ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಗ್‌ಬ್ಯಾಶ್ ಲೀಗ್‌ನಿಂದ ಹಿಂದಕ್ಕೆ ಸರಿದ ಇಂಗ್ಲೆಂಡ್ ಆಟಗಾರ ಜಾನಿ ಬೈರ್‌ಸ್ಟೋವ್

England cricketer Jonny Bairstow withdraws from Big Bash League

ಇಂಗ್ಲೆಂಡ್‌ನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಬಿಗ್‌ಬ್ಯಾಷ್ ಕ್ರಿಕೆಟ್ ಲೀಗ್‌ನಿಂದ ಹಿಂದೆ ಸರಿದಿದ್ದಾರೆ. ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ರಾಷ್ಟ್ರೀಯ ತಂಡದಿಂದ ಕರೆ ಬರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಟೂರ್ನಿಯಿಂದ ಹಿಂದಕ್ಕೆ ಸರಿಯುತ್ತಿದ್ದಾರೆ ಎನ್ನಲಾಗಿದೆ.

ಜಾನಿ ಬೈರ್‌ಸ್ಟೋವ್ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪರವಾಗಿ ಕಣಕ್ಕಿಳಿಯಬೇಕಾಗಿತ್ತು. ಆದರೆ ಈ ಬಾರಿಯ ಟೂರ್ನಿಯಲ್ಲಿ ಬೈರ್‌ಸ್ಟೋವ್ ಪಾಲ್ಗೊಳ್ಳುತ್ತಿಲ್ಲ ಎನ್ನುವುದನ್ನು ಮೆಲ್ಬೋರ್ನ್ ಸ್ಟಾರ್ಸ್ ಫ್ರಾಂಚೈಸಿ ಸ್ಪಷ್ಟಪಡಿಸಿದೆ.

ಭಾರತ vs ಆಸ್ಟ್ರೇಲಿಯಾ ಮೊದಲ ಟಿ20: ಸಮಯ, ಸಂಭಾವ್ಯ ತಂಡ, ನೇರಪ್ರಸಾರಭಾರತ vs ಆಸ್ಟ್ರೇಲಿಯಾ ಮೊದಲ ಟಿ20: ಸಮಯ, ಸಂಭಾವ್ಯ ತಂಡ, ನೇರಪ್ರಸಾರ

ಬಿಗ್‌ಬ್ಯಾಷ್ ಕ್ರಿಕೆಟ್ ಟೂರ್ನಿಯ ಆರಂಭಕ್ಕೆ ಒಂದು ವಾರ ಮುನ್ನ ಬೈರ್‌ಸ್ಟೋವ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಡಿಸೆಂಬರ್ 10ರಿಂದ ಬಿಗ್‌ಬ್ಯಾಷ್ ಲೀಗ್ ಆರಂಭವಾಗಲಿದ್ದು
ಬೈರ್‌ಸ್ಟೋವ್ ಸ್ಥಾನಕ್ಕೆ ಆಂಡ್ರೆ ಫ್ಲೆಚರ್‌ಅವರನ್ನು ಆಯ್ಕೆ ಮಾಡಲಾಗಿದೆ.

ಜನವರಿ ತಿಂಗಳಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿಗೆ ಕರೆಬರುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಬೈರ್‌ಸ್ಟೋವ್ ಬಿಗ್‌ಬ್ಯಾಷ್ ಲೀಗ್‌ಅನ್ನು ತೊರೆದಿದ್ದಾರೆ. ಬೈರ್‌ಸ್ಟೋವ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರು.

ಸುದೀರ್ಘ ಕಾಲಕ್ಕೆ ಆ ಇಬ್ಬರು ಆಟಗಾರರ ಟೀಮ್ ಇಂಡಿಯಾದ ದೊಡ್ಡ ಆಸ್ತಿಯಾಗಬಲ್ಲರು: ಗಂಗೂಲಿಸುದೀರ್ಘ ಕಾಲಕ್ಕೆ ಆ ಇಬ್ಬರು ಆಟಗಾರರ ಟೀಮ್ ಇಂಡಿಯಾದ ದೊಡ್ಡ ಆಸ್ತಿಯಾಗಬಲ್ಲರು: ಗಂಗೂಲಿ

ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಸೀಮಿತ ಓವರ್‌ಗಳ ತಂಡದಲ್ಲಿ ಬೈರ್‌ಸ್ಟೋವ್ ಇಂಗ್ಲೆಂಡ್ ಪರ ಆಡುತ್ತಿದ್ದಾರೆ. 2019ರಲ್ಲಿನ ಕಠಿಣ ಟೆಸ್ಟ್ ಸಮಯದ ನಂತರ ಈ ವರ್ಷ ಬೈರ್‌ಸ್ಟೋವ್ ಇಂಗ್ಲೆಂಡ್ ಪರ ಟೆಸ್ಟ್‌ನಲ್ಲಿ ಕಣಕ್ಕಿಳಿದಿಲ್ಲ. ಎರಡು ವರ್ಷಗಳ ಹಿಂದೆ ಶ್ರೀಲಂಕಾದಲ್ಲಿ ಇಂಗ್ಲೆಂಡ್‌ ಪರವಾಗಿ ಟೆಸ್ಟ್‌ನಲ್ಲಿ ಕೊನೆಯ ಶತಕ ಗಳಿಸಿದ್ದಾರೆರು.

Story first published: Thursday, December 3, 2020, 17:32 [IST]
Other articles published on Dec 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X