IND vs ENG Test: ಟೀಮ್ ಇಂಡಿಯಾಕ್ಕೆ ತಿರುಗೇಟು ನೀಡಿದ ಇಂಗ್ಲೆಂಡ್ ಬ್ಯಾಟರ್ಸ್
ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಗಿಲ್ ತಂಡಕ್ಕೆ, ಬೆನ್ ಸ್ಟೋಕ್ಸ್ ಪಡೆ ಉತ್ತಮ ತಿರುಗೇಟು ನೀಡಿದೆ. ಭಾರತದ ಉತ್ತಮ ಮೊತ್ತದ ಸವಾಲಿಗೆ ಇಂಗ್ಲೆಂಡ್ ಭರ್ಜರಿ ತಿರುಗೇಟು ನೀಡಿದೆ. ಮಧ್ಯಮ ಕ್ರಮಾಂಕದ ಒಲಿ ಪೋಪ್ ಶತಕದ ನೆರವಿನಿಂದ ಇಂಗ್ಲೆಂಡ್ ಉತ್ತಮ ತಿರುಗೇಟು ನೀಡಿದೆ.
ಟೀಮ್ ಇಂಡಿಯಾ ಶನಿವಾರ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 359 ರನ್‌ಗಳಿಗೆ ಆಟ ಮುಂದುವರೆಸಿ 471 ರನ್‌ಗಳಿಗೆ ಆಟ ಮುಗಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 3 ವಿಕೆಟ್‌ಗೆ 209 ರನ್ ಸೇರಿಸಿ ಉತ್ತಮ ಸ್ಥಿತಿಯಲ್ಲಿದೆ.

127 ರನ್‌ಗಳಿಂದ ಆಟ ಮುಂದುವರೆಸಿದ ಶುಭಮನ್ ಗಿಲ್ 147 ರನ್‌ಗಳಿಗೆ ಆಲೌಟ್ ಆಯಿತು. ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ 178 ಎಸೆತಗಳಲ್ಲಿ 12 ಬೌಂಡರಿ, 6 ಸಿಕ್ಸರ್ ನೆರವಿನಿಂದ 134 ರನ್ ಸಿಡಿಸಿ ತಂಡಕ್ಕೆ ಆಧಾರಾವದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಆಲ್‌ರೌಂಡರ್ ರವೀಂದ್ರ ಜಡೇಜಾ ಮಾತ್ರ ಡಬಲ್ ಡಿಜಿಟ್ ಮುಟ್ಟಿದರು. ಇಂಗ್ಲೆಂಡ್ ಪರ ಜೋಶ್ ಟಂಗ್, ಬೆನ್ ಸ್ಟೋಕ್ಸ್ ತಲಾ 4 ವಿಕೆಟ್ ಕಬಳಿಸಿದರು.
ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಜಾಕ್ ಕ್ರಾಲಿ (4) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಬೆನ್ ಡಕೆಟ್ ಹಾಗೂ ಒಲಿ ಪೋಪ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಟೀಮ್ ಇಂಡಿಯಾ ಬೌಲರ್‌ಗಳನ್ನು ಕಾಡಿದರು. ಈ ಜೋಡಿ 166 ಎಸೆತಗಳಲ್ಲಿ 122 ರನ್ ಸಿಡಿಸಿದರು. ಈ ವೇಳೆ ಬೆನ್ ಡಕೆಟ್ 9 ಬೌಂಡರಿ ನೆರವಿನಿಂದ 62 ರನ್ ಸಿಡಿಸಿ, ಬುಮ್ರಾ ಎಸೆತದಲ್ಲಿ ಔಟ್ ಆದರು.
ಓಲಿ ಪೋಪ್ ಶತಕ
ಮೂರನೇ ವಿಕೆಟ್‌ಗೆ ಜೋ ರೂಟ್ ಹಾಗೂ ಓಲಿ ಪೋಪ್ ಜೋಡಿ 111 ಎಸೆತಗಳಲ್ಲಿ 80 ರನ್ ಸೇರಿಸಿತು. ಜೋ ರೂಟ್ 2 ಬೌಂಡರಿ ಸಹಾಯದಿಂದ 28 ರನ್ ಬಾರಿಸಿ ಬುಮ್ರಾ ಎಸೆತದಲ್ಲಿ ಕರುಣ್ ನಾಯರ್‌ಗೆ ಕ್ಯಾಚ್ ನೀಡಿದರು.
ಓಲಿ ಪೋಪ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 131 ಎಸೆತಗಳಲ್ಲಿ 13 ಬೌಂಡರಿ ನೆರವಿನಿಂದ ಅಜೇಯ 100 ರನ್ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್‌ಗೆ ಕಾಯ್ದುಕೊಂಡಿದ್ದರು. ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಹ್ಯಾರಿ ಬ್ರೂಕ್ ಭಾನುವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಬುಮ್ರಾ ಅಬ್ಬರ
ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಅಮೋಘ ದಾಳಿ ನಡೆಸಿ ಅಬ್ಬರಿಸಿದರು. ಬುಮ್ರಾ ಮೊದಲ ಇನಿಂಗ್ಸ್‌ನಲ್ಲಿ 13 ಓವರ್‌ಗಳಲ್ಲಿ 48 ರನ್ ನೀಡಿ 3 ವಿಕೆಟ್ ಪಡೆದರು. ಉಳಿದ ಬೌಲರ್‌ಗಳು ವಿಕೆಟ್ ಪಡೆಯುವಲ್ಲಿ ವಿಫಲರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications