For Quick Alerts
ALLOW NOTIFICATIONS  
For Daily Alerts
 

ಜೋ ರೂಟ್ ಇಂಗ್ಲೆಂಡ್‌ನ ಎಲ್ಲಾ ಬ್ಯಾಟಿಂಗ್ ದಾಖಲೆ ಮುರಿಯಬಲ್ಲರು: ನಾಸಿರ್ ಹುಸೇನ್

England captain Joe Root will probably break Englands all batting record: Nasser Hussain

ಇಂಗ್ಲೆಂಡ್ ತಂಡ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡುತ್ತಿದೆ. ಭಾರತದ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ವಿದೇಶದಲ್ಲಿ ನಡೆದ ಸತತ ಆರು ಟೆಸ್ಟ್ ಪಂದ್ಯಗಳನ್ನು ಗೆದ್ದಂತಾಗಿದೆ. ಇದರಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅವರ ಪ್ರದರ್ಶನ ಶ್ರೇಷ್ಠ ಮಟ್ಟದಲ್ಲಿತ್ತು ಎಂಬುದನ್ನು ಮರೆಯುವಂತಿಲ್ಲ. ಜೋ ರೂಟ್ ಅವರ ಈ ಪ್ರದರ್ಶನದ ಬಗ್ಗೆ ಇಂಗ್ಲೆಂಡ್ ತಂಡದ ನಾಜಿ ನಾಯಕ ನಾಸಿರ್ ಹುಸೇನ್ ಪ್ರತಿಕ್ರಿಯಿಸಿದ್ದು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಜೋ ರೂಟ್ ಇಂಗ್ಲೆಂಡ್ ಕಂಡ ಸ್ಪಿನ್ ಬೌಲರ್‌ಗಳನ್ನು ಎದುರಿಸುವ ಅತ್ಯುತ್ತಮ ಆಟಗಾರ ಎಂದು ನಾಸಿರ್ ಹುಸೇನ್ ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳ ಹೆಸರಿನಲ್ಲಿರುವ ದಾಖಲೆಯನ್ನು ಜೋ ರೂಟ್ ಮುರಿಯಬಲ್ಲವರಾಗಿದ್ದಾರೆ ಎಂದು ನಾಸಿರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.

"ಜೋ ರೂಟ್ ಖಂಡಿತವಾಗಿಯೂ ಇಂಗ್ಲೆಂಡ್ ಕಂಡ ಶ್ರೇಷ್ಠ ಆಟಗಾರರಲ್ಲಿ ಓರ್ವ. ಎಲ್ಲಾ ದಾಖಲೆಗಳನ್ನು ಅವರು ಮುರಿಯಬಲ್ಲರು. ಅಲೆಸ್ಟರ್ ಕುಕ್ ಅವರ 161 ಟೆಸ್ಟ್ ಪಂದ್ಯಗಳ ದಾಖಲೆಯನ್ನು ಅವರು ಮುರಿಯಬಲ್ಲರು. ಬಹುಶಃ ರನ್ ದಾಖಲೆಯನ್ನು ಕೂಡ ಜೋ ರೂಟ್ ಹಿಂದಿಕ್ಕುವ ಸಾಧ್ಯತೆಯಿದೆ" ಎಂದು ನಾಸಿರ್ ಹುಸೇನ್ ಸ್ಕೈ ಸ್ಪೋರ್ಟ್ಸ್‌ಗೆ ಬರೆದ ತಮ್ಮ ಕಾಲಂನಲ್ಲಿ ಹೇಳಿಕೊಂಡಿದ್ದಾರೆ.

"ಸ್ಪಿನ್ ದಾಳಿಯನ್ನು ಎದುರಿಸುವುದರಲ್ಲಿ ಇಂಗ್ಲೆಂಡ್ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಜೋ ರೂಟ್. ಆತ ಸ್ಪಿನ್ ಬೌಲಿಂಗ್‌ಗೆ ಸ್ವೀಪ್ ಮಾಡುವುದನ್ನು ನೋಡುವುದು ತುಂಬಾ ಆನಂದವಾಗುತ್ತದೆ" ಎಂದು ನಾಸಿರ್ ಹುಸೇನ್ ತಮ್ಮ ಅಂಕಣದಲ್ಲಿ ಬರೆದುಕೊಂಡಿದ್ದಾರೆ.

"ಇಂಗ್ಲೆಂಡ್ ತಂಡ ಭಾರತಕ್ಕೆ ತೆರಳಿದಾಗ ಎಲ್ಲವೂ ಈ ಸರಣಿಯನ್ನು ಭಾರತ 4-0 ಅಂತರದಿಂದ ಗೆಲ್ಲಲಿದೆ ಎಂದು ಬರೆದಿದ್ದರು. ಯಾರು ಕೂಡ ಇಂಗ್ಲೆಂಡ್‌ಗೆ ಸಾಧ್ಯತೆಯಿದೆ ಎಂಬ ವಿಶ್ವಾಸ ಹೊಂದಿರಲಿಲ್ಲ. ಭಾರತ ಆಸ್ಟ್ರೇಲಿಯಾ ವಿರುದ್ಧ ಸರಣಿಯನ್ನು ಗೆದ್ದಿತ್ತು, ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದರು ಹಾಗೂ ಟೆಸ್ಟ್ ಗೆಲ್ಲಲು ಭಾರತ ಅತ್ಯಂತ ಕಠಿಣ ಸ್ಥಳ ಎಂಬುದು ಅದಕ್ಕೆ ಕಾರಣವಾಗಿತ್ತು. ಆದರೆ ಇಂಗ್ಲೆಂಡ್ ಆರಂಭದ ಎಸೆತದಿಂದ ಎಂತಿಮ ಎಸೆತದವರೆಗೂ ಅದ್ಭುತ ಆಟವನ್ನು ಪ್ರದರ್ಶಿಸಿ ಮೊದಲ ಪಂದ್ಯವನ್ನು ಗೆದ್ದಿದೆ" ಎಂದು ನಾಸಿರ್ ಹುಸೇನ್ ಹೇಳಿದ್ದಾರೆ.

Story first published: Wednesday, February 10, 2021, 21:25 [IST]
Other articles published on Feb 10, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+