Eng Vs Nz Test: ಬ್ರಾಡ್, ಜೇಮ್ಸ್ ಆಂಡರ್ಸನ್ ಮಾರಕ ದಾಳಿ: 267 ರನ್‌ಗಳ ಬೃಹತ್ ಜಯ ಸಾಧಿಸಿದ ಇಂಗ್ಲೆಂಡ್

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಇಂಗ್ಲೆಂಡ್ 267 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿದೆ.
ನ್ಯೂಜಿಲೆಂಡ್‌ನ ಮೌಂಟ್ ಮಂಗನುಯಿಯ ಬೇ ಒವಲ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಮಾರಕ ಬೌಲಿಂಗ್‌ಗೆ ನ್ಯೂಜಿಲೆಂಡ್ ತತ್ತರಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ 390 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ 126 ರನ್ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು.
ಡೇರಿಲ್ ಮಿಚೆಲ್ ಅಜೇಯ 57 ರನ್ ಗಳಿಸುವ ಮೂಲಕ ಇಂಗ್ಲೆಂಡ್ ಬೌಲರ್ ಗಳನ್ನು ಎದುರಿಸಿದ್ದು ಬಿಟ್ಟರೆ ಉಳಿದ ಯಾರೊಬ್ಬರು ಆಂಗ್ಲರ ಮಾರಕ ದಾಳಿಯ ಮುಂದೆ ಹೆಚ್ಚು ನಿಲ್ಲಲು ಸಾಧ್ಯವಾಗಲಿಲ್ಲ. 4ನೇ ದಿನದಾಂತ್ಯಕ್ಕೆ 63 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲೆಂಡ್ 5ನೇ ದಿನ ಮತ್ತೆ 63 ರನ್ ಗಳಿಸುಷ್ಟರಲ್ಲಿ ಉಳಿದ 5 ವಿಕೆಟ್ ಕಳೆದುಕೊಂಡಿತು.
ಡೇರಿಲ್ ಮಿಚೆಲ್ ಅಜೇಯ 57, ಮಿಚೆಲ್ ಬ್ರೇಸ್‌ವೆಲ್ (25), ಟಾಮ್ ಲಾಥಮ್ (15) ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ ಗಳು ಎರಡಂಕಿ ಮೊತ್ತವನ್ನು ಗಳಿಸಲು ಸಾಧ್ಯವಾಗಲಿಲ್ಲ.

ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್ ಮಾರಕ ಬೌಲಿಂಗ್
ಅನುಭವಿ ವೇಗಿಗಳಾದ ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆಂಡರ್ಸನ್ ಮಾರಕ ಬೌಲಿಂಗ್ ಮಾಡಿದರು. 4ನೇ ದಿನದಾಂತ್ಯಕ್ಕೆ ನ್ಯೂಜಿಲೆಂಡ್‌ನ ಅಗ್ರ ಕ್ರಮಾಂಕದ ಬ್ಯಾಟರ್ ಗಳನ್ನು ಔಟ್ ಮಾಡುವ ಮೂಲಕ ಬ್ರಾಡ್ ಆಘಾತ ನೀಡಿದ್ದರೆ. 5ನೇ ದಿನ ಜೇಮ್ಸ್ ಆಂಡರ್ಸನ್ ಅಬ್ಬರಿಸಿದರು.
5ನೇ ದಿನ ಉರುಳಿದ 5 ವಿಕೆಟ್‌ಗಳಲ್ಲಿ ಜೇಮ್ಸ್ ಆಂಡರ್ಸನ್ ಒಬ್ಬರೇ ನಾಲ್ಕು ವಿಕೆಟ್ ಪಡೆದುಕೊಂಡರು. 10.3 ಓವರ್ ಗಳಲ್ಲಿ 18 ರನ್ ನೀಡಿದ ಅವರು 4 ವಿಕೆಟ್ ಪಡೆದು ಮಿಂಚಿದರು. ಬ್ರಾಡ್ 4 ವಿಕೆಟ್ ಗಳಿಸಿದರೆ, ಒಲೀ ರಾಬಿನ್‌ಸನ್ ಮತ್ತು ಜ್ಯಾಕ್ ಲೀಚ್ ತಲಾ ಒಂದು ವಿಕೆಟ್ ಪಡೆದರು.

11 ಪಂದ್ಯಗಳಲ್ಲಿ 10 ಗೆಲುವು
ಬೆನ್ ಸ್ಟೋಕ್ಸ್ ಟೆಸ್ಟ್ ತಂಡದ ನಾಯಕ ಮತ್ತು ಬ್ರೆಂಡನ್ ಮೆಕಲಮ್ ಕೋಚ್ ಆಗಿ ನೇಮಕವಾದ ನಂತರ ಇಂಗ್ಲೆಂಡ್ ಅದ್ಭುತ ಪ್ರದರ್ಶನ ನೀಡುತ್ತಿದೆ. ಇವರಿಬ್ಬರ ಸಾರಥ್ಯದಲ್ಲಿ ಇಂಗ್ಲೆಂಡ್ ಆಡಿರುವ 11 ಪಂದ್ಯಗಳಲ್ಲಿ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 1 ಪಂದ್ಯದಲ್ಲಿ ಮಾತ್ರ ಸೋಲನುಭವಿಸಿದೆ.
ಇದೇ ಪಂದ್ಯದಲ್ಲಿ ನಾಯಕ ಬೆನ್ ಸ್ಟೋಕ್ಸ್ ತಮ್ಮ ಕೋಚ್ ಮೆಕಲಮ್ ದಾಖಲೆಯನ್ನು ಮುರಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಮೆಕಲಮ್ ದಾಖಲೆ ಮುರಿದು ಹೊಸ ದಾಖಲೆ ನಿರ್ಮಿಸಿದರು. ಮೆಕಲಮ್ 107 ಸಿಕ್ಸರ್ ಸಿಡಿಸಿದ್ದರೆ ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ 109 ಸಿಕ್ಸರ್ ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications