For Quick Alerts
ALLOW NOTIFICATIONS  
For Daily Alerts
 

ಬೆರಳಿನ ಗಾಯದ ಅಪ್‌ಡೇಟ್ ನೀಡಿದ ಆಲ್ ರೌಂಡರ್ ಬೆನ್ ಸ್ಟೋಕ್ಸ್

England all-rounder Ben Stokes provides finger injury update

ಲಂಡನ್: ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ತನ್ನ ಕೈ ಬೆರಳಿನ ಗಾಯ ಗುಣವಾಗುತ್ತಿರುವ ಬಗ್ಗೆ ಅಪ್‌ಡೇಟ್ಸ್ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಪೋಸ್ಟ್ ಮಾಡಿರುವ ಸ್ಟೋಕ್ಸ್, ಕೈ ಬೆರಳಿನ ಗಾಯ ಗುಣವಾಗುತ್ತಿರುವುದಾಗಿ ಖುಷಿ ತೋರಿಕೊಂಡಿದ್ದಾರೆ. ಗಾಯಕ್ಕೀಡಾಗಿದ್ದರಿಂದ ಸ್ಟೋಕ್ಸ್ ಮುಂಬರಲಿರುವ ಟಿ20 ವಿಶ್ವಕಪ್‌ನಲ್ಲೂ ಆಡುತ್ತಿಲ್ಲ.

30ರ ಹರೆಯದ ಬೆನ್ ಸ್ಟೋಕ್ಸ್ ತನ್ನ ಎಡಗೈಯ ತೋರು ಬೆರಳಿಗೆ ಹಾಕಲಾಗಿದ್ದ ಎರಡು ಸ್ಕ್ರೂಗಳು ಮತ್ತು ಗಾಯದ ಅಂಗಾಂಶ ತೆಗೆಸಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಆಡುತ್ತಿದ್ದಾಗ ಸ್ಟೋಕ್ಸ್ ಕೈ ಬೆರಳಿಗೆ ಗಾಯವಾಗಿತ್ತು. ಐಪಿಎಲ್‌ನಲ್ಲಿ ಸ್ಟೋಕ್ಸ್ ಅವರು ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಆಟಗಾರರಾಗಿದ್ದರು.

ಅಕ್ಟೋಬರ್‌ 11ರಂದು ಸ್ಟೋಕ್ಸ್ ಒಂದು ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಇದರಲ್ಲಿ ಸ್ಟೋಕ್ಸ್ ಬ್ಯಾಟ್ ಹಿಡಿದುಕೊಂಡಿರುವ ಚಿತ್ರವಿತ್ತು. "ಏಪ್ರಿಲ್ 12ರಂದು ಮುರಿದುಕೊಂಡ ಬೆರಳಿನಿಂದ ಅಕ್ಟೋಬರ್ 11ಕ್ಕೆ ಮೊದಲ ಬಾರಿಗೆ ಬ್ಯಾಟ್ ಹಿಡಿಯಲು ಸಾಧ್ಯವಾಗಿದೆ," ಎಂದು ಸ್ಟೋಕ್ಸ್ ಆ ಟ್ವಿಟರ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

ತನ್ನ ಪೋಸ್ಟ್‌ ಜೊತೆಗೆ ಸ್ಟೋಕ್ಸ್ ಹಲ್ಲು ಕಿಸಿಯುವ ಐದು ಇಮೋಜಿಗಳನ್ನೂ ಹಾಕಿಕೊಂಡಿದ್ದಾರೆ. ಗಾಯ ಮತ್ತು ಮಾನಸಿಕ ಆರೋಗ್ಯದ ಕಾರಣ ನೀಡಿದ್ದ ಸ್ಟೋಕ್ಸ್ ಕ್ರಿಕೆಟ್‌ನಿಂದ ಕಳೆದ ಜುಲೈನಿಂದ ಅನಿರ್ದಿಷ್ಟಾವಧಿ ಬಿಡುವು ಪಡೆದುಕೊಂಡಿದ್ದರು. ಆದರೆ ಅಕ್ಟೋಬರ್‌ 8ರ ಶುಕ್ರವಾರ ಸ್ಟೋಕ್ಸ್ ಮತ್ತೆ ಇಂಗ್ಲೆಂಡ್ ಜೊತೆಗಿನ ಒಪ್ಪಂದ ಉಳಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Story first published: Tuesday, October 12, 2021, 17:26 [IST]
Other articles published on Oct 12, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+