ದಕ್ಷಿಣ ಆಫ್ರಿಕಾಕ್ಕೆ ಇಂಗ್ಲೆಂಡ್ ಪ್ರವಾಸ ಸರಣಿ ನವೆಂಬರ್‌ನಲ್ಲಿ ಆರಂಭ

ಲಂಡನ್: ದಕ್ಷಿಣ ಆಫ್ರಿಕಾಕ್ಕೆ ಇಂಗ್ಲೆಂಡ್ ಪ್ರವಾಸ ಸರಣಿಯ ಪಂದ್ಯಗಳು ನವೆಂಬರ್ ಕೊನೇ ವಾರದಲ್ಲಿ ನಡೆಯಲಿದೆ. ನಿಯಮಿತ ಓವರ್‌ಗಳ ಈ ಪ್ರವಾಸ ಸರಣಿಯು ಕೇಪ್‌ಟೌನ್‌ನಲ್ಲಿ ವೀಕ್ಷಕರಿಲ್ಲದ ಮೈದಾನದಲ್ಲಿ ನಡೆಯಲಿದೆ ಎಂದು ಕ್ರಿಕೆಟ್ ಸೌತ್ ಆಫ್ರಿಕಾ (ಸಿಎಸ್‌ಎ) ಹೇಳಿದೆ.
ನವೆಂಬರ್ 27ರಿಂದ ಡಿಸೆಂಬರ್ 9ರ ವರೆಗೆ ನಡೆಯಲಿರುವ ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಸರಣಿಯು ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20ಐ ಪಂದ್ಯಗಳನ್ನು ಒಳಗೊಂಡಿರಲಿದೆ. ಸರಣಿಗೆ ಸಂಬಂಧಿಸಿ ಸರ್ಕಾರದಿಂದ ಸಿಎಸ್‌ಎಗೆ ಅನುಮೋದನೆ ಲಭಿಸಿದೆ.
ಬಯೋ ಬಬಲ್ ಪರಿಸರ ಕಲ್ಪಿಸಿ ಐರ್ಲೆಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಆತಿಥ್ಯ ವಹಿಸಿದ್ದ ಇಂಗ್ಲೆಂಡ್‌ನ ಅನುಭವ ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಡಳಿತ ಮಂಡಳಿಯನ್ನು ಸೆಳೆದಿದೆ ಎಂದು ಸಿಎಸ್‌ಎ ಹಂಗಾಮಿ ಮುಖ್ಯಸ್ಥ ಕುಗಾಂಡ್ರಿ ಗೋವೆಂದರ್ ಹೇಳಿದ್ದಾರೆ.
'ಇದು ನಮಗೆ ಹೊಸತು. ಅಂತಾರಾಷ್ಟ್ರೀಯ ಕ್ರಿಕೆಟ್ ಸೀಸನ್‌ನತ್ತ ಮುಂದುವರೆಯುವುದಕ್ಕೆ ಸಂಬಂಧಿಸಿ ಸ್ಪಂದಿಸುವುದನ್ನು ನಾವು ಬೇಗನೆ ಕಲಿಯುತ್ತಿದ್ದೇವೆ,' ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾದ ಪತ್ರಿಕಾ ಪ್ರಕಟಣೆಯಲ್ಲಿ ಬುಧವಾರ ಗೋವೆಂದರ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications