For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್: ನಾಲ್ಕನೇ ಪಂದ್ಯದಲ್ಲಿಯೂ ಮುಗ್ಗರಿಸಿದ ಆಸೀಸ್ ಪಡೆ

england beat australia in the fourth ODi close to series whitewash

ಡುರ್ಹಾಮ್, ಜೂನ್ 22: ಸತತ ಸೋಲಿನಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮೇಲೆ ಮತ್ತೆ ಪ್ರಹಾರ ನಡೆಸಿರುವ ಇಂಗ್ಲೆಂಡ್, ಸರಣಿ ವೈಟ್ ವಾಷ್‌ನತ್ತ ಕಣ್ಣಿಟ್ಟಿದೆ.

ಈಗಾಗಲೇ ಏಕದಿನ ಸರಣಿಯನ್ನು ಇಂಗ್ಲೆಂಡ್‌ ಕೈಗೆ ಒಪ್ಪಿಸಿರುವ ಆಸ್ಟ್ರೇಲಿಯಾ, ಕೊನೆಯ ಎರಡು ಪಂದ್ಯಗಳಲ್ಲಿ ಗೆದ್ದು ಗೌರವ ಉಳಿಸಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು.

ನಾಲ್ಕನೆಯ ಪಂದ್ಯದ ಆರಂಭದಲ್ಲಿ ಆಸ್ಟ್ರೇಲಿಯಾ ಬ್ಯಾಟಿಂಗ್ ಅಬ್ಬರ ನೋಡಿದಾಗ ಅದು ಗೆಲುವಿನ ಹಾದಿಗೆ ಮರಳಲಿದೆ ಎಂಬ ಸೂಚನೆ ನೀಡಿತ್ತು. ಆರೋನ್ ಫಿಂಚ್ ಮತ್ತು ಶಾನ್ ಮಾರ್ಷ್ ಶತಕ ದಾಖಲಿಸಿದಾಗ ತಂಡ ಬೃಹತ್ ಮೊತ್ತ ಪೇರಿಸಲಿದೆ ಎಂಬ ನಿರೀಕ್ಷೆ ಮೂಡಿಸಿತ್ತು.

scorecard

ಆರೋನ್ ಫಿಂಚ್ (100), ಶಾನ್ ಮಾರ್ಷ್ (101) ಮತ್ತು ಟ್ರಾವಿಸ್ ಹೆಡ್ (63) ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳಿಂದ ರನ್ ಹರಿದುಬರಲಿಲ್ಲ. ಹೀಗಾಗಿ 350ರ ಗಡಿ ದಾಟಬಹುದಾಗಿದ್ದ ಸ್ಕೋರ್ 50 ಓವರ್‌ಗಲ್ಲಿ 8 ವಿಕೆಟ್ ಕಳೆದುಕೊಂಡು 310ಕ್ಕೆ ಸೀಮಿತವಾಯಿತು.

england beat australia in the fourth ODi close to series whitewash

ಉತ್ತಮ ಮೊತ್ತವಾದರೂ ಕೆಲವು ಪಂದ್ಯಗಳಿಂದ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಇಂಗ್ಲೆಂಡ್ ತಂಡಕ್ಕೆ ಸವಾಲು ಎನಿಸಲೇ ಇಲ್ಲ.

ಟಿ 20 ಮಾದರಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಜೇಸನ್ ರಾಯ್ (101), ಜಾನಿ ಬೈರ್‌ಸ್ಟೋ (79) ಮೊದಲ ವಿಕೆಟ್‌ಗೆ 23.4 ಓವರ್‌ಗಳಲ್ಲಿಯೇ 174 ರನ್ ಕಲೆಹಾಕಿದರು.

ಬಳಿಕ ಅಲೆಕ್ಸ್ ಹೇಲ್ಸ್ ಮತ್ತು ಜೋಸ್ ಬಟ್ಲರ್ ಸಹ ಆಸ್ಟ್ರೇಲಿಯಾ ಬೌಲರ್‌ಗಳ ಮೇಲೆ ಸವಾರಿ ಮುಂದುವರಿಸಿದರು. ಕೇವಲ 44.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ತಲುಪಿತು.

ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ: 310/8 (50). ಆರೋನ್ ಫಿಂಚ್ (100), ಟ್ರಾವಿಸ್ ಹೆಡ್ (63), ಶಾನ್ ಮಾರ್ಷ್ (101), ಆಷ್ಟೋನ್ ಅಗರ್ 19. ಡೇವಿಡ್ ವಿಲ್ಲಿ 43/4, ಮಾರ್ಕ್‌ವುಡ್, 49/2, ಆದಿಲ್ ರಷೀದ್ 73/2.

ಇಂಗ್ಲೆಂಡ್: 314/4 (50). ಜೇಸನ್ ರಾಯ್ (101), ಜಾನಿ ಬೈರ್‌ಸ್ಟೋ (79), ಅಲೆಕ್ಸ್ ಹೇಲ್ಸ್ 34 ನಾಟೌಟ್, ಜೋ ರೂಟ್ 27, ಜೋಸ್ ಬಟ್ಲರ್ 54 ನಾಟೌಟ್, ಆಷ್ಟೋನ್ ಅಗರ್ 48/2, ನಥಾನ್ ಲಿಯಾನ್ 38/1, ಬಿಲ್ಲಿ ಸ್ಟಾನ್ಲೇಕ್ 54/1.

Story first published: Friday, June 22, 2018, 11:41 [IST]
Other articles published on Jun 22, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+