For Quick Alerts
ALLOW NOTIFICATIONS  
For Daily Alerts
 

Eng vs NZ 2nd Test: 2ನೇ ದಿನವೂ ಮುಗ್ಗರಿಸಿದ ನ್ಯೂಜಿಲೆಂಡ್: ಮುಂದುವರಿದ ಇಂಗ್ಲೀಷರ ಅಬ್ಬರ!

Eng vs NZ 2nd Test: England continues dominates in 2nd day of Wellington Test against New Zealand

ಟೆಸ್ಟ್ ಮಾದರಿಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಅಬ್ಬರ ನ್ಯೂಜಿಲೆಂಡ್ ನೆಲದಲ್ಲಿಯೂ ಮುಂದುವರಿದಿದೆ. ಈಗಾಗಲೇ ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಇಂಗ್ಲೆಂಡ್ 2ನೇ ಟೆಸ್ಟ್‌ನಲ್ಲಿಯೂ ಅಂಥಾದ್ದೇ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಮೊದಲ ದಿನದಾಟದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಇಂಗ್ಲೆಂಡ್ ಎರಡನೇ ದಿನ ಬೌಲಿಂಗ್‌ನಲ್ಲಿಯೂ ಅಮೋಘ ಪ್ರದರ್ಶನ ನೀಡಿದೆ. ಈ ಮೂಲಕ ತವರಿನಲ್ಲಿಯೇ ನ್ಯೂಜಿಲೆಂಡ್ ಪಡೆ ಮತ್ತೊಂದು ಸೋಲಿನತ್ತ ಮುಖ ಮಾಡಿದೆ. ಎರಡೇ ದಿನ ಮಳೆಯಿಂದಾಗಿ ಪೂರ್ಣ ಪ್ರಮಾಣದ ಆಟಕ್ಕೆ ಅವಕಾಶ ದೊರೆಯಲಿಲ್ಲ.

ಜೂ ರೂಟ್ ಹಾಗೂ ಹ್ಯಾರಿ ಬ್ರೂಕ್ ಅವರ ಅದ್ಭುತ ಜೊತೆಯಾಟದಿಂದಾಗಿ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ 435 ರನ್‌ಗಳನ್ನು ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದೆ. ಮೊದಲ ದಿನದಾಟದ ಮುಕ್ತಾಯದ ಹಂತದಲ್ಲಿ ದ್ವಿಶತಕದ ಅಂಚಿನಲ್ಲಿದ್ದ ಹ್ಯಾರಿ ಬ್ರೂಕ್ 186 ರನ್‌ಗಳಿಗೆ ತಮ್ಮ ಆಟವನ್ನು ಅಂತ್ಯಗೋಲಿಸಿ ವಿಕೆಟ್ ಕಳೆದುಕೊಂಡರು. ಜೋ ರೂಟ್ ತಮ್ಮ ಆಟವನ್ನು ವಿಸ್ತರಿಸಿದ್ದು ಅಜೇಯ 153 ರನ್‌ಗಳಿಸಿದ್ದಾರೆ. ಜೋ ರೂಟ್ ಹಾಗೂ ಬ್ರೂಕ್ ಜೋಡಿ 4ನೇ ವಿಕೆಟ್‌ಗೆ 302 ರನ್‌ಗಳ ಮಹತ್ವದ ಜೊತೆಯಾಟವನ್ನು ನೀಡಿದ್ದು ಇಂಗ್ಲೆಂಡ್ ತಂಡಕ್ಕೆ ಆಸರೆಯಾಯಿತು.

