ಇಂಗ್ಲೆಂಡ್, ಆಸ್ಟ್ರೇಲಿಯಾ ಆಟಗಾರರಿಗೆ ಕ್ವಾರಂಟೈನ್ ಬೇಕಿಲ್ಲ: ಆರ್‌ಸಿಬಿ ಅಧ್ಯಕ್ಷ

ಬೆಂಗಳೂರು, ಆಗಸ್ಟ್ 20: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳಲಿರುವ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಆಟಗಾರರು ಜೈವಿಕ ಸುರಕ್ಷಾ ಪರಿಸರದೊಳಕ್ಕೆ ಪ್ರವೇಶಿಸುವ ಮುನ್ನ 6 ದಿನಗಳ ಕ್ವಾರಂಟೈನ್ ಪಾಲಿಸಬೇಕಾದ ಅಗತ್ಯವಿಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧ್ಯಕ್ಷ ಸಂಜೀವ್ ಚೂರಿವಾಲ ಹೇಳಿದ್ದಾರೆ.
ಆರ್‌ಸಿಬಿ ತಂಡದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಆ್ಯರನ್ ಫಿಂಚ್, ಮೊಯೀನ್ ಅಲಿ ಸೇರಿದಂತೆ ಇನ್ನೊಂದಿಷ್ಟು ಆಟಗಾರರು ಇದ್ದಾರೆ. ಐಪಿಎಲ್‌ಗೂ ಮುನ್ನ ಎರಡೂ ತಂಡಗಳ ಆಟಗಾರರು ದ್ವಿಪಕ್ಷೀಯ ಸರಣಿಯಲ್ಲಿ ಬ್ಯುಸಿ ಇರಲಿದ್ದಾರೆ.
ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ತಂಡ ಅಲ್ಲಿ ಸೆಪ್ಟೆಂಬರ್ 4ರಿಂದ ಮೂರು ಟಿ20ಐ ಮತ್ತು ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಇತ್ತಂಡಗಳ ಸರಣಿ ಕೊನೆಗೊಳ್ಳೋದು ಸೆಪ್ಟೆಂಬರ್ 16ರಂದು. ಹೀಗಾಗಿ ಐಪಿಎಲ್‌ಗೂ ಮುನ್ನ ಕ್ವಾರಂಟೈನ್ ಪಾಲಿಸೋದು ಇಂಗ್ಲೆಂಡ್, ಆಸ್ಟ್ರೇಲಿಯಾ ಆಟಗಾರರಿಗೆ ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಕ್ವಾರಂಟೈನ್ ಪಾಲಿಸಿದರೂ ಮೊದಲ ವಾರ ಐಪಿಎಲ್‌ನಿಂದ ದೂರ ಇರಬೇಕಾಗುತ್ತದೆ.
'ಯುಎಇಯಲ್ಲಿ ಪ್ರತಿಯೊಬ್ಬ ಆಟಗಾರನೂ ಕ್ವಾರಂಟೈನ್ ಪಾಲಿಸಲೇಬೇಕು ಅಂತ ಬಿಸಿಸಿಐ ಸ್ಪಷ್ಟವಾಗಿ ಹೇಳಿದೆ. ಆದರೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಆಟಗಾರರು ಸರಣಿ ಆಡುವಾಗ ಅದಾಗಲೇ ಜೈವಿಕ ಸುರಕ್ಷಾ ಪರದೆಯೊಳಗಿರುವುದರಿಂದ ಅವರಿಗೆ ಯುಎಇಯಲ್ಲಿ ಕ್ವಾರಂಟೈನ್ ಬೇಕಿಲ್ಲ. ಹಾಗಂತ ಅವರು ಕೊರೊನಾ ಪರೀಕ್ಷೆಯ ಬಳಿಕವೇ ಐಪಿಎಲ್‌ನಲ್ಲಿ ಆಡಲಿದ್ದಾರೆ,' ಎಂದು ಚೂರಿವಾಲಾ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications