಡಿದಿದ್ದರೂ ರಿವ್ಯೂ ತೆಗೆದುಕೊಂಡಿದ್ದಾರೆಯೇ" ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಇದು ಐತಿಹಾಸಿಕ ರಿವ್ಯೂ ಎಂದು ಗೇಲಿ ಮಾಡಿದ್ದಾರೆ. ಹೀಗೆ ಟ್ವಿಟ್ಟರ್‌ನಲ್ಲಿ ನಾನಾ ರೀತಿಯಲ್ಲಿ ತಮಾಷೆಯ ಟ್ವೀಟ್‌ಗಳು ಹರಿದಾಡುತ್ತಿದೆ.

ಬಾಂಗ್ಲಾದೇಶ: ತಮೀಮ್ ಇಕ್ಬಾಲ್ (ನಾಯಕ), ಲಿಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಶಾಕಿಬ್ ಅಲ್ ಹಸನ್, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ತೈಜುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್
ಬೆಂಚ್: ತೌಹಿದ್ ಹೃದಯ್, ಹಸನ್ ಮಹಮೂದ್, ಎಬಾಡೋಟ್ ಹೊಸೈನ್,

ಇಂಗ್ಲೆಂಡ್: ಜೇಸನ್ ರಾಯ್, ಫಿಲಿಪ್ ಸಾಲ್ಟ್, ಡೇವಿಡ್ ಮಲನ್, ಜೇಮ್ಸ್ ವಿನ್ಸ್, ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್), ವಿಲ್ ಜ್ಯಾಕ್ಸ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ಮಾರ್ಕ್ ವುಡ್
ಬೆಂಚ್: ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್, ರೀಸ್ ಟೋಪ್ಲಿ, ರೆಹಾನ್ ಅಹ್ಮದ್

Story first published: Friday, March 3, 2023, 17:35 [IST]
Other articles published on Mar 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+