For Quick Alerts
ALLOW NOTIFICATIONS  
For Daily Alerts
 

ENG vs SA ODI: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ: ಸರಣಿ ವೈಟ್‌ವಾಶ್ ಮಾಡುವ ಗುರಿ

Eng vs SA ODI: South Africa Win The Toss And Elected Bowl First, Playing XI, Pitch Report

ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದಿರುವ ದಕ್ಷಿಣ ಆಫ್ರಿಕಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಕಿಂಬರ್ಲಿಯ ಡೈಮಂಡ್ ಓವಲ್‌ನಲ್ಲಿ ಈ ಪಂದ್ಯ ನಡೆಯುತ್ತಿದೆ.

ಈಗಾಗಲೇ ಸರಣಿಯ ಮೊದಲ ಎರಡೂ ಪಂದ್ಯಗಳನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ ಸರಣಿಯನ್ನು ವಶಪಡಿಸಿಕೊಂಡಿದೆ. ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡುವ ಗುರಿ ಹೊಂದಿದೆ.

ಮತ್ತೊಂದೆಡೆ ಇಂಗ್ಲೆಂಡ್‌ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಕ್ಲೀನ್‌ಸ್ವೀಪ್ ಅವಮಾನದಿಂದ ತಪ್ಪಿಸಿಕೊಳ್ಳುವ ಉದ್ದೇಶ ಹೊಂದಿದೆ. ಎರಡನೇ ಏಕದಿನ ಪಂದ್ಯದಲ್ಲಿ 342 ರನ್ ಕಲೆಹಾಕಿದ ಹೊರತಾಗಿಯೂ ಇಂಗ್ಲೆಂಡ್ ಸೋಲನುಭವಿಸಿತು.

ಬೃಹತ್ ಮೊತ್ತವನ್ನು ಗಳಿಸಿದರೂ ಇಂಗ್ಲೆಂಡ್ ಬೌಲರ್ ಗಳು ಅದನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾದರು. ಕೊನೆಯ ಪಂದ್ಯದಲ್ಲಿ ಉತ್ತಮ ಆಲ್‌ರೌಂಡ್ ಪ್ರದರ್ಶನ ನೀಡಿದರೆ ಮಾತ್ರ ಪಂದ್ಯವನ್ನು ಗೆಲ್ಲಬಹುದಾಗಿದೆ.

ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ದಕ್ಷಿಣ ಆಫ್ರಿಕಾ ಆತ್ಮವಿಶ್ವಾಸದಿಂದಲೇ ಕಣಕ್ಕಿಳಿಯಲಿದೆ. ನಾಯಕ ಟೆಂಬಾ ಬವುಮಾ ಎರಡನೇ ಏಕದಿನ ಪಂದ್ಯದಲ್ಲಿ ಶತಕ ಗಳಿಸಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಬಲಿಷ್ಠ ವೇಗದ ಬೌಲಿಂಗ್‌ ಪಡೆಯನ್ನು ಹೊಂದಿರುವ ದಕ್ಷಿಣ ಆಫ್ರಿಕಾ ಇಂಗ್ಲೆಂಡ್‌ ಬಲಿಷ್ಠ ಬ್ಯಾಟಿಂಗ್ ಪಡೆಗೆ ಕಡಿವಾಣ ಹಾಕಲು ಸಿದ್ಧವಾಗಿದೆ.

ಏಕದಿನ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯಬೇಕಾದರೆ ದಕ್ಷಿಣ ಆಫ್ರಿಕಾ ಈ ಸರಣಿಯನ್ನು ಗೆಲ್ಲಲೇಬೇಕಾಗಿದೆ. ಏಕದಿನ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯಲು ಸಹಕಾರಿಯಾಗಲಿದೆ.

