ಏಕದಿನ ಕ್ರಿಕೆಟ್‌ನಲ್ಲಿ 498 ರನ್: ಮುಂದುವರಿದ ಬಟ್ಲರ್ ಅಬ್ಬರ, ತನ್ನದೇ ವಿಶ್ವದಾಖಲೆ ಮುರಿದ ಇಂಗ್ಲೆಂಡ್

ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡ ಹೊಸ ವಿಶ್ವದಾಖಲೆ ಬರೆದಿದೆ. ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬರೊಬ್ಬರಿ 498 ರನ್‌ಗಳನ್ನು ಸಿಡಿಸಿ ಐತಿಹಾಸಿಕ ಸಾಧನೆ ಮಾಡಿದೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚಿನ ರನ್ ಗಳಿಸಿದ ತನ್ನದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದೆ ಇಂಗ್ಲೆಂಡ್ ತಂಡ.
ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಮೂವರು ಆಟಗಾರರು ಭರ್ರಿ ಶತಕ ಬಾರಿಸಿದರೆ ಲಿಯಾಮ್ ಲಿವಿಂಗ್ಸ್ಟನ್ ಸ್ಪೋಟಕ ಅರ್ಧ ಶತಕ ಬಾರಿಸಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ ಕೇವಲ 70 ಎಸೆತಗಳಲ್ಲಿ 162 ರನ್ ಬಾರಿಸುವ ಮೂಲಕ ವಿಶೇಷ ಸಾಧನೆಯಲ್ಲಿ ಮಹತ್ವದ ಪಾತ್ರವಹಿಸಿದರು. ಫಿಲಿಪ್ ಸಾಲ್ಟ್ 122 ರನ್ ಸಿಡಿಸಿದರೆ ಡೇವಿಡ್ ಮಲನ್ 125 ರನ್ ಗಳಿಸಿದ್ದಾರೆ.
ಇದಕ್ಕೂ ಮುನ್ನ ಕೂಡ ಈ ದಾಖಲೆ ಇಂಗ್ಲೆಂಡ್ ತಂಡದ ಹೆಸರಿನಲ್ಲಿಯೇ ಇತ್ತು. 2018ರಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ 281 ರನ್‌ಗಳಿಸಿದ್ದು ದಾಖಲೆಯಾಗಿತ್ತು. ಇದೀಗ ತನ್ನ ದಾಖಲೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ ಇಂಗ್ಲೆಂಡ್. ಈ ಮೂಲಕ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ರನ್‌ಗಳಿಸಿದ ತಂಡದ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನದಲ್ಲಿ ಇಂಗ್ಲೆಂಡ್ ತಂಡವೇ ಇದೆ.
ನೆದರ್ಲೆಂಡ್ಸ್ ಆಡುವ ಬಳಗ: ವಿಕ್ರಮ್‌ಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಮೂಸಾ ಅಹ್ಮದ್, ಬಾಸ್ ಡಿ ಲೀಡೆ, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್ (ವಾಕ್), ಪೀಟರ್ ಸೀಲಾರ್ (ಸಿ), ಲೋಗನ್ ವ್ಯಾನ್ ಬೀಕ್, ಫಿಲಿಪ್ ಬೋಯಿಸೆವೈನ್, ಶೇನ್ ಸ್ನೇಟರ್, ಆರ್ಯನ್ ದತ್
ಬೆಂಚ್: ವಿವಿಯನ್ ಕಿಂಗ್ಮಾ, ಫ್ರೆಡ್ ಕ್ಲಾಸೆನ್, ಟಿಮ್ ಪ್ರಿಂಗಲ್, ಕ್ಲೇಟನ್ ಫ್ಲಾಯ್ಡ್, ರಿಯಾನ್ ಕ್ಲೈನ್, ಶರೀಜ್ ಅಹ್ಮದ್, ತೇಜಾ ನಿಡಮನೂರು
ಇಂಗ್ಲೆಂಡ್ ಆಡುವ ಬಳಗ: ಜೇಸನ್ ರಾಯ್, ಫಿಲಿಪ್ ಸಾಲ್ಟ್, ಡೇವಿಡ್ ಮಲನ್, ಇಯಾನ್ ಮಾರ್ಗನ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಆದಿಲ್ ರಶೀದ್, ಡೇವಿಡ್ ವಿಲ್ಲಿ, ರೀಸ್ ಟೋಪ್ಲಿ
ಬೆಂಚ್: ಬ್ರೈಡನ್ ಕಾರ್ಸ್, ಡೇವಿಡ್ ಪೇನ್, ಲ್ಯೂಕ್ ವುಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications