ಲಂಡನ್, ಸೆಪ್ಟೆಂಬರ್ 27: ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಆ್ಯಶಸ್ ಕ್ರಿಕೆಟ್ ಸರಣಿಗಾಗಿ 16 ಆಟಗಾರರುಳ್ಳ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ.
ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯ ಆಯ್ಕೆ ಮಂಡಳಿ ಅಧ್ಯಕ್ಷ ಜೇಮ್ಸ್ ವಿಕೇಟರ್, ತಂಡದ ನಾಯಕನ ಸ್ಥಾನದಲ್ಲಿ ಜೊ ರೂಟ್ ಹಾಗೂ ಉಪನಾಯಕನ ಸ್ಥಾನದಲ್ಲಿ ಬೆನ್ ಸ್ಟೋಕ್ಸ್ ಅವರು ಮುಂದುವರಿಯಲಿದ್ದಾರೆಂದು ತಿಳಿಸಿದರು.

ಅಂದಹಾಗೆ, ನೂತನವಾಗಿ ಪ್ರಕಟಗೊಂಡ ತಂಡದಲ್ಲಿ ಮೂವರು ಹೊಸಬರಿಗೆ ಅಂತಾರಾಷ್ಟ್ರೀಯ ಟೆಸ್ಟ್ ಆಡುವ ಅವಕಾಶ ನೀಡಲಾಗಿದೆ. ಹ್ಯಾಂಪ್ ಶೈರ್ ಕ್ರಿಕೆಟ್ ತಂಡದ ವೇಗದ ಬೌಲರ್ ಕ್ರೇಗ್ ಓವರ್ ಟನ್, ಸ್ಪಿನ್ನರ್ ಮ್ಯಾಸನ್ ಕ್ರೇನ್, ಸರೆ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬೆನ್ ಪೋಕ್ಸ್ ಅವರಿಗೆ ಹೊಸ ತಂಡದಲ್ಲಿ ಅವಕಾಶ ನೀಡಲಾಗಿದೆ.
ಅಕ್ಟೋಬರ್ 28ರಿಂದ ನವೆಂಬರ್ 23ರವರೆಗೆ ನಡೆಯಲಿರುವ ಆ್ಯಶಸ್ ಸರಣಿಯಲ್ಲಿ ಐದು ಟೆಸ್ಟ್ ಪಂದ್ಯಗಳು ನಡೆಯಲಿದ್ದು ಪ್ರಕಟಗೊಂಡಿರುವ ಇಂಗ್ಲೆಂಡ್ ತಂಡ ಇಂತಿದೆ.
ಜೊ ರೂಟ್ (ನಾಯಕ), ಬೆನ್ ಸ್ಟೋಕ್ಸ್ (ಉಪನಾಯಕ), ಅಲಸ್ಟೇರ್ ಕುಕ್, ಮಾರ್ಕ್ ಸ್ಟೋನ್ ಮನ್, ಜೇಮ್ಸ್ ವಿನ್ಸ್, ಡಾವಿನ್ ಮಲಾನ್, ಜಾನಿ ಬೇರ್ ಸ್ಟೋ (ವಿಕೆಟ್ ಕೀಪರ್), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್, ಗ್ಯಾರಿ ಬಾಲನ್ಸ್, ಜೇಕ್ ಬಾಲ್, ಕ್ರೇಗ್ ಓವರ್ಟನ್, ಮ್ಯಾಸನ್ ಕ್ರೇನ್, ಬೆನ್ ಫೋಕ್ಸ್ (ವಿಕೆಟ್ ಕೀಪರ್).