ಸ್ಕಾಟ್ಲೆಂಡ್ ವಿರುದ್ಧ ಇಂಗ್ಲೆಂಡ್‌ಗೆ 5 ವಿಕೆಟ್ ಜಯ
ಕೋಲ್ಕತ್ತಾ: ಭರವಸೆಯ ಬ್ಯಾಟರ್ ಟಾಮ್ ಬ್ಯಾಂಟನ್ ಬಾರಿಸಿದ ಅರ್ಧಶತಕ ಹಾಗೂ ಸ್ಪಿನ್ ಬೌಲರ್ ಆದೀಲ್ ರಶೀದ್ ಅವರ ಬಿಗುವಿನ ದಾಳಿಯ ನೆರವಿನಿಂದ ಇಂಗ್ಲೆಂಡ್ ಟಿ20 ವಿಶ್ವಕಪ್‌ನ "ಸಿ" ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಮಣಿಸಿ, ಮುಂದಿನ ಹಂತದ ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಜಾರ್ಜ್ ಮುನ್ಸೆ (4), ಬ್ರಾಂಡನ್ ಮೆಕ್‌ಮುಲ್ಲೆನ್ (0) ರನ್ ಕಲೆ ಹಾಕುವಲ್ಲಿ ವಿಫಲರಾದರು. ಸ್ಕಾಟ್ಲೆಂಡ್ 18 ರನ್ ಆಗುವಷ್ಟರಲ್ಲಿ ಎರಡು ಪ್ರಮುಖ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.

ಈ ವೇಳೆ ತಂಡಕ್ಕೆ ಆಧಾರವಾದ ಮಿಚೆಲ್ ಜಾನ್ಸನ್ (33) ಹಾಗೂ ರಿಚೀ ಬೆರಿಂಗ್ಟನ್ ಜೋಡಿ ತಂಡಕ್ಕೆ ಕೊಂಚ ಆಸರೆಯಾಯಿತು. ಈ ಜೋಡಿ 41 ಎಸೆತಗಳಲ್ಲಿ 71 ರನ್ ಸೇರಿಸಿತು. 4ನೇ ವಿಕೆಟ್‌ಗೆ ನಾಯಕ ರಿಚೀ ಬೆರಿಂಗ್ಟನ್ ಮತ್ತು ಟಾಮ್ ಬ್ರೂಸ್ ಜೋಡಿ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿತು. ಈ ಜೋಡಿ 41 ಎಸೆತಗಳಲ್ಲಿ 71 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ರಿಚೀ ಬೆರಿಂಗ್ಟನ್ 5 ಬೌಂಡರಿ, 2 ಸಿಕ್ಸರ್ 49 ರನ್ ಸಿಡಿಸಿದರು. ಟಾಮ್ ಬ್ರೂಸ್ 24 ರನ್ ಚಚ್ಚಿದರು. ಅಂತಿಮವಾಗಿ ಸ್ಕಾಟ್ಲೆಂಡ್ 19.4 ಓವರ್‌ಗಳಲ್ಲಿ 154 ರನ್‌ಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಸ್ಪಿನ್ ಬೌಲರ್ 36 ರನ್ ನೀಡಿ 3 ವಿಕೆಟ್ ಪಡೆದರು. ವೇಗಿ ಜೋಫ್ರಾ ಆರ್ಚರ್ 2 ವಿಕೆಟ್ ಉರುಳಿಸಿದರು.
ಟಾಮ್ ಬ್ಯಾಂಟನ್ ಅರ್ಧಶತಕ
155 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಆರಂಭಿಕರಾದ ಫಿಲ್ ಸಾಲ್ಟ್ (2), ಜೋಸ್ ಬಟ್ಲರ್ (3) ರನ್ ಬಾರಿಸುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಜಾಕೊಬ್ ಬೆಥೆಲ್ (32) ಹಾಗೂ ಟಾಮ್ ಬ್ಯಾಂಟನ್ ಜೋಡಿ 45 ಎಸೆತಗಳಲ್ಲಿ 66 ರನ್ ಜೊತೆಯಾಟ ನೀಡಿತು. ನಾಯಕ ಹ್ಯಾರಿ ಬ್ರೂಕ್ (4) ಜವಾಬ್ದಾರಿ ಮರೆತರು. 5ನೇ ವಿಕೆಟ್‌ಗೆ 46 ರನ್‌ಗಳ ಜೊತೆಯಾಟ ನೀಡಿ ಸ್ಯಾಮ್ ಕರನ್ (28) ಮತ್ತು ಟಾಮ್ ಬ್ಯಾಂಟನ್ ನೀಡಿತು. ಟಾಮ್ ಬ್ಯಾಂಟನ್ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 63 ರನ್ ಸೇರಿಸಿ ಜಯದಲ್ಲಿ ಮಿಂಚಿದರು.
ಐರ್ಲೆಂಡ್‌ಗೆ ಭರ್ಜರಿ ಜಯ
ಇದಕ್ಕೂ ಮೊದಲು ಕೊಲಂಬೊದಲ್ಲಿ ನಡೆದ "ಬಿ" ಗುಂಪಿನ ಪಂದ್ಯದಲ್ಲಿ ಐರ್ಲೆಂಡ್ 96 ರನ್‌ಗಳಿಂದ ಓಮನ್ ತಂಡವನ್ನು ಮಣಿಸಿದೆ. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 235 ರನ್ ಸೇರಿಸಿತು. ಐರ್ಲೆಂಡ್ ತಂಡದ ಪರ ಲೋರ್ಕನ್ ಟಕರ್ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಅಧಾರವಾದರು. ಇವರು 51 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 94 ರನ್ ಬಾರಿಸಿ ಆರ್ಭಟಿಸಿತು. ಗ್ಯಾರೆತ್ ಡೆಲಾನಿ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ 56 ರನ್ ಸಿಡಿಸಿ ತಂಡಕ್ಕೆ ನೆರವಾದರು. ಓಮನ್ ಪರ ಶಕೀಲ್ ಅಹ್ಮದ್ ಮೂರು ವಿಕೆಟ್ ಕಬಳಿಸಿದರು.

ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಓಮನ್ ತಂಡದ ಬ್ಯಾಟರ್‌ಗಳು ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಓಮನ್ ಪರ ಆಮಿರ್ ಕಲೀಮ್ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 50 ರನ್ ಸಿಡಿಸಿದರೆ, ಹಮ್ಮದ್ ಮಿರ್ಜಾ 37 ಎಸೆತಗಳಲ್ಲಿ 46 ರನ್ ಸಿಡಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ಓಮನ್ 18 ಓವರ್‌ಗಳಲ್ಲಿ 139 ರನ್‌ಗಳಿಗೆ ಆಲೌಟ್ ಆಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications