ದ. ಆಫ್ರಿಕಾ ವಿರುದ್ಧವೂ ಇಂಗ್ಲೆಂಡ್ ಹೀನಾಯ ಪ್ರದರ್ಶನ: ತವರಿನಲ್ಲಿ ಬಟ್ಲರ್ ಪಡೆಗೆ ಮತ್ತೊಂದು ಭಾರೀ ಸೋಲು

ಭಾರತದ ವಿರುದ್ಧದ ಎರಡು ಮಾದರಿಯ ವೈಟ್‌ಬಾಲ್ ಸರಣಿಯಲ್ಲಿಯೂ ತವರಿನಲ್ಲಿಯೇ ಸೋಲು ಅನುಭವಿಸಿರುವ ಇಂಗ್ಲೆಂಡ್ ಪಡೆ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿದಿದೆ. ತವರಿನಲ್ಲಿಯೇ ನಡೆಯುತ್ತಿರುವ ಈ ಸರಣಿಯ ಮೊದಲ ಪಂದ್ಯದಲ್ಲಿಯೂ ಇಂಗ್ಲೆಂಡ್ ತಂಡ ಭಾರೀ ಮುಖಭಂಗವನ್ನು ಅನುಭವಿಸಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 62 ರನ್‌ಗಳ ಅಂತರದಿಂದ ಭಾರೀ ಸೋಲು ಅನುಭವಿಸಿದೆ.
ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ನಡೆದ ಭರ್ಜರಿ 333 ರನ್‌ಗಳನ್ನು ಗಳಿಸಲು ಯಶಸ್ವಿಯಾಯಿತು. ವಾನ್ ಡರ್ ಡಸೆನ್ ಅವರ ಭರ್ಜರಿ ಶತಕದ ನೆರವಿನಿಂದಾಗಿ ಬೃಹತ್ ಮೊತ್ತದ ಗುರಿಯನ್ನು ನೀಡಲು ದಕ್ಷಿಣ ಆಫ್ರಿಕಾ ತಂಡ ಯಶಸ್ವಿಯಾಯಿತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ದೊರೆಯಿತಾದರೂ ಬಳಿಕ ಮಧ್ಯಮ ಕ್ರಮಾಂಖದ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಮತ್ತೊಂದು ಸೋಲು ಅನುಭವಿಸಿದೆ.

ದಕ್ಷಿಣ ಆಫ್ರಿಕಾ ಭರ್ಜರಿ ಬ್ಯಾಟಿಂಗ್
ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಆರಂಬಿಕ ಆಟಗಾರ ಕ್ವಿಂಟನ್ ಡಿಕಾಕ್ 19 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೂ ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟ ಬಂದಿತು. ಜನ್ನೆಮನ್ ಮಲನ್ ಅರ್ಧ ಶತಕ ಸಿಡಿಸಿದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಾನ್ ಡರ್ ಡಸೆನ್ ಅಮೋಘ ಶತಕ ಸಿಡಿಸಿದರು. 117 ಎಸೆತಗಳನ್ನು ಎದುರಿಸಿ 133 ರನ್‌ಗಳ ಕೊಡುಗೆ ನೀಡಿದರು. ನಂತರ ಬಂದ ಮಾರ್ಕ್ರಮ್ ಜೊತೆಗೂ ಶತಕದ ಜೊತೆಯಾಟ ನೀಡಿದರು ವಾನ್‌ಡರ್ ಡುಸೆನ್. ಮಾರ್ಕ್ರಮ್ ಬ್ಯಾಟ್‌ನಿಂದ 77 ರನ್‌ಗಳ ಕೊಡುಗೆ ಬಂದಿತು. ಕುತೂಹಲಕಾರಿ ಸಂಗತಿಯೆಂದರೆ ದಕ್ಷಿಣ ಆಫ್ರಿಕಾ ತಂಡ 334 ರನ್‌ಗಳ ಬೃಹತ್ ಗುರಿಯನ್ನು ನಿಗದಿಪಡಿಸಿದ್ದರೂ ತನ್ನ ಇನ್ನಿಂಗ್ಸ್‌ನಲ್ಲಿ ಒಂದೇ ಒಂದು ಸಿಕ್ಸರ್ ಸಿಡಿಸಿಲ್ಲ ಎಂಬುದು ಗಮನಾರ್ಹ ಅಂಶವಾಗಿದೆ.