ಇನ್ನು ಬಳಿಕ ಬ್ಯಾಟಿಂಗ್ ಆರಂಭಿಸಿರುವ ನ್ಯೂಜಿಲೆಂಡ್ ತಂಡ ಆರಂಭದಿಂದಲೇ ಆಘಾತಕ್ಕೆ ಒಳಗಾಯಿತು. ಕಿವೀಸ್ ಆಟಗಾರರು ತಮ್ಮದೇ ನೆಲದಲ್ಲಿ ಇಂಗ್ಲೆಂಡ್ ಬೌಲರ್‌ಗಳ ದಾಳಿಗೆ ತತ್ತರಿಸಿ ಹೋದರು. ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಅಗ್ರ ಕ್ರಮಾಂಕದ ಮೂವರನ್ನು ಅತ್ಯಲ್ಪ ಮೊತ್ತಕ್ಕೆ ಔಟ್ ಮಾಡಿ ಮಿಂಚಿದರು. ನ್ಯೂಜಿಲೆಂಡ್ ತಂಡದ ಆಟಗಾರರಾದ ಡೆವೋನ್ ಕಾನ್ವೆ, ಕಢನ್ ವಿಲಿಯಮ್ಸನ್ ಹಾಗೂ ವಿಲ್ ಯಂಗ್ ಆಂಡರ್ಸನ್‌ಗೆ ಬಲಿಯಾದರು.

ಬಳಿಕ ಜಾಕ್ ಲೀಚ್ ಕಿವೀಸ್ ಆಟಗಾರರಿಗೆ ಆಘಾತ ನೀಡಲು ಆರಂಬಿಸಿದರು. ಲೀಚ್ ಕೂಡ ಮೂರು ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ದೊಡ್ಡ ಏಟು ನೀಡುವಲ್ಲಿ ಯಶಸ್ವಿಯಾದರು. ನ್ಯೂಜಿಲೆಂಡ್ ತಂಡದ ಯಾವ ಜೋಡಿ ಕೂಡ ಉತ್ತಮ ಜೊತೆಯಾಟ ನೀಡದಂರೆ ನೋಡಿಕೊಳ್ಳುವಲ್ಲಿ ಇಂಗ್ಲೆಂಡ್ ಬೌಲಿಂಗ್ ವಿಭಾಗ ಯಶಸ್ವಿಯಾಯಿತು. ಸ್ಟುವರ್ಟ್ ಬ್ರಾಡ್ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

2ನೇ ದಿನದಾಟದ ಅಂತ್ಯದಲ್ಲಿ ನ್ಯೂಜಿಲೆಂಡ್ ತಂಡ 138 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಇನ್ನು ಕೂಡ 297 ರನ್‌ಗಳ ಬೃಹತ್ ಹಿನ್ನಡೆಯಲ್ಲಿರುವ ಟಿಮ್ ಸೌಥೀ ಪಡೆ ತವರಿನಲ್ಲಿಯೇ ಇಂಗ್ಲೆಂಡ್ ತಂಡದ ವಿರುದ್ಧ ವೈಟ್‌ವಾಶ್ ಮುಖಭಂಗಕ್ಕೆ ಒಳಗಾಗುವ ಸಾಧ್ಯತೆ ದಟ್ಟವಾಗಿದೆ.

ನ್ಯೂಜಿಲೆಂಡ್: ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ವಿಲ್ ಯಂಗ್, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲುಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಟಿಮ್ ಸೌಥಿ (ನಾಯಕ), ಮ್ಯಾಟ್ ಹೆನ್ರಿ, ನೀಲ್ ವ್ಯಾಗ್ನರ್
ಬೆಂಚ್: ಸ್ಕಾಟ್ ಕುಗ್ಗೆಲೀಜ್ನ್, ಬ್ಲೇರ್ ಟಿಕ್ನರ್, ಜಾಕೋಬ್ ಡಫಿ, ಇಶ್ ಸೋಧಿ
ಇಂಗ್ಲೆಂಡ್: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಆಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್
ಬೆಂಚ್: ಆಲಿ ಸ್ಟೋನ್, ಡೇನಿಯಲ್ ಲಾರೆನ್ಸ್, ವಿಲ್ ಜ್ಯಾಕ್ಸ್, ಮ್ಯಾಥ್ಯೂ ಪಾಟ್ಸ್

Story first published: Saturday, February 25, 2023, 11:52 [IST]
Other articles published on Feb 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+