For Quick Alerts
ALLOW NOTIFICATIONS  
For Daily Alerts
 

Ashes Series: ಎರಡೇ ದಿನಕ್ಕೆ ಮುಗಿದ 4ನೇ ಟೆಸ್ಟ್; ಇಂಗ್ಲೆಂಡ್‌ಗೆ 4 ವಿಕೆಟ್‌ಗಳ ಭರ್ಜರಿ ಜಯ

ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಪ್ರವಾಸಿ ಇಂಗ್ಲೆಂಡ್ ತಂಡ 4 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿ, 5 ಪಂದ್ಯಗಳ ಸರಣಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಈ ಮೂಲಕ ಇಂಗ್ಲೆಂಡ್‌ ಸರಣಿಯಲ್ಲಿ 3-1 ರಿಂದ ಹಿನ್ನಡೆ ಅನುಭವಿಸುತ್ತಿದೆ.

ಶನಿವಾರ ಎರಡನೇ ಇನಿಂಗ್ಸ್‌ನ್ನು ವಿಕೆಟ್‌ ನಷ್ಟವಿಲ್ಲದೆ 4 ರನ್‌ಗಳಿಂದ ಆಟ ಮುಂದುವರೆಸಿದ ಆಸ್ಟ್ರೇಲಿಯಾ 132 ರನ್‌ಗಳಿಗೆ ಆಲೌಟ್ ಆಯಿತು. ಆಸೀಸ್‌ ತಂಡದ ಪರ ಟ್ರಾವಿಸ್‌ ಹೆಡ್‌ 67 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 46 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ನಾಯಕ ಸ್ಟೀವನ್ ಸ್ಮಿತ್ ಸಹ 1 ಬೌಂಡರಿ ನೆರವಿನಿಂದ ಅಜೇಯ 24 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಆಲ್‌ರೌಂಡರ್‌ ಕ್ಯಾಮರೂನ್‌ ಗ್ರೀನ್‌ 19 ರನ್‌ ಬಾರಿಸಿದರು. ಆದರೆ ಉಳಿದ ಬ್ಯಾಟರ್‌ಗಳು ಒಂದಂಕಿಯನ್ನು ದಾಟುವಲ್ಲಿ ವಿಫಲರಾದರು. ಇಂಗ್ಲೆಂಡ್ ಪರ ಬ್ರೈಡನ್ ಕಾರ್ಸೆ 34 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು. ನಾಯಕ ಬೆನ್‌ ಸ್ಟೋಕ್ಸ್‌ 24 ರನ್‌ ಸಿಡಿಸಿ 3 ವಿಕೆಟ್‌ ಪಡೆದರು.

England Beat Australia by 4 Wickets in 4th Test Brydon Carse Shines as England Trail 3-1

175 ರನ್‌ಗಳ ಗುರಿಯನ್ನು ಹಿಂಬಾಲಿಸಿ ಇಂಗ್ಲೆಂಡ್ ತಂಡದ ಆರಂಭ ಉತ್ತಮವಾಗಿತ್ತು. ಜಾಕ್‌ ಕ್ರಾಲಿ ಹಾಗೂ ಬೆನ್‌ ಡಕೆಟ್‌ ಜೋಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ ಟಿ20 ಫಾರ್ಮೆಟ್‌ ಶೈಲಿಯಲ್ಲಿ ಬ್ಯಾಟ್ ಮಾಡಿ ರನ್‌ ಕಲೆ ಹಾಕಿತು. ಅಲ್ಲದೆ ಮೊದಲ ವಿಕೆಟ್‌ಗೆ 7 ಓವರ್‌ಗಳಲ್ಲಿ 51 ರನ್‌ ಸೇರಿಸಿ ತಂಡಕ್ಕೆ ಆಧಾರವಾಯಿತು. ಈ ವೇಳೆ ಬೆನ್‌ ಡಕೆಟ್‌ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 34 ರನ್‌ ಬಾರಿಸಿ ಸ್ಟಾರ್ಕ್‌ ತೋಡಿದ ಖೆಡ್ಡಾಗೆ ಬಲಿಯಾದರು. ಬ್ರೈಡನ್ ಕಾರ್ಸೆ 6 ರನ್‌ ಕಲೆ ಹಾಕಿ ಔಟ್ ಆದರು.

ಆರಂಭಿಕ ಆಟಗಾರ ಜಾಕ್‌ ಕ್ರಾಲಿ 3 ಬೌಂಡರಿ, 1 ಸಿಕ್ಸರ್‌ ನೆರವಿನಿಂದ 37 ರನ್‌ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಜಾಕೋಬ್ ಬೆಥೆಲ್ 46 ಎಸೆತಗಳಲ್ಲಿ 5 ಬೌಂಡರಿ ಸಹಾಯದಿಂದ 40 ರನ್‌ ಬಾರಿಸಿ ಔಟ್‌ ಆದರು. ಜೋ ರೂಟ್‌ 15, ಹ್ಯಾರಿ ಬ್ರೂಕ್‌ ಅಜೇಯ 18 ರನ್‌ ಸಿಡಿಸಿದರು. ಅಂತಿಮವಾಗಿ 32.2 ಓವರ್‌ಗಳಲ್ಲಿ 6 ವಿಕೆಟ್‌ಗೆ 178 ರನ್‌ ಸೇರಿಸಿ ಜಯ ಸಾಧಿಸಿತು.

England Beat Australia by 4 Wickets in 4th Test Brydon Carse Shines as England Trail 3-1

ಆಸ್ಟ್ರೇಲಿಯಾ ಪರ ಮಿಚೆಲ್‌ ಸ್ಟಾರ್ಕ್‌, ಜೇ ರಿಚರ್ಡ್ಸನ್, ಸ್ಕಾಟ್‌ ಬೋಲೆಂಡ್‌ ತಲಾ 2 ವಿಕೆಟ್‌ ಕಬಳಿಸಿದರು. ಈ ಮೂಲಕ ಇಂಗ್ಲೆಂಡ್‌ ಈ ಸರಣಿಯಲ್ಲಿ ಮೊದಲ ಗೆಲುವಿನ ನಗೆ ಬೀರಿತು.

ಇಂಗ್ಲೆಂಡ್‌ ದಾಖಲೆ

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಇಂಗ್ಲೆಂಡ್ ಈಗ ಜಂಟಿಯಾಗಿ ಎರಡನೇ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡ. ಈ ಮೂಲಕ ಭಾರತದ ದಾಖಲೆಯನ್ನು ಸರಿಗಟ್ಟಿದೆ. ಎರಡೂ ತಂಡಗಳು ಡಬ್ಲ್ಯೂಟಿಸಿಯಲ್ಲಿ ಒಟ್ಟು 35 ಪಂದ್ಯಗಳನ್ನು ಗೆದ್ದಿವೆ. ಆಸ್ಟ್ರೇಲಿಯಾ ಒಟ್ಟು 39 ಪಂದ್ಯಗಳನ್ನು ಗೆದ್ದಿದೆ.

Story first published: Saturday, December 27, 2025, 14:41 [IST]
Other articles published on Dec 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+