Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಜತೆ ಅರ್ಜುನ್ ತೆಂಡೂಲ್ಕರ್ ಡೇಟಿಂಗ್; ವೈರಲ್ ಆದ್ವು ಫೋಟೋಸ್!

England cricketer Danielle Wyatt posted insta story featuring Arjun Tendulkar

ಒಂದೆಡೆ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡು ಇಂಗ್ಲೆಂಡ್ ವಿರುದ್ಧ ಸೆಣಸಾಟವನ್ನು ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ವೈಯಕ್ತಿಕ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಲಂಡನ್ ನಗರದ ಹೋಟೆಲ್‌ವೊಂದರಲ್ಲಿ ಇಂಗ್ಲೆಂಡ್‌ನ ಖ್ಯಾತ ಕ್ರಿಕೆಟ್ ಆಟಗಾರ್ತಿಯ ಜತೆ ಭೋಜನ ಸವಿದಿದ್ದಾರೆ.

ಹೌದು, ಕ್ರಿಕೆಟ್ ದೇವರು ಎಂದೇ ಖ್ಯಾತಿಯನ್ನು ಪಡೆದಿರುವ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಹಾಗೂ ಇಂಗ್ಲೆಂಡ್ ಕ್ರಿಕೆಟ್‌ನ ಪ್ರಮುಖ ಆಟಗಾರ್ತಿ ಡೇನಿಯಲ್ ವ್ಯಾಟ್ ನಿನ್ನೆ ( ಜೂನ್ 27 ) ಲಂಡನ್ ನಗರದ ಸೋಹೋ ಎಂಬ ಹೋಟೆಲ್‌ನಲ್ಲಿ ಮಧ್ಯಾಹ್ನದ ಭೋಜನವನ್ನು ಮಾಡಿದ್ದು, ಈ ಚಿತ್ರವನ್ನು ಡೇನಿಯಲ್ ವ್ಯಾಟ್ ತನ್ನ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಡೇನಿಯಲ್ ವ್ಯಾಟ್ ಅರ್ಜುನ್ ತೆಂಡೂಲ್ಕರ್ ಅವರ ಈ ಫೋಟೋವನ್ನು ಹಂಚಿಕೊಂಡ ಬೆನ್ನಲ್ಲೇ ಸಾಕಷ್ಟು ಗಾಸಿಪ್ ಹುಟ್ಟಿಕೊಂಡಿದ್ದು, ಅರ್ಜುನ್ ತೆಂಡೂಲ್ಕರ್ ಹಾಗೂ ಡೇನಿಯಲ್ ವ್ಯಾಟ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಅರ್ಜುನ್ ಮತ್ತು ವ್ಯಾಟ್ ಭೇಟಿಯಾಗುತ್ತಿರುವುದು ಇದೇ ಮೊದಲೇನಲ್ಲ

ಅರ್ಜುನ್ ಮತ್ತು ವ್ಯಾಟ್ ಭೇಟಿಯಾಗುತ್ತಿರುವುದು ಇದೇ ಮೊದಲೇನಲ್ಲ

ಇನ್ನು ಅರ್ಜುನ್ ತೆಂಡೂಲ್ಕರ್ ಹಾಗೂ ಡೇನಿಯಲ್ ವ್ಯಾಟ್ ಈ ರೀತಿ ಪರಸ್ಪರ ಭೇಟಿ ಆಗುತ್ತಿರುವುದು ಇದು ಮೊದಲನೇ ಬಾರಿಯಲ್ಲ. ಅರ್ಜುನ್ ತೆಂಡೂಲ್ಕರ್ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗಲೆಲ್ಲ ಡೇನಿಯಲ್ ವ್ಯಾಟ್ ಅವರನ್ನು ಭೇಟಿಯಾಗುತ್ತಿರುತ್ತಾರೆ ಹಾಗೂ ಡೇನಿಯಲ್ ವ್ಯಾಟ್ ಭಾರತಕ್ಕೆ ಬಂದಾಗಲೆಲ್ಲ ಅರ್ಜುನ್ ತೆಂಡೂಲ್ಕರ್ ಅವರನ್ನು ಭೇಟಿಯಾಗುತ್ತಿರುತ್ತಾರೆ. ಹಾಗೂ ಅರ್ಜುನ್ ತೆಂಡೂಲ್ಕರ್ 10 ವರ್ಷದವನಾಗಿದ್ದಾಗಿನಿಂದಲೂ ನನಗೆ ಪರಿಚಿತ ಎಂದು ಡೇನಿಯಲ್ ವ್ಯಾಟ್ ಈ ಹಿಂದೆ ಸಾಕಷ್ಟು ಬಾರಿ ಹೇಳಿದ್ದಾರೆ.

ಡೇನಿಯಲ್ ವ್ಯಾಟ್ ಅಂಕಿಅಂಶ

ಡೇನಿಯಲ್ ವ್ಯಾಟ್ ಅಂಕಿಅಂಶ

2010ರಿಂದ ಇಂಗ್ಲೆಂಡ್ ತಂಡವನ್ನು ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಪ್ರತಿನಿಧಿಸುತ್ತಿರುವ ಡೇನಿಯಲ್ ವ್ಯಾಟ್ ಇಲ್ಲಿಯವರೆಗೂ ಒಟ್ಟು 93 ಮಹಿಳಾ ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿ 1489 ರನ್ ಕಲೆಹಾಕಿದ್ದಾರೆ ಮತ್ತು 27 ವಿಕೆಟ್ ಪಡೆದಿದ್ದಾರೆ ಹಾಗೂ 124 ಟಿ ಟ್ವೆಂಟಿ ಪಂದ್ಯಗಳನ್ನಾಡಿ 1966 ರನ್ ಬಾರಿಸಿರುವ ವ್ಯಾಟ್ 46 ವಿಕೆಟ್‍ಗಳನ್ನೂ ಸಹ ಸಂಪಾದಿಸಿದ್ದಾರೆ.

ಕೊಹ್ಲಿ ಹಿಂದೆ ಬಿದ್ದಿದ್ದ ವ್ಯಾಟ್

ಕೊಹ್ಲಿ ಹಿಂದೆ ಬಿದ್ದಿದ್ದ ವ್ಯಾಟ್

ಈ ಡೇನಿಯಲ್ ವ್ಯಾಟ್ ಟೀಮ್ ಇಂಡಿಯಾದ ಆಟಗಾರರ ವಿಷಯವಾಗಿ ಸುದ್ದಿ ಮಾಡುತ್ತಿರುವುದು ಇದೇ ಮೊದಲೇನಲ್ಲ. 2014ರ ಏಪ್ರಿಲ್ 4ರಂದು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದ ವ್ಯಾಟ್ 'ಕೊಹ್ಲಿ ನನ್ನನ್ನು ಮದುವೆಯಾಗಿ' ಎಂದು ಬರೆದುಕೊಂಡಿದ್ದರು. ಹಾಗೂ ವಿರಾಟ್ ಕೊಹ್ಲಿಯನ್ನು ಭೇಟಿ ಮಾಡಿದ್ದಾಗ ಕೊಹ್ಲಿ ಬಳಸಿದ್ದ ಬ್ಯಾಟ್ ಅನ್ನು ಉಡುಗೊರೆಯಾಗಿ ಕೂಡಾ ಪಡೆದುಕೊಂಡಿದ್ದರು.

Story first published: Wednesday, June 29, 2022, 10:09 [IST]
Other articles published on Jun 29, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+