
ಆರ್‌ಆರ್ ಪರ ಆಡಿದ್ದ ವೇಗಿ ಬೋಲ್ಟ್
ನ್ಯೂಜಿಲೆಂಡ್ ತಂಡದ ಅನುಭವಿ ಬೌಲರ್ ಟ್ರೆಂಟ್ ಬೋಲ್ಟ್ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡಿದ್ದು ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಈ ಟೂರ್ನಿಯನ್ನು ಮುಗಿಸಿ ನೇರವಾಗಿ ಆಗಮಿಸಿರುವ ಕಾರಣ ಬೋಲ್ಟ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆಯಿದೆ.

ನಿಕೋಲಸ್ ಹೆನ್ರಿ ಕೂಡ ಅನುಮಾನ
ಮತ್ತೊಂದೆಡೆ ಇಂಗ್ಲೆಂಡ್ ಪ್ರವಾಸಕ್ಕೆ ತೆರೆಳುವ ಮುನ್ನ ಗಾಯಕ್ಕೆ ತುತ್ತಾಗಿದ್ದ ನಿಕೋಲಸ್ ಹೆನ್ರಿ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಅವರು ಕೂಡ ಮೊದಲ ಪಂದ್ಯದಲ್ಲಿ ಆಡುವ ಸಾಧ್ಯತೆಯಿಲ್ಲ. ಹೆನ್ರಿ ಇಂಗ್ಲೆಂಡ್‌ನಲ್ಲಿ ಆಡಿದ ಅಭ್ಯಾಸ ಪಂದ್ಯಗಳಿಂದಲೂ ಸಂಪೂರ್ಣವಾಗಿ ಹೊರಗುಳಿದು ವಿಶ್ರಾಂತಿ ಪಡೆದಿದ್ದರು. ನಿಕೋಲಸ್ ಹೆನ್ರಿಗೆ ಪರ್ಯಾಯವಾಗಿ ಮೈಕಲ್ ಬ್ರೇಸ್‌ವೆಲ್ ಅವರನ್ನು ಆಯ್ಕೆ ಮಾಡಲಾಗಿದೆ. ಬ್ರೇಸ್‌ವೆಲ್ ಇಂಗ್ಲೆಂಡ್‌ಗೆ ಪ್ರವಾಸಕ್ಕೆ ತೆರಳಿದ್ದ ಬಳಿಕ ಕೊರೊನಾವೈರಸ್‌ಗೆ ತುತ್ತಾಗಿ ಪ್ರತ್ಯೇಕವಾಗಿದ್ದರು. ಈಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ಕೇನ್ ವಿಲಿಯಮ್ಸನ್ ಕಮ್‌ಬ್ಯಾಕ್
ಇನ್ನು ಈ ಸರಣಿ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್‌ಗೆ ಕಮ್‌ಬ್ಯಾಕ್ ಸರಣಿಯೂ ಹೌದು. ಅನುಭವಿ ಆಟಗಾರ 2021ರ ನವೆಂಬರ್‌ನಲ್ಲಿ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊನೆಯ ಬಾರಿಗೆ ಆಡಿದ್ದರು. ಅದಾದ ಬಳಿಕ ಗಾಯಕ್ಕೆ ತುತ್ತಾಗಿ ತಂಡದಿಮದ ಹೊರಗುಳಿದಿದ್ದರು.
ಕೇನ್ ವಿಲಿಯಮ್ಸನ್ ಈ ಬಾರಿಯ ಐಪಿಎಲ್‌ನಲ್ಲಿ ಕಮ್‌ಬ್ಯಾಕ್ ಮಾಡಿದ್ದು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ವೈಯಕ್ತಿಕವಾಗಿ ಕೇನ್ ವಿಲಿಯಮ್ಸನ್ ಪ್ರದರ್ಶನ ನಿರೀಕ್ಷಿತ ಮಟ್ಟವನ್ನು ಮುಟ್ಟುವಲ್ಲಿ ವಿಫಲವಾಗಿತ್ತು.

ನ್ಯೂಜಿಲೆಂಡ್ ಪ್ರಕಟಿಸಿದ 15 ಆಟಗಾರರ ಬಳಗ ಹೀಗಿದೆ
ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಟ್ರೆಂಟ್ ಬೌಲ್ಟ್, ಡೆವೊನ್ ಕಾನ್ವೇ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕ್ಯಾಮ್ ಫ್ಲೆಚರ್ (ವಿಕೆಟ್ ಕೀಪರ್), ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಅಜಾಜ್ ಪಟೇಲ್, ಟಿಮ್ ಸೌಥಿ, ನೀಲ್ ವ್ಯಾಗ್ನರ್, ವಿಲ್ ಯಂಗ್, ಮೈಕೆಲ್ ಬ್ರೇಸ್ವೆಲ್


Click it and Unblock the Notifications
