For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ನ್ಯೂಜಿಲೆಂಡ್: ಅಂತಿಮ ಪಂದ್ಯವನ್ನೂ ಗೆಲ್ಲುವತ್ತ ಇಂಗ್ಲೆಂಡ್ ಚಿತ್ತ

Eng vs NZ 3rd test: day 4 Highlights, England need 113 runs to win in final day

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ನಾಲ್ಕನೇ ದಿನದಾಟದ ಅಂತ್ಯದಲ್ಲಿ ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಅಂತಿಮ ದಿನ ಪಂದ್ಯವನ್ನು ಗೆಲ್ಲುವತ್ತ ಚಿತ್ತನೆಟ್ಟಿದೆ. ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡ ಕೇವಲ ಎರಡು ವಿಕೆಟ್ ಕಳೆದುಕೊಂಡು 183 ರನ್ ಗಳಿಸಿದೆ.

ಐದನೇ ದಿನ ಇಂಗ್ಲೆಂಡ್ ಮುಂದೆ ಸುಲಭ ಸವಾಲಿದೆ. 113 ರನ್‌ಗಳನ್ನು ಇಂಗ್ಲೆಂಡ್ ನಾಲ್ಕನೇ ದಿನ ಗಳಿಸುವ ಸವಾಲಿದ್ದು ಜೋ ರೂಟ್ ಹಾಗೂ ಒಲ್ಲೀ ಪೋಪ್ ಕ್ರೀಸ್ ಕಾಯ್ದಿರಿಸಿದ್ದಾರೆ. ಒಲ್ಲಿ ಪೋಪ್ 81 ರನ್‌ಗಳಿಸಿದ್ದರೆ ಜೋ ರೂಟ್ 55 ರನ್‌ಗಳಿಸಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ 329ರನ್ ಕಲೆಹಾಕಿದ್ದ ನ್ಯೂಜಿಲೆಂಡ್, ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಆರಂಭಿಕ ಬ್ಯಾಟರ್ ವಿಲ್ ಯಂಗ್ (8) ಬೇಗನೆ ಔಟಾದ ಬಳಿಕ ಮೊದಲ ಇನ್ನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದ ಟಾಮ್ ಲಥಾಮ್ ತಂಡಕ್ಕೆ ಆಧಾರವಾದ್ರು .

ಎರಡನೇ ವಿಕೆಟ್‌ಗೆ ಟಾಮ್ ಲಥಾಮ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ತಾಳ್ಮೆಯುತ ಇನ್ನಿಂಗ್ಸ್‌ ಕಟ್ಟಿದರು. ಟಾಮ್ ಲಥಾಮ್ 100 ಎಸೆತಗಳನ್ನ ಎದುರಿಸಿ 76ರನ್ ಕಲೆಹಾಕಿ ಔಟಾದ್ರೆ, ಇದ್ರ ನಂತರದಲ್ಲಿ ಡೆವೊನ್ ಕಾನ್ವೆ 11, ನಾಯಕ ಕೇನ್ ವಿಲಿಯಮ್ಸನ್ 48, ಹೆನ್ರಿ ನಿಕೋಲ್ಸ್ 7ರನ್‌ಗಳಿಸಿ ವಿಕೆಟ್ ಒಪ್ಪಿಸಿ ತಂಡದ ಕುಸಿತಕ್ಕೆ ಕಾರಣವಾದ್ರು.

ಇಂಗ್ಲೆಂಡ್ ಆಡುವ ಬಳಗ: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ಸಿ), ಸ್ಯಾಮ್ ಬಿಲ್ಲಿಂಗ್ಸ್ (ವಾಕ್), ಜೇಮೀ ಓವರ್‌ಟನ್, ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್

ಬೆಂಚ್: ಕ್ರೇಗ್ ಓವರ್ಟನ್, ಹ್ಯಾರಿ ಬ್ರೂಕ್

Ind vs Ireland ಪಂದ್ಯದಲ್ಲಿ ಹೆಚ್ಚಾಗಿ ಮಿಂಚಿದ್ದು ಇವನೇ | *Cricket | OneIndia Kannada

ನ್ಯೂಜಿಲೆಂಡ್ ಆಡುವ ಬಳಗ: ಟಾಮ್ ಲ್ಯಾಥಮ್, ವಿಲ್ ಯಂಗ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ಸಿ), ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಾಕ್), ಮೈಕೆಲ್ ಬ್ರೇಸ್‌ವೆಲ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ನೀಲ್ ವ್ಯಾಗ್ನರ್
ಬೆಂಚ್: ಮ್ಯಾಟ್ ಹೆನ್ರಿ, ಹಮೀಶ್ ರುದರ್ಫೋರ್ಡ್, ಏಜಾಜ್ ಪಟೇಲ್, ಡೇನ್ ಕ್ಲೀವರ್, ಬ್ಲೇರ್ ಟಿಕ್ನರ್

Story first published: Monday, June 27, 2022, 0:01 [IST]
Other articles published on Jun 27, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+