Eng vs SA: 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ಗೆ ಕಠಿಣ ಸಂದೇಶ ರವಾನಿಸಿದ ದ. ಆಫ್ರಿಕಾ ನಾಯಕ

ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿರುವ ದಲಕ್ಷಕ್ಷಿಣ ಆಪ್ರಿಕಾ ಎರಡನೇ ಪಂದ್ಯದಲ್ಲಿಯೂ ಅಂಥಾದ್ದೇ ಪ್ರದರ್ಶನ ನೀಡುವ ಆತ್ಮ ವಿಶ್ವಾಸದಲ್ಲಿದೆ. ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಇಂಗ್ಲೆಂಡ್ ತಂಡಕ್ಕೆ ಕಠಿಣ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಬೌಲರ್‌ಗಳು ಮತ್ತಷ್ಟು ರೌದ್ರಾವತಾರ ತಾಳುವ ಸೂಚನೆ ನೀಡಿದ್ದಾರೆ. ಎರಡನೇ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾದ ಬೌಲರ್‌ಗಳು ಮತ್ತಷ್ಟು ಉತ್ತಮ ಪ್ರದರ್ಶನ ನೀಡಲಿದ್ದಾರೆ ಯಾಕೆಂದರೆ ಅವರು ಹೆಚ್ಚು ಉಲ್ಲಾಸಿತರಾಗಿದ್ದಾರೆ ಎಂದಿದ್ದಾರೆ ನಾಯಕ ಡೀನ್ ಎಲ್ಗರ್.

ಆ ಒಂದು ವರ್ಷ ಏಷ್ಯಾಕಪ್ ಆಡಲೇ ಇಲ್ಲ ಟೀಮ್ ಇಂಡಿಯಾ; ಕಾರಣ ಶ್ರೀಲಂಕಾ!ಆ ಒಂದು ವರ್ಷ ಏಷ್ಯಾಕಪ್ ಆಡಲೇ ಇಲ್ಲ ಟೀಮ್ ಇಂಡಿಯಾ; ಕಾರಣ ಶ್ರೀಲಂಕಾ!

ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದುಕೊಂಡಿರುವ ದಕ್ಷಿಣ ಆಫ್ರಿಕಾ ತಂಡ ಆತ್ಮವಿಶ್ವಾಸದಿಂದ ಬೀಗುತ್ತಿದೆ. ತಂಡದ ಬೌಲಿಂಗ್ ವಿಭಾಗ ನೀಡಿದ ಸಾಂಘಿಕ ಪ್ರದರ್ಶನ ಮೊದಲ ಪಂದ್ಯದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿತ್ತು. ಇದೀಗ ಎರಡನೇ ಪಂದ್ಯದಲ್ಲಿಯೂ ಅಂಥಾದ್ದೇ ಪ್ರದರ್ಶನವನ್ನು ನೀಡುವ ವಿಶ್ವಾಸದಲ್ಲಿದೆ ದಕ್ಷಿಣ ಆಫ್ರಿಕಾ. ಈ ಪಂದ್ಯದಲ್ಲಿ ಗೆದ್ದು ಟೆಸ್ಟ್ ಸರಣಿಯನ್ನು ವಶಕ್ಕೆ ಪಡೆಯುವ ಪ್ರಯತ್ನ ನಡೆಸಲಿದೆ ದಕ್ಷಿಣ ಆಫ್ರಿಕಾ ತಂಡ.

ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಕೈಕೊಟ್ಟ ಬ್ಯಾಟಿಂಗ್ ವಿಭಾಗ: ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ವಿಭಾಗ ಅತ್ಯಂತ ಹೀನಾಯ ಪ್ರದರ್ಶನ ನೀಡಿತು. ಇದರ ಪರಿಣಾಮವಾಗಿ ಇನ್ನಿಂಗ್ಸ್ ಅಂತರದಿಂದ ಇಂಗ್ಲೆಂಡ್ ಸೋಲು ಅನುಭವಿಸಿತ್ತು. ಆರಂಭಿಕ ಆಟಗಾರರಾದ ಅಲೆಕ್ಸ್ ಲೀಸ್ ಹಾಗೂ ಜಾಕ್ ಕ್ರಾವ್ಲೆ ಆರಂಭಿಕರಾಗಿ ಮ್ಯಾಂಚೆಸ್ಟರ್‌ನ ಪಂದ್ಯದಲ್ಲಿ ಉತ್ತಮ ಆರಂಭವನ್ನು ನೀಡಬೇಕಿದೆ. ಇನ್ನು ಅಗ್ರ ಶ್ರೇಯಾಂಕದ ಆಟಗಾರ ಜೋ ರೂಟ್ ಕಳೆದ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು ಮತ್ತೆ ಫಾರ್ಮ್‌ಗೆ ಮರಳುವ ವಿಶ್ವಾಸದಲ್ಲಿದ್ದಾರೆ. ಇನ್ನು ಜಾನಿ ಬೈರ್‌ಸ್ಟೋವ್ ನಾಯಕ ಬೆನ್ ಸ್ಟೋಕ್ಸ್ ಮಧ್ಯಮ ಕ್ರಮಾಂಕದಲ್ಲಿ ನೆರವಾಗುವ ನಿರೀಕ್ಷೆಯಲ್ಲಿದ್ದಾರೆ.

ಮಹಾರಾಜ ಟ್ರೋಫಿ: ಮಯಾಂಕ್ ‌ಅಬ್ಬರದ ಶತಕಕ್ಕೆ ಮನೀಶ್ ತಂಡ ಉಡೀಸ್; ಬೆಂಗಳೂರು ಫೈನಲ್‌ಗೆ!ಮಹಾರಾಜ ಟ್ರೋಫಿ: ಮಯಾಂಕ್ ‌ಅಬ್ಬರದ ಶತಕಕ್ಕೆ ಮನೀಶ್ ತಂಡ ಉಡೀಸ್; ಬೆಂಗಳೂರು ಫೈನಲ್‌ಗೆ!

ಇಂಗ್ಲೆಂಡ್ ಆಡುವ ಬಳಗ: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಆಲಿ ರಾಬಿನ್ಸನ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
ದಕ್ಷಿಣ ಆಫ್ರಿಕಾ ಸಂಪೂರ್ಣ ಸ್ಕ್ವಾಡ್: ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಕಿಯಾ, ರಾಸ್ಸಿ ವಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್‌ರಾಮ್, ಕಗಿಸೊ ರಬಾಡ, ಡೀನ್ ಎಲ್ಗರ್ (ನಾಯಕ), ಸರೆಲ್ ಎರ್ವೀ, ಕೀಗನ್ ಪೀಟರ್ಸನ್, ಖಯಾ ಜೊಂಡೋ, ಮಾರ್ಕೊ ಜಾನ್ಸೆನ್, ರಯಾನ್ ರಿಕೆಲ್ಟನ್, ಕೈಲ್ ವೆರ್ರೆನ್ನೆ, ಸೈಮನ್ ಹಾರ್ಮರ್, ಗ್ಲೆಂಟನ್ ಸ್ಟೌರ್ಮನ್, ಲುಥೋ ಸಿಪಾಮ್ಲಾ

For Quick Alerts
ALLOW NOTIFICATIONS
For Daily Alerts
Story first published: Wednesday, August 24, 2022, 20:59 [IST]
Other articles published on Aug 24, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X