ಬ್ಯಾಟಿಂಗ್‌ಗೆ ಸಹಕಾರಿಯಾದ ಪಿಚ್‌

ಡೈಮಂಡ್‌ ಓವಲ್ ಅಂಗಳವನ್ನು ಬ್ಯಾಟಿಂಗ್‌ ಸ್ವರ್ಗ ಎಂದೇ ಕರೆಯಲಾಗುತ್ತದೆ. ಫ್ಲ್ಯಾಟ್ ಪಿಚ್‌ ಹೊಂದಿದ್ದು, ಮೈದಾನ ಕೂಡ ಚಿಕ್ಕದಾಗಿರುವುದರಿಂದ ಹೈ ಸ್ಕೋರ್ ಪಂದ್ಯವನ್ನು ನಿರೀಕ್ಷಿಸಲಾಗಿದೆ. ಆರಂಭದಲ್ಲಿ ಬ್ಯಾಟರ್ ಸ್ವಲ್ಪ ಎಚ್ಚರಿಕೆಯಿಂದ ಆಡಿದರೆ ನಂತರ ಸುಲಭವಾಗಿ ಬೌಂಡರಿಗಳನ್ನು ಗಳಿಸಬಹುದಾಗಿದೆ.

Eng vs SA ODI: South Africa Win The Toss And Elected Bowl First, Playing XI, Pitch Report

ತಂಡದಲ್ಲಿ ಹಲವು ಬದಲಾವಣೆ

ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಮತ್ತು ಬೌಲರ್ ಕೇಶವ್ ಮಹರಾಜ ಆಡುವ ಬಳಗದಿಂದ ಹೊರಗುಳಿದಿದ್ದಾರೆ. ತಬ್ರೀಜ್ ಶಂಸಿ ಮತ್ತು ಸಿಸಂದ ಮಗಾಲ ತಂಡವನ್ನು ಸೇರಿಕೊಂಡಿದ್ದಾರೆ. ಡಿ ಕಾಕ್ ಅನುಪಸ್ಥಿತಿಯಲ್ಲಿ ಹೆನ್ರಿಕ್ ಕ್ಲಸೀನ್ ವಿಕೆಟ್ ಕೀಪರ್ ಆಗಲಿದ್ದಾರೆ.

ಇಂಗ್ಲೆಂಡ್‌ ತಂಡದಲ್ಲಿ ಕೂಡ ಒಂದು ಪ್ರಮುಖ ಬದಲಾವಣೆ ಮಾಡಿದೆ. ಎರಡನೇ ಪಂದ್ಯದಲ್ಲಿ ಹೊರಗುಳಿದಿದ್ದ ಜೋಫ್ರಾ ಆರ್ಚರ್ ಮತ್ತೆ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದು, ಓಲೀ ಸ್ಟೋನ್‌ ಆಡುವ ಬಳಗದಿಂದ ಹೊರಗುಳಿದಿದ್ದಾರೆ.

Eng vs SA ODI: South Africa Win The Toss And Elected Bowl First, Playing XI, Pitch Report

ಉಭಯ ತಂಡಗಳ ಆಡುವ ಬಳಗ

ಇಂಗ್ಲೆಂಡ್: ಜೇಸನ್ ರಾಯ್, ಡೇವಿಡ್ ಮಲನ್, ಬೆನ್ ಡಕೆಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್(ನಾಯಕ), ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಸ್ಯಾಮ್ ಕರನ್, ಆದಿಲ್ ರಶೀದ್, ರೀಸ್ ಟೋಪ್ಲಿ, ಜೋಫ್ರಾ ಆರ್ಚರ್

ದಕ್ಷಿಣ ಆಫ್ರಿಕಾ : ರೀಜಾ ಹೆಂಡ್ರಿಕ್ಸ್, ಟೆಂಬಾ ಬವುಮಾ(ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್(ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ವೇಯ್ನ್ ಪಾರ್ನೆಲ್, ಸಿಸಂದಾ ಮಗಾಲಾ, ಲುಂಗಿ ಎನ್ಗಿಡಿ, ತಬ್ರೈಜ್ ಶಮ್ಸಿ

Story first published: Wednesday, February 1, 2023, 16:23 [IST]
Other articles published on Feb 1, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+