Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

England vs Ireland: ಟೆಸ್ಟ್‌ನಲ್ಲಿ ಗೆಲುವಿನ ಓಟ ಮುಂದುವರಿಸಿದ ಇಂಗ್ಲೆಂಡ್: ಐರ್ಲೆಂಡ್ ವಿರುದ್ಧ ಭಾರೀ ಗೆಲುವು

ಇಂಗ್ಲೆಂಡ್ ತಂಡ ತವರಿನಲ್ಲಿ ಮತ್ತೊಂದು ಅಮೋಘ ಗೆಲುವು ಸಾಧಿಸಿದೆ. ನೆರೆಯ ದೇಶ ಐರ್ಲೆಂಡ್ ಜೊತೆಗಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್‌ನ್ಲಲಿ ಅಮೋಘ ಪ್ರದರ್ಶನ ನೀಡಿದ ಬೆನ್ನ ಸ್ಟೋಕ್ಸ್ ಪಡೆ ಮೂರನೇ ದಿನದಲ್ಲಿಯೇ ಬೃಹತ್ ಗೆಲುವು ಸಾಧಿಸಿದೆ. ಬರೊಬ್ಬರಿ 10 ವಿಕೆಟ್‌ಗಳ ಅಂತರದಿಂದ ಇಂಗ್ಲೆಂಡ್ ಈ ಏಕೈಕ ಪಂದ್ಯದ ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ನೆಸಿದ ಇಂಗ್ಲೆಂಡ್ ತಂಡ ಅದ್ಭುತ ಯಶಸ್ಸು ಸಾಧಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಸ್ಟುವರ್ಟ್ ಬ್ರಾಡ್ ದಾಳಿಗೆ ತತ್ತರಿಸಿದ ಐರ್ಲೆಂಡ್ 172 ರನ್‌ಗಳಿಗೆ ಆಲೌಟ್ ಆಯಿತು. ಬ್ರಾಡ್ ಐದು ವಿಕೆಟ್‌ಗಳ ಗೊಂದಲು ಪಡೆದರೆ ಜಾಕ್ ಲೀಚ್ ಮೂರು ವಿಕೆಟ್ ಕಬಳಿಸಿದರು.

england win

ಇನ್ನು ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಐರ್ಲೆಂಡ್ ತಂಡ ತನ್ನ ಆಕ್ರಮಣಕಾರಿ ಶೈಲಿಯಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿತು. ಜಾಕ್ ಕ್ರಾವ್ಲೆ 56 ರನ್‌ಗಳಿಸಿ ಔಟಾದರೆ ಒಲ್ಲೀ ಪೋಪ್ 208 ರನ್‌ಗಳಿಸುವ ಮೂಕ ದ್ವಿಶತಕ ಸಿಡಿಸಿದರು. ಇನ್ನು ಡಕೆಟ್ 182 ರನ್‌ಗಳಿಗೆ ಔಟಾದರು. ಜೋ ರೂಟ್ 56 ರನ್ ಗಳಿಸಿದರು. ಹೀಗಾಗಿ ಇಂಗ್ಲೆಂಡ್ ತಂಡ 524 ರನ್‌ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಐರ್ಲೆಂಡ್ ತಂಡದ ಪರವಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಮಧ್ಯ ಕ್ರಮಾಂಕದ ಆಟಗಾರರಿಂದ ಉತ್ತಮ ಪ್ರತಿರೋಧ ವ್ಯಕ್ತವಾಯತು. ಹ್ಯಾರಿ ಟೆಕ್ಟರ್, ಅರ್ಧ ಶತಕ ಸಿಡಿಸಿದರು. ಇನ್ನಿ ಕೆಳ ಕ್ರಮಾಂಕದ ಆಟಗಾರರಾದ ಆಂಡಿ ಮೆಕ್‌ಬ್ರೈನ್ ಹಾಗೂ ಮಾರ್ಕ್ ಅಡೈರ್ ಅವರ ಅಮೋಘ ಹೋರಾಟದಿಂದಾಗಿ ಇನ್ನಿಂಗ್ಸ್ ಸೋಲಿನ ಮುಖಭಂಗದಿಂದ ಐರ್ಲೆಂಡ್ ಪಾರಾಯಿತು. ಮೆಕ್‌ಬ್ರೃನ್ 86 ರನ್‌ಗಳಿಸಿದರೆ ಅಡೈರ್ 88 ರನ್‌ಗಳಿಸಿರು. ಹೀಗಾಗಿ ಐರ್ಲೆಂಡ್ 362 ರನ್‌ಗಳಿಸಿತು.

ಹೀಗಾಗಿ ಇಂಗ್ಲೆಂಡ್ ಗೆಲುವಿಗೆ ಕೇವಲ 11 ರನ್‌ಗಳ ಅಗತ್ಯ ಮಾತ್ರವೇ ಇತ್ತು. ಕೊನೆಯ ಇನ್ನಿಂಗ್‌ನಲ್ಲಿ ಕಣಕ್ಕಿಳಿದ ಇಂಗ್ಲೆಂಡ್ ಪರವಾಗಿ ಜಾಕ್ ಕ್ರಾವ್ಲಿ ಮೊದಲ ಮೂರು ಎಸೆತಗಳನ್ನು ಬೌಂಡರಿಗೆ ಅಟ್ಟುವ ಮೂಲಕ 10 ವಿಕೆಟ್‌ಗಳ ಅಂತರದ ಗೆಲುವನ್ನು ಸಾರಿದರು. ಈ ಮೂಲಕ ತವರಿನಲ್ಲಿ ಇಂಗ್ಲೆಂಡ್ ತಂಡದ ಅಬ್ಬರ ಮುಂದುವರಿದಿದೆ.

ಬೆಂಚ್: ಕ್ರಿಸ್ ವೋಕ್ಸ್, ಆಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್, ಡೇನಿಯಲ್ ಲಾರೆನ್ಸ್

ಐರ್ಲಂಡ್ ಆಡುವ ಬಳಗ: ಜೇಮ್ಸ್ ಮೆಕಲ್ಲಮ್, ಪೀಟರ್ ಮೂರ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಹ್ಯಾರಿ ಟೆಕ್ಟರ್, ಪಾಲ್ ಸ್ಟಿರ್ಲಿಂಗ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಕರ್ಟಿಸ್ ಕ್ಯಾಂಫರ್, ಆಂಡಿ ಮೆಕ್‌ಬ್ರೈನ್, ಮಾರ್ಕ್ ಅಡೇರ್, ಫಿಯಾನ್ ಹ್ಯಾಂಡ್, ಗ್ರಹಾಂ ಹ್ಯೂಮ್
ಬೆಂಚ್:ಜಾರ್ಜ್ ಡಾಕ್ರೆಲ್, ಕ್ರೇಗ್ ಯಂಗ್, ಮ್ಯಾಥ್ಯೂ ಫೋಸ್ಟರ್, ಥಾಮಸ್ ಮೇಯಸ್

Story first published: Sunday, June 4, 2023, 9:16 [IST]
Other articles published on Jun 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+