For Quick Alerts
ALLOW NOTIFICATIONS  
For Daily Alerts
 

ENG vs NZ: ವಿಶ್ವಕಪ್‌ಗೆ ಮುನ್ನ ನ್ಯೂಜಿಲೆಂಡ್‌ಗೆ ಭಾರೀ ಹೊಡೆತ; ಗಾಯಕ್ಕೆ ತುತ್ತಾದ ಸ್ಟಾರ್ ವೇಗಿ!

ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲೇ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಶುರುವಾಗಿದ್ದು, ಇದಕ್ಕಾಗಿ ಜಗತ್ತಿನ ಕ್ರಿಕೆಟ್ ಪ್ರೇಮಿಗಳು ಕಾತರರಾಗಿದ್ದಾರೆ.

ವಿಶ್ವಕಪ್‌ನಲ್ಲಿ ಭಾಗವಹಿಸುವ ಎಲ್ಲಾ ಹತ್ತು ತಂಡಗಳು ತಮ್ಮ ಬಲಿಷ್ಠ ಪಡೆಯನ್ನು ನಿರ್ಮಿಸುತ್ತಿವೆ. ಈಗಾಗಲೇ, ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ನೆದರ್ಲ್ಯಾಂಡ್ಸ್, ಅಫ್ಘಾನಿಸ್ತಾನ ತಮ್ಮ 15 ಸದಸ್ಯರ ತಂಡವನ್ನು ಪ್ರಕಟಿಸಿವೆ.

ENG vs NZ: Big Blow For New Zealand Team Ahead Of World Cup 2023; Star Bowler Injured

ಇದೀಗ ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದ್ದು, ಸ್ಟಾರ್ ವೇಗದ ಬೌಲರ್ ಟಿಮ್ ಸೌಥಿ ಗಾಯದ ಬಗ್ಗೆ ಮಾಹಿತಿ ಒದಗಿಸಿದೆ. ಶುಕ್ರವಾರ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದ ವೇಳೆ ಹೆಬ್ಬೆರಳಿಗೆ ಗಾಯವಾದ ನಂತರ, ಅನುಭವಿ ವೇಗಿ ಟಿಮ್ ಸೌಥಿ ಮೈದಾನಕ್ಕೆ ವಾಪಸ್ಸಾಗುವುದಿಲ್ಲ ಎಂದು ಹೇಳಿದೆ.

ಏಕದಿನ ಪಂದ್ಯದ 14ನೇ ಓವರ್‌ನಲ್ಲಿ ಬೆನ್ ಲಿಸ್ಟರ್ ಬೌಲಿಂಗ್‌ನಲ್ಲಿ ಜೋ ರೂಟ್ ಅವರ ಕ್ಯಾಚ್ ಹಿಡಿಯಲು ಯತ್ನಿಸಿದಾಗ ಟಿಮ್ ಸೌಥಿ ಕೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡರು.

ತದನಂತರ ವೇಗಿ ಮೈದಾನದಿಂದ ಹೊರಬಂದರು ಮತ್ತು ಇದೀಗ ನ್ಯೂಜಿಲೆಂಡ್ ಕ್ರಿಕೆಟ್ ಟಿಮ್ ಸೌಥಿ ಅವರ ಗಾಯದ ಹೆಚ್ಚಿನ ಮೌಲ್ಯಮಾಪನದ ಅಗತ್ಯವಿರುವುದರಿಂದ ಅವರು ಈ ಹಂತದಲ್ಲಿ ಮೈದಾನಕ್ಕೆ ಹೋಗುವುದಿಲ್ಲ ಎಂದು ಬಹಿರಂಗಪಡಿಸಿದೆ.

"ಟಿಮ್ ಸೌಥಿ ಅವರು ಬೆನ್ ಲಿಸ್ಟರ್ ಬೌಲಿಂಗ್‌ನಲ್ಲಿ ಜೋ ರೂಟ್ ಕ್ಯಾಚ್ ಪಡೆದುಕೊಳ್ಳುವಾಗ ಬಲಗೈ ಹೆಬ್ಬೆರಳಿಗೆ ಗಾಯಗೊಂಡು ಮೈದಾನ ತೊರೆದಿದ್ದಾರೆ. ಗಾಯಕ್ಕೆ ಹೆಚ್ಚಿನ ಮೌಲ್ಯಮಾಪನದ ಅಗತ್ಯವಿದೆ ಮತ್ತು ಈ ಹಂತದಲ್ಲಿ ಅವರು ಮೈದಾನಕ್ಕೆ ಮರಳುವುದಿಲ್ಲ," ಎಂದು ನ್ಯೂಜಿಲೆಂಡ್ ಕ್ರಿಕೆಟ್‌ ಮಂಡಳಿ ಟ್ವೀಟ್ ಮಾಡಿದೆ.

ಪಂದ್ಯದ ವೇಳೆ ಡ್ಯಾರಿಲ್ ಮಿಚೆಲ್ ಅವರು ಜಾನಿ ಬೈರ್‌ಸ್ಟೋವ್ ಅವರ ಕ್ಯಾಚ್ ಪಡೆಯಲು ಯತ್ನಿಸಿದಾಗ ಗಾಯಗೊಂಡ ನಂತರ, ಟಿಮ್ ಸೌಥಿ ಗಾಯಗೊಂಡರು. ಡ್ಯಾರಿಲ್ ಮಿಚೆಲ್ ಅವರ ಎಡ ಉಂಗುರದ ಬೆರಳಿಗೆ ಗಾಯವಾಗಿದೆ ಎಂದು ವರದಿಯಾಗಿದೆ.

ಶುಕ್ರವಾರ, ಸೆಪ್ಟೆಂಬರ್ 15ರಂದು ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರಿಂದ, ಡ್ಯಾರಿಲ್ ಮಿಚೆಲ್ ಮತ್ತು ಟಿಮ್ ಸೌಥಿ ಇಬ್ಬರೂ ನ್ಯೂಜಿಲೆಂಡ್‌ನ ರನ್ ಚೇಸ್‌ನ ಭಾಗವಾಗಿರುವ ಬಗ್ಗೆ ಯಾವುದೇ ಮಾಹಿತಿಗಳಿಲ್ಲ.

ಟಿಮ್ ಸೌಥಿ ಮತ್ತು ಡ್ಯಾರಿಲ್ ಮಿಚೆಲ್ ನ್ಯೂಜಿಲೆಂಡ್‌ಗೆ ತಮ್ಮ ವೈಟ್-ಬಾಲ್ ತಂಡದಲ್ಲಿ ಪ್ರಮುಖ ಆಟಗಾರರಾಗಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್‌ಗಾಗಿ ಪ್ರಕಟಿಸಿದ ನ್ಯೂಜಿಲೆಂಡ್ ತಂಡದ ಭಾಗವಾಗಿ ಇಬ್ಬರೂ ಆಟಗಾರರಿದ್ದಾರೆ ಮತ್ತು ಅವರ ಗಾಯದ ಸೂಚನೆ ಇದೀಗ ಮುಂಬರುವ ಪಂದ್ಯಾವಳಿಯಲ್ಲಿ ತಂಡದ ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಿ ಪರಿಣಮಿಸಿದೆ.

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಡ್ಯಾರಿಲ್ ಮಿಚೆಲ್ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿ 192 ರನ್ ಗಳಿಸಿದ್ದರೆ, ಟೀಮ್ ಸೌಥಿ ಮೂರು ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಪಡೆದಿದ್ದಾರೆ.

Story first published: Friday, September 15, 2023, 20:43 [IST]
Other articles published on Sep 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+