Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ: ಇಬ್ಬರು RCB ಪ್ಲೇಯರ್‌ಗೆ ಅವಕಾಶ

ಚಾಂಪಿಯನ್ಸ್ ಟ್ರೋಫಿ ಆರಂಭವಾಗಿದೆ. ಈಗ ಲೀಗ್‌ ಹಂತದ ಪಂದ್ಯಗಳು ಶುರುವಾಗಿವೆ. ಈ ಟೂರ್ನಿಯ ಕಾವು ಈಗ ವಿಶ್ವವ್ಯಾಪಿ ಆವರಿಸಿಕೊಳ್ಳಲು ತಯಾರಿ ನಡೆಸಿದೆ. ಈ ಟೂರ್ನಿಯಲ್ಲಿ ಹಲವು ಪಂದ್ಯಗಳನ್ನು ನೋಡಲು ಜನ ಕಾತುರತೆಯಿಂದ ಕಾಯುತ್ತಾ ಇರುತ್ತಾರೆ. ಅದರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಫೈಟ್. ಹಾಗೇ ಜನ ಬಹು ಕಾಯುವ ಮತ್ತೊಂದು ಪಂದ್ಯ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡುವಿನ ಕಾದಾಟ. ಈ ಎರಡೂ ದೇಶಗಳು ಯಾವಾಗ ಕಣಕ್ಕೆ ಇಳಿದ್ರೂ ಜಿದ್ದಾಜಿದ್ದು ಕಂಡು ಬರುತ್ತದೆ.

ಶನಿವಾರ "ಬಿ" ಗುಂಪಿನಲ್ಲಿ ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಈ ಎರಡೂ ತಂಡಗಳು ಬಲಿಷ್ಠವಾಗಿದ್ದು, ರೋಚಕತೆ ಹೆಚ್ಚಿಸಿದೆ. ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು ಅಭಿಮಾನಿಗಳ ಚಿತ್ತ ಕದ್ದಿದೆ. ಈ ಪಂದ್ಯಕ್ಕೆ ಇನ್ನು ಎರಡು ದಿನ ಇರುವಾಗಲೇ ಇಂಗ್ಲೆಂಡ್‌ ತನ್ನ ತಂಡವನ್ನು ಪ್ರಕಟಿಸಿದೆ. ಅಂದರೆ ಗುರುವಾರ ರಾತ್ರಿಯ ವೇಳೆಗೆ ಇಂಗ್ಲೆಂಡ್ ತನ್ನ ಪ್ಲೇಯಿಂಗ್ ಇಲೆವೆನ್ ಘೋಷಿಸಿದೆ. ಈ ತಂಡ ನಿಜಕ್ಕೂ ಆಸೀಸ್‌ ತಂಡಕ್ಕೆ ಮೈದಾನಕ್ಕೆ ಇಳಿಯುವ ಮುನ್ನವೇ ಗಾಬರಿ ಹುಟ್ಟಿಸುವಂತೆ ಇದೆ.

England Announces Squad for Australia Clash in Champions Trophy Includes Two RCB Players

ಪ್ರಕಟಿತ ತಂಡದಲ್ಲಿ ಇಬ್ಬರು ಆರ್‌ಸಿಬಿ ಪ್ಲೇಯರ್ಸ್‌

ಇಂಗ್ಲೆಂಡ್ ಪ್ರಕಟಿಸಿರುವ ತಂಡದಲ್ಲಿ ಇಬ್ಬರು ಆರ್‌ಸಿಬಿ ಪ್ಲೇಯರ್‌ಗಳು ಸ್ಥಾನ ಪಡೆದಿದ್ದಾರೆ. ಆರಂಭಿಕರಾಗಿ ಕಾಣಿಸಿಕೊಳ್ಳುವ ಫಿಲ್ ಸಾಲ್ಟ್‌ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಆಲ್‌ರೌಂಡರ್ ಲಿಯಾಮ್‌ ಲಿವೀಂಗ್‌ ಸ್ಟೋನ್‌ ಸ್ಥಾನ ಪಡೆದಿದ್ದಾರೆ. ಗಾಯಕ್ಕೆ ತುತ್ತಾಗಿರುವ ಜಾಕಬ್ ಬೇತೆಲ್‌ ಮೊದಲ ಪಂದ್ಯದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಇಂಗ್ಲೆಂಡ್ ತಂಡದಲ್ಲಿ ಜೋಸ್‌ ಬಟ್ಲರ್, ಜೋ ರೂಟ್‌, ಬೆನ್ ಡಕೆಟ್ ಅವರಂತಹ ಬಲಿಷ್ಠ ಬ್ಯಾಟ್ಸ್‌ಮನ್‌ ಗಳಿದ್ದಾರೆ. ಜೇಮೀ ಸ್ಮಿತ್ ತಂಡಕ್ಕೆ ಮರಳಿದ್ದಾರೆ. ಇವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ. ಜೋಫ್ರಾ ಆರ್ಚರ್, ಬ್ರೈಡನ್ ಕಾರ್ಸೆ ಮತ್ತು ಮಾರ್ಕ್ ವುಡ್ ವೇಗದ ಬೌಲಿಂಗ್ ನೊಗವನ್ನು ಹೊರಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಆದಿಲ್ ರಶೀದ್ ಸ್ಥಾನ ಪಡೆದಿದ್ದು, ನುರಿತ ಸ್ಪಿನ್ ಬೌಲರ್ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅಲ್ಲದೆ ಪಾರ್ಟ್‌ ಟೈಮ್‌ ಸ್ಪಿನ್ ಬೌಲರ್‌ಗಳಾಗಿ ಜೋ ರೂಟ್, ಲಿಯಾಮ್ ಲಿವಿಂಗ್‌ಸ್ಟೋನ್‌ ಸಹ ಜವಾಬ್ದಾರಿ ಹೊರಲು ತಯಾರಾಗಿದ್ದಾರೆ. ಆಸ್ಟ್ರೇಲಿಯಾ ತನ್ನ ಪ್ಲೇಯಿಂಗ್ ಇಲೆವೆನ್‌ ಬಿಡುಗಡೆ ಮಾಡಿಲ್ಲ. ಈ ತಂಡ ಶುಕ್ರವಾರ ಪ್ರಕಟಿಸುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾದ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ತಂಡ: ಫಿಲ್ ಸಾಲ್ಟ್, ಬೆನ್ ಡಕೆಟ್, ಜೇಮೀ ಸ್ಮಿತ್ (ವಿಕೆಟ್ ಕೀಪರ್), ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್, ಆದಿಲ್ ರಶೀದ್ ಮತ್ತು ಮಾರ್ಕ್ ವುಡ್.

England Announces Squad for Australia Clash in Champions Trophy Includes Two RCB Players

ಐಸಿಸಿ ಚಾಂಪಿಯನ್ಸ್ ಟ್ರೋಫಿ ಇಂಗ್ಲೆಂಡ್ ಗುಂಪು ಹಂತದ ಪಂದ್ಯ

ಫೆ, 22: ಆಸ್ಟ್ರೇಲಿಯಾ ವಿರುದ್ಧ, ಲಾಹೋರ್
ಫೆ.26: ಅಫ್ಘಾನಿಸ್ತಾನ ವಿರುದ್ಧ, ಲಾಹೋರ್
ಮಾ.01: ದಕ್ಷಿಣ ಆಫ್ರಿಕಾ ವಿರುದ್ಧ, ಕರಾಚಿ

Story first published: Thursday, February 20, 2025, 23:52 [IST]
Other articles published on Feb 20, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+