For Quick Alerts
ALLOW NOTIFICATIONS  
For Daily Alerts
 

ಅಂತಿಮ 2 ಏಕದಿನ ಪಂದ್ಯಕ್ಕೆ ಇಯಾನ್ ಮಾರ್ಗನ್ ಅಲಭ್ಯ: ನಾಯಕನ ಜವಾಬ್ಧಾರಿ ಜೋಸ್ ಬಟ್ಲರ್ ಹೆಗಲಿಗೆ

England captain Eoin Morgan ruled out of ODI series against India

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯಕ್ಕೆ ಎರಡು ತಂಡಗಳು ಸಜ್ಜಾಗುತ್ತಿದೆ. ಪ್ರವಾಸಿ ಇಂಗ್ಲೆಂಡ್ ಮೊದಲ ಪಂದ್ಯವನ್ನು ಸೋತಿರುವ ಹಿನ್ನೆಲೆಯಲ್ಲಿ ಸರಣಿ ಜೀವಂತವಾಗುಳಿಯಲು ಎರಡನೇ ಪಂದ್ಯವನ್ನು ಗೆಲ್ಲಲೇ ಬೇಕಿದೆ. ಆದರೆ ಪಂದ್ಯದ ಆರಂಭಕ್ಕೆ ಮುನ್ನವೇ ತಂಡಕ್ಕೆ ಹಿನ್ನಡೆಯಾಗಿದೆ. ಗಾಯಗೊಂಡಿದ್ದ ನಾಯಕ ಇಯಾನ್ ಮಾರ್ಗನ್ ಮುಂದಿನ ಎರಡು ಪಂದ್ಯಗಳಿಗೂ ಅಲಭ್ಯರಾಗಲಿದ್ದಾರೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಇಯಾನ್ ಮಾರ್ಗನ್ ಅಲಭ್ಯತೆಯನ್ನು ಖಚಿತಪಡಿಸಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಜೋಸ್ ಬಟ್ಲರ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಇಸಿಬಿ ಮಾಹಿತಿಯನ್ನು ನೀಡಿದೆ. ಮಧ್ಯಮ ಕ್ರಮಾಂಕದ ಆಟಗಾರ ಸ್ಯಾಮ್ ಬಿಲ್ಲಿಂಗ್ಸ್ ಕೂಡ ಮುಂದಿನ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಇಸಿಬಿ ಇದೇ ಸಂದರ್ಭದಲ್ಲಿ ತಿಳಿಸಿದೆ.

ಪುಣೆಯಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಪರವಾಗಿ ಲಿಯಾನ್ ಲಿವಿಂಗ್‌ಸ್ಟನ್ ಏಕದಿನ ಕ್ರಿಕೆಟ್‌ಗೆ ಪದಾರ್ಪನೆ ಮಾಡುವ ಸಾಧ್ಯತೆಯಿದೆ. ಮತ್ತೊಂದೆಡೆ ಟಿ20 ಸ್ಪೆಶಲಿಸ್ಟ್ ಡೇವಿಡ್ ಮೆಲನ್ ತಂಡದಲ್ಲಿ ಮೀಸಲು ಆಟಗಾರನಾಗಿ ಪ್ರಯಾಣಿಸಿದ್ದರು. ಈಗ ಆಡುವ ಏಕದಿನ ಸ್ಕ್ವಾಡ್‌ಗೆ ಅವರು ಸೇರ್ಪಡೆಗೊಂಡಿದ್ದರು ಆಯ್ಕೆಗೆ ಲಭ್ಯರಾಗಲಿದ್ದಾರೆ.

ಭಾರತ ತಂಡದಲ್ಲಿಯೂ ಮೊದಲ ಏಕದಿನ ಪಂದ್ಯದಲ್ಲಿ ಇಬ್ಬರು ಆಟಗಾರರು ಗಾಯಗೊಂಡಿದ್ದರು. ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಐಯ್ಯರ್ ಅಂಗಳದಿಂದ ಹೊರಗುಳಿದಿದ್ದರು. ರೋಹಿತ್ ಶರ್ಮಾ ಎರಡನೇ ಪಂದ್ಯಕ್ಕೆ ಫಿಟ್ ಆಗುವ ಸಾಧ್ಯತೆಯಿದ್ದು ಶ್ರೇಯಸ್ ಐಯ್ಯರ್ ಸರಣಿಯಿಂದ ಹೊರಬಿದ್ದಿದ್ದಾರೆ. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನೂ ಆಗಿರುವ ಐಯ್ಯರ್ ಏಪ್ರಿಲ್ 9 ರಿಂದ ಆರಂಭವಾಗುವ ಪ್ರತಿಷ್ಟಿತ ಟೂರ್ನಿಯಿಂದಲೂ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ.

Story first published: Thursday, March 25, 2021, 21:40 [IST]
Other articles published on Mar 25, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+