ಬುಧವಾರ, ಸೆಪ್ಟೆಂಬರ್ 13ರಂದು ಓವಲ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ 368 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.
ಆದರೆ, ಕಿವೀಸ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ 9.1 ಓವರ್‌ಗಳಲ್ಲಿ 51 ರನ್ ನೀಡಿ 5 ವಿಕೆಟ್‌ಗಳ ಪ್ರಭಾವಶಾಲಿ ಪುನರಾಗಮನದೊಂದಿಗೆ ನ್ಯೂಜಿಲೆಂಡ್ ತಂಡವನ್ನು ಪಂದ್ಯದಲ್ಲಿ ಉಳಿಸಿಕೊಂಡರು.

ಇದೇ ವೇಳೆ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರು ಬಿರುಸಿನ 182 ರನ್ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ಸಾರ್ವಕಾಲಿಕ ಗರಿಷ್ಠ ಸ್ಕೋರ್ ಗಳಿಸಿದರು. ಆದರೆ, ಬೆನ್ ಸ್ಟೋಕ್ಸ್ ಔಟಾದಾಗ ಇಂಗ್ಲೆಂಡ್ 5 ವಿಕೆಟ್‌ಗೆ 348 ರನ್ ಗಳಿಸಿ ಬೃಹತ್ ಮೊತ್ತದ ಗುರಿ ನೋಡುತ್ತಿತ್ತು.
ಬೆನ್ ಸ್ಟೋಕ್ಸ್ ವಿಕೆಟ್ ಒಪ್ಪಿಸುತ್ತಿದ್ದಂತೇ ತಮ್ಮ ಕೊನೆಯ ಐದು ವಿಕೆಟ್‌ಗಳನ್ನು ಕೇವಲ 20 ರನ್‌ಗಳ ಅಂತರದಲ್ಲಿ ಕಳೆದುಕೊಂಡಿತು. ಟ್ರೆಂಟ್ ಬೌಲ್ಟ್ ಅವರು ಇನ್ನಿಂಗ್ಸ್‌ನ 11 ಎಸೆತಗಳು ಬಾಕಿ ಇರುವಂತೆಯೇ ಆಲೌಟ್ ಮಾಡಿದರು. ನಾಲ್ಕು ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ ಟ್ರೆಂಟ್ ಬೌಲ್ಟ್ ಅವರು ಆರಂಭದಲ್ಲಿ ಇಂಗ್ಲೆಂಡ್ 13 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ತತ್ತರಿಸಿತು.

ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್ ಪಂದ್ಯಾವಳಿಗೆ ಮುಂಚಿತವಾಗಿ ತನ್ನ ಏಕದಿನ ನಿವೃತ್ತಿಯನ್ನು ಇತ್ತೀಚೆಗಷ್ಟೇ ವಾಪಸ್ ಪಡೆದ ಬೆನ್ ಸ್ಟೋಕ್ಸ್, ಅದ್ಭುತ ಶೈಲಿಯಲ್ಲಿ ದಾಖಲೆ ನಿರ್ಮಿಸುವ ಮೂಲಕ ಪುನರಾಗಮನ ಮಾಡಿದರು.
124 ಎಸೆತಗಳಲ್ಲಿ 15 ಬೌಂಡರಿಗಳು ಮತ್ತು 9 ಸಿಕ್ಸರ್‌ಗಳ ಸಮೇತ 182 ರನ್ ಗಳಿಸುವ ಮೂಲಕ, 2018ರಲ್ಲಿ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಜೇಸನ್ ರಾಯ್ ಅವರ ಹಿಂದಿನ 180 ರನ್‌ಗಳ ಇಂಗ್ಲೆಂಡ್ ಪರ ಅತ್ಯಧಿಕ ದಾಖಲೆಯನ್ನು ಮುರಿದರು.
ಬೆನ್ ಸ್ಟೋಕ್ಸ್ ತಮ್ಮ ಹಿಂದಿನ ಏಕದಿನ ಅತ್ಯಧಿಕ ಸ್ಕೋರ್ ಅಜೇಯ 102 ರನ್ ಆಗಿತ್ತು. ಡೇವಿಡ್ ಮಲಾನ್ (96 ರನ್) ಅವರೊಂದಿಗೆ ಮೂರನೇ ವಿಕೆಟ್‌ಗೆ 199 ರನ್‌ಗಳ ಜೊತೆಯಾಟದಲ್ಲಿ ಅತ್ಯುತ್ತಮ ಬೆಂಬಲ ಪಡೆದರು.
ಡೇವಿಡ್ ಮಲಾನ್ 95 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 96 ರನ್ ಬಾರಿಸಿ ಕೇವಲ 4 ರನ್‌ಗಳಿಂದ ಶತಕವಂಚಿತರಾದರು. ನಾಯಕ ಜೋಸ್ ಬಟ್ಲರ್ 38 ರನ್ ಗಳಿಸಿದರೆ, ಉಳಿದವರಾರು ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು.
ನ್ಯೂಜಿಲೆಂಡ್ ಪರ ಬೌಳಿಂಗ್‌ನಲ್ಲಿ ಟ್ರೆಂಟ್ ಬೌಲ್ಟ್ 5 ವಿಕೆಟ್‌ಗಳ ಗೊಂಚಲು ಪಡೆದರೆ, ಬೆನ್ ಲಿಸ್ಟರ್ 3 ವಿಕೆಟ್ ಕಬಳಿಸಿದರು ಮತ್ತು ಉಳಿದಂತೆ ಲಾಕಿ ಫರ್ಗ್ಯುಸನ್, ಗ್ಲೆನ್ ಫಿಲಿಪ್ಸ್ ತಲಾ ಒಂದೊಂದು ವಿಕೆಟ್ ಪಡೆದರು.