Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜೇಸನ್ ರಾಯ್ ಸ್ಥಾನಕ್ಕೆ ಬಿಗ್‌ಬ್ಯಾಷ್ ತಾರೆಯನ್ನು ತೆಕ್ಕೆಗೆ ಹಾಕಿಕೊಂಡ ಡೆಲ್ಲಿ ಕ್ಯಾಪಿಟಲ್ಸ್

England Cricketer Jason Roy Opts Out Of Ipl 2020

ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜೇಸನ್ ರಾಯ್ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರವನ್ನು ಮಾಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದ ಜೆಸನ್ ರಾಯ್ ರಾಷ್ಟ್ರೀಯ ಕ್ರಿಕೆಟ್ ತಂಡದ ಮೇಲೆ ಗಮನ ನೀಡುವ ಸಲುವಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಈ ಸ್ಥಾನಕ್ಕೆ ಡೆಲ್ಲಿ ಫ್ರಾಂಚೈಸಿ ಮತ್ತೋರ್ವ ವೇಗದ ಬೌಲರ್‌ಅನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ.

ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿಯ ಪ್ರಕಾರ ಆಸ್ಟ್ರೇಲಿಯಾದ ವೇಗಿ ಡೇನಿಯಲ್ ಸ್ಯಾಮ್ಸ್ ಜೇಸನ್ ರಾಯ್ ಸ್ಥಾನಕ್ಕೆ ಸೇರ್ಪಡೆಗೊಳಿಸಲಾಗಿದೆ ಎನ್ನಲಾಗಿದೆ. ಕಳೆದ ಬಿಗ್‌ಬ್ಯಾಷ್ ಆವೃತ್ತಿಯಲ್ಲಿ ಡೇನಿಯಲ್ ಸ್ಯಾಮ್ಸ್ ಅದ್ಭುತ ಪ್ರದರ್ಶನವನ್ನು ನೀಡಿ ಎಲ್ಲರ ದೃಷ್ಟಿ ತಮ್ಮತ್ತ ಹರಿಯುವಂತೆ ಮಾಡಿದ್ದರು. ಈಗ ಡೆಲ್ಲಿ ತಂಡಕ್ಕೆ ಈ ಆಟಗಾರ ಸೇರ್ಪಡೆಯಾಗಿರುವುದು ಡೆಲ್ಲಿ ಪಾಲಿಗೆ ಆಶಾದಾಯಕ ಬೆಳವಣಿಗೆಯಾಗಿದೆ.

ಕಳೆದ ಬಿಗ್‌ಬ್ಯಾಷ್ ಆವೃತ್ತಿಯಲ್ಲಿ ಡೇನಿಯಲ್ ಸ್ಯಾಮ್ಸ್ ಸಿಡ್ನಿ ಥಂಡರ್ಸ್ ಪರವಾಗಿ ಕಣಕ್ಕಿಳಿದು ಮಿಂಚು ಹರಿಸಿದ್ದರು. ಇಡೀ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸುವ ಮೂಲಕ ಸ್ಯಾಮ್ಸ್ ಹೊಸ ಭರವಸೆಯನ್ನು ಮೂಡಿಸಿದ್ದರು. ಈ ಆಟಗಾರ ಈಗ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ ಎನ್ನಲಾಗುತ್ತಿದೆ. ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಸರಣಿಯಲ್ಲಿ ಆಸ್ಟ್ರೇಲಿಯಾ ಸ್ಕ್ವಾಡ್‌ನಲ್ಲಿ ಸ್ಯಾಮ್ಸ್ ಆಯ್ಕೆಯಾಗಿ ಪ್ರವಾಸವನ್ನು ಕೈಗೊಂಡಿದ್ದಾರೆ.

ಮತ್ತೊಂದೆಡೆ ಜೇಸನ್ ರಾಯ್ ಈ ಬಾರಿಯ ಐಪಿಎಲ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹಿಂದಕ್ಕೆ ಸರಿಯುತ್ತಿರುವ 2ನೇ ಇಂಗ್ಲೀಷ್ ಆಟಗಾರನಾಗಿದ್ದಾರೆ. ಕಳೆದ ವಾರ ಕ್ರಿಸ್ ವೋಕ್ಸ್ ಕೂಡ ಈ ಬಾರಿಯ ಟೂರ್ನಿಯಲ್ಲಿ ಪಾಲ್ಗೊಳ್ಳದಿರುವ ನಿರ್ಧಾರವನ್ನು ಕೈಗೊಂಡಿದ್ದರು. ಆ ಸ್ಥಾನಕ್ಕೆ ಆಫ್ರಿಕಾದ ವೇಗಿ ಎನ್ರಿಚ್ ನಾಟ್ರ್ಜೆ ಅವರನ್ನು ಸೇರ್ಪಡೆಗೊಳಿಸಲಾಗಿತ್ತು.

Story first published: Friday, August 28, 2020, 10:00 [IST]
Other articles published on Aug 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+