ಇಂಗ್ಲೆಂಡ್ ಉತ್ತಮ ಆರಂಭ
334 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕರಾದ ಜೇಸನ್ ರಾಯ್ ಹಾಗೂ ಜಾನಿ ಬೈರ್‌ಸ್ಟೋವ್ ಅವರು ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ನೀಡಿದರು. ರಾಯ್ 43 ರನ್‌ಗಳಿಸಿದರೆ ಜಾನಿ ಬೈರ್‌ಸ್ಟೋವ್ 63 ರನ್‌ಗಳಿಸಿದರು. ನಂತರ ಬ್ಯಾಟಿಂಗ್‌ಗೆ ಇಳಿದ ಜೋ ರೂಟ್ 86 ರನ್‌ಗಳನ್ನು ಗಳಿಸಿದರು. ಆದರೆ ಬಳಿಕ ಬ್ಯಾಟಿಂಗ್‌ಗೆ ಇಳಿದ ಯಾವ ಆಟಗಾರರು ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಹೀಗಾಗಿ ಇಂಗ್ಲೆಂಡ್ ತಂಡ 271 ರನ್‌ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಈ ಮೂಲಕ 2 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ.
Stepping out in ODI cricket at his home ground for one last time.
— England Cricket (englandcricket) July 19, 2022
🏴 #ENGvSA 🇿🇦 | benstokes38 pic.twitter.com/oTUhHWQJku
ಬೆನ್ ಸ್ಟೋಕ್ಸ್ ಅಂತಿಮ ಏಕದಿನ ಪಂದ್ಯ
ಇನ್ನು ಈ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಇದು ತನ್ನ ಅಂತಿಮ ಏಕದಿನ ಪಂದ್ಯ ಎಂಬುದನ್ನು ಘೋಷಿಸಿದ್ದರು. ಆದರೆ ವಿದಾಯದ ಪಂದ್ಯದಲ್ಲಿಯೂ ಬೆನ್ ಸ್ಟೋಕ್ಸ್ ಮಿಂಚುವಲ್ಲಿ ವಿಫಲವಾಗಿದ್ದಾರೆ. ಭಾರತದ ವಿರುದ್ಧದ ವೈಟ್‌ಬಾಲ್ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಸ್ಟೋಕ್ಸ್ ದಕ್ಷಿಣ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿಯೂ ಬ್ಯಾಟಿಂಗ್‌ನಲ್ಲಿ ಕೇವಲ ರನ್‌ಗಳ ಕೊಡುಗೆ ನೀಡಲಷ್ಟೇ ಶಕ್ತವಾದರು. ಬೌಲಿಂಗ್‌ನಲ್ಲಿಯೂ ಯಾವುದೇ ವಿಕೆಟ್ ಪಡೆಯಲು ಅವರು ವಿಫಲವಾಗಿದ್ದಾರೆ.

ಎರಡು ತಂಡಗಳ ಪ್ಲೇಯಿಂಗ್ XI
ಇಂಗ್ಲೆಂಡ್: ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ನಾಯಕ & ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರನ್, ಆದಿಲ್ ರಶೀದ್, ಬ್ರೈಡನ್ ಕಾರ್ಸೆ, ಮ್ಯಾಟಿ ಪಾಟ್ಸ್
ಬೆಂಚ್: ಕ್ರೇಗ್ ಓವರ್ಟನ್, ಡೇವಿಡ್ ವಿಲ್ಲಿ, ರೀಸ್ ಟೋಪ್ಲಿ, ಫಿಲಿಪ್ ಸಾಲ್ಟ್
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಜಾನ್ನೆಮನ್ ಮಲನ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಆಂಡಿಲ್ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್ (ನಾಯಕ), ಅನ್ರಿಚ್ ನಾರ್ಕಿಯಾ, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ, ಡ್ವೈನ್ ಪ್ರಿಟೋರಿಯಸ್
ಬೆಂಚ್: ಲಿಜಾಡ್ ವಿಲಿಯಮ್ಸ್, ಖಯಾ ಜೊಂಡೋ, ಕೈಲ್ ವೆರ್ರೆನ್ನೆ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications