For Quick Alerts
ALLOW NOTIFICATIONS  
For Daily Alerts
 

ENG vs SL Test: ಏಳನೇ ಕ್ರಮಾಂಕದಲ್ಲಿ ಶತಕ ಬಾರಿಸಿದ ಕಮಿಂದು ಮೆಂಡಿಸ್‌

ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಶ್ರೀಲಂಕಾ ತಂಡದ ಯುವ ಬ್ಯಾಟರ್‌ಮ ಕಮಿಂದು ಮೆಂಡಿಸ್‌ ಶತಕ ಬಾರಿಸಿದ್ದಾರೆ. ತಮ್ಮ ಟೆಸ್ಟ್‌ ವೃತ್ತಿ ಜೀವನದ ನಾಲ್ಕನೇ ಟೆಸ್ಟ್‌ ಪಂದ್ಯದ ಏಳನೇ ಇನಿಂಗ್ಸ್‌ನಲ್ಲಿ ಮೂರನೇ ಶತಕ ಬಾರಿಸಿದ್ದಾರೆ. 25 ವಯಸ್ಸಿನ ಯುವ ಆಟಗಾರನ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಅವರು ಈ ಶತಕ ಸಿಡಿಸಿದರು.

ಇಂಗ್ಲೆಂಡ್‌ನಲ್ಲಿ ಕಮಿಂದು ಮೆಂಡಿಸ್ ಇತಿಹಾಸವನ್ನು ನಿರ್ಮಿಸಿದ್ದಾರೆ. ಟೆಸ್ಟ್‌ನಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಶತಕ ಬಾರಿಸಿದ ಲಂಕಾ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಲಂಕಾ ತಂಡಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಆಧಾರವಾದ ಕಮಿಂದು ಮೆಂಡಿಸ್ ಸಮಯೋಚಿತ ಬ್ಯಾಟ್ ನಡೆಸಿದರು. ಇದು ಅವರ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಮೂರನೇ ಶತಕವಾಗಿದೆ. ಇಷ್ಟೇ ಅಲ್ಲದೆ ಇವರು ಎರಡು ಬಾರಿ 50ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ.

Kamindu Mendis Scores a Century at Number 7 Leads Sri Lanka s Fightback Against England in Manchester Test

2022ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಮೆಂಡಿಸ್ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದರು. ಈ ವರ್ಷ ಬಾಂಗ್ಲಾದೇಶ ವಿರುದ್ಧ ನಡೆದ ಟೆಸ್ಟ್‌ ಪಂದ್ಯದಲ್ಲಿ ಕಮಿಂದು ಮೆಂಡಿಸ್‌ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ್ದರು. ಇಂಗ್ಲೆಂಡ್‌ ವಿರುದ್ಧದ ಎರಡನೇ ಇನಿಂಗ್ಸ್‌ನಲ್ಲಿ ಕಮಿಂದು 183 ಎಸೆತಗಳಲ್ಲಿ 15 ಬೌಂಡರಿ, 1 ಸಿಕ್ಸರ್ ಸಹಾಯದಿಂದ 113 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಇವರು ಬಾರಿಸಿದ ಶತಕದ ಪ್ರಭಾವದಿಂದ ಪ್ರವಾಸಿ ತಂಡ 205 ರನ್‌ಗಳ ಉತ್ತಮ ಗುರಿಯನ್ನು ನೀಡಲು ನೆರವಾಯಿತು.

ಇಂಗ್ಲೆಂಡ್‌ಗೆ ಜಯ

ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಬೆನ್ ಡಕೆಟ್ (11), ಡಾನ್ ಲಾರೆನ್ಸ್ (34) ಹಾಗೂ ಓಲಿ ಪೋಪ್ (6) ಜವಾಬ್ದಾರಿ ಮರೆತರು. ಹ್ಯಾರಿ ಬ್ರೂಕ್‌ ಸಹ 32 ರನ್‌ಗಳಿಗೆ ಆಟ ಮುಗಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದ ಜೇಮಿ ಸ್ಮಿತ್‌ ಎರಡನೇ ಇನಿಂಗ್ಸ್‌ನಲ್ಲಿ 39 ರನ್‌ಗಳ ಕಾಣಿಕೆ ನೀಡಿದರು.

ಒಂದು ಬದಿಯಲ್ಲಿ ವಿಕೆಟ್‌ಗಳು ಬೀಳುತ್ತಾ ಇದ್ದರೂ ಇಂಗ್ಲೆಂಡ್ ತಂಡದ ಭರವಸೆಯ ಆಟಗಾರ ಜೋ ರೂಟ್, ಆಕರ್ಷಕ ಆಟ ಪ್ರದರ್ಶಿಸಿದರು. ಇವರು 128 ಎಸೆತಗಳಲ್ಲಿ ಕೇವಲ 2 ಬೌಂಡರಿ ನೆರವಿನಿಂದ ಅಜೇಯ 62 ರನ್ ಬಾರಿಸಿ ತಂಡಕ್ಕೆ ಗೆಲುವಿನ ಹಾರ ತೊಡಿಸಿದರು. ಅಂತಿಮವಾಗಿ ಇಂಗ್ಲೆಂಡ್ 57.2 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 205 ರನ್‌ ಸೇರಿಸಿ ಜಯ ಸಾಧಿಸಿತು.

ಈ ಜಯದ ಮೂಲಕ ಇಂಗ್ಲೆಂಡ್‌ 5 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ.

Story first published: Saturday, August 24, 2024, 23:52 [IST]
Other articles published on Aug 24, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+