For Quick Alerts
ALLOW NOTIFICATIONS  
For Daily Alerts
 

ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಆಟಗಾರರ ಸಂಬಳ ಕಟ್

England cricket team takes 15 per cent pay cut during pandemic

ಕೊರೊನಾ ವೈರಸ್ ಈ ಬಾರಿ ವಿಶ್ವಾದ್ಯಂತ ಆರ್ಥಿಕವಾಗಿ ಸಾಕಷ್ಟು ಏರುಪೇರಿಗೆ ಕಾರಣವಾಗಿದೆ. ಪ್ರತಿಯೊಂದು ಕ್ಷೇತ್ರವೂ ಸಾಕಷ್ಟು ನಷ್ಟಕ್ಕೆ ಒಳಗಾಗಿದೆ. ಕ್ರೀಡಾ ಜಗತ್ತು ಕೂಡ ಈ ವೈರಸ್‌ನ ದಾಳಿಯಿಂದಾಗಿ ಆಘಾತವನ್ನು ಅನುಭವಿಸಿದೆ. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಆಟಗಾರರ ಸಂಬಳದಲ್ಲಿ ಕಡಿತ ಮಾಡಲು ತೀರ್ಮಾನಿಸಿತ್ತು.

ಕೊರೊನಾವೈರಸ್‌ನ ಕಾರಣದಿಂದಾಗಿ ಕ್ರೀಡಾ ವ್ಯವಹಾರಗಳಲ್ಲಿ ನಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಸಂಬಳ ಕಡಿತಕ್ಕೆ ಮನವಿ ಮಾಡಲಾಗಿತ್ತು. ಶುಕ್ರವಾರ ಈ ಬಗ್ಗೆ ನಿರ್ಧಾರ ಕೈಗೊಂಡಿರುವ ಇಂಗ್ಲೆಂಡ್ ಕ್ರಿಕೆಟ್ ಟೀಮ್ 15 ಶೇಕಡಾ ಕಡಿತಕ್ಕೆ ಒಪ್ಪಿಗೆಯನ್ನು ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯೊಂದಿಗೆ ಒಪ್ಪಂದವಿರುವ ಕ್ರಿಕೆಟ್ ಆಟಗಾರರು ಪಂದ್ಯದ ಶುಲ್ಕ, ಗೆಲುವಿನ ಬೋನಸ್ ಹಾಗೂ ರೀಟೈನರ್ಸ್‌ನಿಂದ 15 ಶೇಕಡಾ ಕಡಿತಗೊಂಡು ಪಡೆದುಕೊಳ್ಳಲಿದ್ದಾರೆ. ಇಂಗ್ಲೆಂಡ್ ಇತ್ತೀಚೆಗೆ ವೆಸ್ಟ್ ಇಂಡೀಸ್, ಪಾಕಿಸ್ತಾ, ಐರ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಖಾಲಿ ಸ್ಟೇಡಿಯಮ್‌ನಲ್ಲಿ ಸರಣಿಯನ್ನು ಆಯೋಜಿಸಿತ್ತು.

ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ನಿರ್ದೇಶಕ ಆಶ್ಲೇ ಗಿಲ್ಸ್ ಪ್ರತಿಕ್ರಿಯಿಸಿ "ನಾವು ಈ ಸಂದರ್ಭದಲ್ಲಿ ಇಯಾನ್ ಮಾರ್ಗನ್ ಹಾಗೂ ಜೋ ರೂಟ್ ನೇತೃತ್ವದ ನಮ್ಮ ಆಟಗಾರರನ್ನು ಗುರುತಿಸಬೇಕಾಗಿದೆ. ಈ ಕಠಿಣ ಪರಿಸ್ಥಿತಿಯ ಸಂದರ್ಭದಲ್ಲಿ ಅವರು ಪರಿಪಕ್ಷತೆಯನ್ನು ಹಾಗೂ ಜವಾಬ್ಧಾರಿಯನ್ನು ತೋರಿಸಿದ್ದಾರೆ ಎಂದಿದ್ದಾರೆ.

ಕೊರೊನಾ ವೈರಸ್‌ನ ಕಾರಣದಿಂದಾಗಿ ಸುಮಾರು ನಾಲ್ಕು ತಿಂಗಳಿಗೂ ಅಧಿಕ ಕಾಲ ಕ್ರಿಕೆಟ್ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತವಾಗಿತ್ತು. ವಿಂಡೀಸ್ ವಿರುದ್ಧ ಸರಣಿಯನ್ನು ಆಯೋಜನೆ ಮೂಲಕ ಇಂಗ್ಲೆಂಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರು ಚಾಲನೆ ನೀಡುವಲ್ಲಿ ಯಶಸ್ವಿಯಾಗಿತ್ತು.

Story first published: Friday, October 23, 2020, 18:27 [IST]
Other articles published on Oct 23, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+