IND vs ENG, 1st ODI: ಮೊದಲ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ: 3 RCB ಆಟಗಾರರಿಗೆ ಅವಕಾಶ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಏಕದಿನ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಆಡಿಸುವ ಪ್ಲೇಯಿಂಗ್ ಇಲೆವೆನ್ ಈಗಾಗಲೇ ಘೋಷಣೆ ಮಾಡಿದೆ. ಟಿ20 ಸರಣಿಯನ್ನು ಸೋತಿರುವ ಇಂಗ್ಲೆಂಡ್, ಏಕದಿನ ಸರಣಿಗಾಗಿ ಅನುಭವಿಗಳು ಹಾಗೂ ಯುವ ಆಟಗಾರರ ತಂಡವನ್ನು ಪ್ರಕಟಿಸಿದೆ. ಪ್ರಕಟಿತ ತಂಡದಲ್ಲಿ ಸ್ಟಾರ್ ಆಟಗಾರನಿಗೆ ಸ್ಥಾನ ನೀಡಲಾಗಿದೆ. ಐದು ವರ್ಷದ ಬಳಿಕ ನಾಗ್ಪುರದಲ್ಲಿ ಪಂದ್ಯ ನಡೆಯಲಿದ್ದು ಕುತೂಹಲ ಮನೆ ಮಾಡಿದೆ.
ಇಂಗ್ಲೆಂಡ್ ತಂಡದಲ್ಲಿ ಸುಮಾರು 14 ತಿಂಗಳ ಬಳಿಕ ಸ್ಟಾರ್ ಬ್ಯಾಟರ್ ಜೋ ರೂಟ್ ಏಕದಿನ ಕ್ರಿಕೆಟ್ ತಂಡ ಸೇರಿದ್ದಾರೆ. ಇವರು ಕೊನೆಯ ಬಾರಿಗೆ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಏಕದಿನ ಪಂದ್ಯವನ್ನು ಆಡಿದ್ದರು. ಅಲ್ಲಿಂದ ಇವರು ಏಕದಿನ ಪಂದ್ಯವನ್ನು ಆಡಿಲ್ಲ. ಬಹು ದಿನಗಳ ಬಳಿಕ ರೂಟ್ ತಂಡಕ್ಕೆ ವಾಪಸ್ ಆಗಿರುವುದು ನಿಜಕ್ಕೂ ತಂಡದ ಮನೋಬಲವನ್ನು ವೃದ್ಧಿಸಿದೆ. ಇಂಗ್ಲೆಂಡ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಜೋ ರೂಟ್ ಆಧಾರವಾಗಲಿದ್ದಾರೆ.

ಆರ್‌ಸಿಬಿ ಮೂರು ಆಟಗಾರರಿಗೆ ಚಾನ್ಸ್
ಟಿ20 ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಯುವ ಆಟಗಾರ ಜಾಕಬ್ ಬೇತೆಲ್ ಅವರಿಗೆ ಇಂಗ್ಲೆಂಡ್ ಮತ್ತೊಮ್ಮೆ ಚಾನ್ಸ್ ನೀಡಿದೆ. ಇವರು ಈಗಾಗಲೇ ಬೇರೆ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಆರಂಭಿಕರಾಗಿ ಕಾಣಿಸಿಕೊಳ್ಳುವ ಫಿಲ್ ಸಾಲ್ಟ್ ಸಹ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಸ್ಟಾರ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಈ ಮೂವರು ಆಟಗಾರರು ಮುಂದಿನ ಬಾರಿ ಐಪಿಎಲ್ 2025ರಲ್ಲಿ ಆರ್‌ಸಿಬಿ ಪರ ಕಣಕ್ಕೆ ಇಳಿಯಲಿದ್ದಾರೆ.
ಜೋಫ್ರಾಗೂ ಅವಕಾಶ
ಇನ್ನು ಟೀಮ್ ಇಂಡಿಯಾ ವಿರುದ್ಧ ಟಿ20 ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಜೋಫ್ರಾ ಆರ್ಚರ್ ಅವರಿಗೆ ಸ್ಥಾನ ಸಿಗುವುದು ಡೌಟ್ ಎಂದು ಹೇಳಲಾಗುತ್ತಿತ್ತು. ಆದರೆ ಏಕದಿನ ತಂಡದಲ್ಲಿ ಮತ್ತೊಮ್ಮೆ ಚಾನ್ಸ್ ನೀಡಲಾಗಿದೆ. ಇವರೊಂದಿಗೆ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದ ಸಕೀಬ್ ಮಹಮೂದ್‌ಗೂ ತಂಡದಲ್ಲಿ ಅವಕಾಶ ಸಿಕ್ಕಿದೆ. ಉಳಿದಂತೆ ನುರಿತ ಸ್ಪಿನ್ ಬೌಲರ್ ರೂಪದಲ್ಲಿ ಆದೀಲ್ ರಶೀದ್ ಎದುರಾಳಿಗಳನ್ನು ಕಾಡಬಲ್ಲರು.

ಉಳಿದಂತೆ ಬೆನ್ ಡಕೆಟ್, ಹ್ಯಾರಿ ಬ್ರೂಕ್, ಬ್ರೇಡನ್ ಚೇಸ್ ತಂಡದಲ್ಲಿ ಸ್ಥಾನ ಪಡೆದ ಪ್ರಮುಖರು.
ಭಾರತ ವಿರುದ್ಧ ಮೊದಲ ಏಕದಿನ ಪಂದ್ಯಕ್ಕೆ ಇಂಗ್ಲೆಂಡ್ ತಂಡ: ಬೆನ್ ಡಕೆಟ್, ಫಿಲ್ ಸಾಲ್ಟ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್, ಆದಿಲ್ ರಶೀದ್, ಸಾಕಿಬ್ ಮಹಮೂದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications