ಇಂಗ್ಲೆಂಡ್ ಆಲ್ ರೌಂಡರ್ ಮೊಯೀನ್ ಅಲಿಗೆ ಕೊರೊನಾ ಪಾಸಿಟಿವ್

ಲಂಡನ್: ಇಂಗ್ಲೆಂಡ್ ಆಲ್ ರೌಂಡರ್ ಮೊಯೀನ್ ಅಲಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಸೋಮವಾರ (ಡಿಸೆಂಬರ್ 4) ಈ ವಿಚಾರವನ್ನು ಖಾತರಿಪಡಿಸಿದೆ. ಮೊಯೀನ್ ಈಗ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಶ್ರೀಲಂಕಾದಲ್ಲಿದ್ದಾರೆ.
ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡ ಸದ್ಯ ಶ್ರೀಲಂಕಾದಲ್ಲಿದೆ. ಭಾನುವಾರ (ಡಿಸೆಂಬರ್ 3) ಇಂಗ್ಲೆಂಡ್ ತಂಡದ ಎಲ್ಲಾ ಆಟಗಾರರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಇದರಲ್ಲಿ ಮೊಯೀನ್ ಅಲಿ ಮಾತ್ರ ಪಾಸಿಟಿವ್ ಬಂದಿರುವುದಾಗಿ ತಿಳಿದುಬಂದಿದೆ.
'ಜನವರಿ 3ರ ಭಾನುವಾರ ಹಂಬಂಟೋಟಾದ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಆಟಗಾರರಿಗೆ ಪಿಸಿಆರ್ ಪರೀಕ್ಷೆಗಳನ್ನು ನಡೆಸಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಮೊಯಿನ್ ಅಲಿಗೆ ಕೊರೊನಾವೈರಸ್ ಪಾಸಿಟಿವ್ ಬಂದಿರುವುದನ್ನು ಖಾತರಿಪಡಿಸಿದೆ,' ಎಂದು ಇಸಿಬಿ ತನ್ನ ಹೇಳಿಕೆ ಮೂಲಕ ತಿಳಿಸಿದೆ.
'ಶ್ರೀಲಂಕಾದಲ್ಲಿನ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳಂತೆ ಮೊಯೀನ್ ಅವರನ್ನು ಸದ್ಯ 10 ದಿನಗಳ ಐಸೊಲೇಶನ್‌ನಲ್ಲಿ ಇಡಲಾಗಿದೆ,' ಎಂದು ಇಸಿಬಿ ಹೇಳಿದೆ. ಇಂಗ್ಲೆಂಡ್-ಶ್ರೀಲಂಕಾ ಟೆಸ್ಟ್ ಸರಣಿ ಜನವರಿ 14ರಿಂದ ಆರಂಭಗೊಳ್ಳಲಿದೆ. ಎರಡೂ ಪಂದ್ಯಗಳು ಗ್ಯಾಲೆಯಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications