ಸೋಲುವ ಪಂದ್ಯ ಗೆದ್ದ ಇಂಗ್ಲೆಂಡ್: ಪಾಕಿಸ್ತಾನ ಸೆಮಿಫೈನಲ್ ಆಸೆ ಜೀವಂತ
ಕೊಲಂಬೊ: ಭರವಸೆಯ ಆಟಗಾರ ವಿಲ್ ಜಾಕ್ಸ್ ಅವರ ಆಲ್‌ರೌಂಡರ್ ಆಟದ ಪರಿಣಾಮ ಇಂಗ್ಲೆಂಡ್ ಟಿ20 ವಿಶ್ವಕಪ್‌ನ ಸೂಪರ್ 8 ಹಂತದ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ, ಅಜೇಯವಾಗಿ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದೆ. ಈ ಪಂದ್ಯವನ್ನೇ ಗಮನಿಸುತ್ತಿದ್ದ ಪಾಕಿಸ್ತಾನ, ಇಂಗ್ಲೆಂಡ್ ಗೆಲ್ಲುತ್ತಿದ್ದಂತೆ ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ಸುಲಭವಾಗಿ ಸೆಮಿಫೈನಲ್ ಪ್ರವೇಶಿಸುವ ನ್ಯೂಜಿಲೆಂಡ್ ಆಸೆಗೆ ಪೆಟ್ಟು ಬಿದ್ದಿದೆ.
ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಫಿಲ್ ಸಾಲ್ಟ್ (2) ರನ್ ಬಾರಿಸುವಲ್ಲಿ ವಿಫಲರಾದರು. ಸ್ಫೋಟಕ ಬ್ಯಾಟರ್ ಜೋಸ್ ಬಟ್ಲರ್ 2 ಎಸೆತವನ್ನು ಎದುರಿಸಿದರೂ ಸಹ ಖಾತೆ ಓಪನ್ ಮಾಡಲಿಲ್ಲ. ಇಂಗ್ಲೆಂಡ್ 2 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಹ್ಯಾರಿ ಬ್ರೂಕ್ 26, ಜಾಕಬ್ ಬೆಥೆಲ್ 21, ಟಾಮ್ ಬ್ಯಾಂಟನ್ 33, ಸ್ಯಾಮ್ ಕರನ್ 24 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.

ಕೊನೆಯ 5 ಓವರ್‌ನಲ್ಲಿ 59 ರನ್‌ಗಳ ಅವಶ್ಯಕತೆ ಇತ್ತು. ಆಗ ಇಂಗ್ಲೆಂಡ್ ಕೈಯಲ್ಲಿ ಐದು ವಿಕೆಟ್‌ಗಳು ಇದ್ದವು. ಈ ವೇಳೆ ಎಲ್ಲರೂ ನ್ಯೂಜಿಲೆಂಡ್ ತಂಡದ ಸ್ಪಿನ್ ಬೌಲರ್‌ಗಳು ಮೊನಚಾದ ದಾಳಿಯನ್ನು ಸಂಘಟಿಸುತ್ತಿದ್ದರು. ಈ ಪಂದ್ಯವನ್ನು ಸುಲಭವಾಗಿ ಗೆದ್ದು ಸೆಮಿಫೈನಲ್ ಪ್ರವೇಶಿಸಬಹುದು ಎಂಬ ಆಸೆಯನ್ನು ನ್ಯೂಜಿಲೆಂಡ್ ಹೊಂದಿತ್ತು. ಆದರೆ ಈ ಹಂತದಲ್ಲಿ ಇಂಗ್ಲೆಂಡ್ ತಂಡದ ವಿಲ್ ಜಾಕ್ಸ್ ಹಾಗೂ ರೆಹಾನ್ ಅಹ್ಮದ್ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಅಂತಿಮವಾಗಿ ಇಂಗ್ಲೆಂಡ್ 19.3 ಓವರ್‌ಗಳಲ್ಲಿ 6 ವಿಕೆಟ್‌ಗೆ 161 ರನ್ ಸೇರಿಸಿತು.
ಕಿವೀಸ್ ಭರ್ಜರಿ ಆರಂಭ
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಫಿನ್ ಅಲೆನ್ ಹಾಗೂ ಟೀಮ್ ಸಿಫರ್ಟ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಮೊದಲ ವಿಕೆಟ್‌ಗೆ ಈ ಜೊಡಿ 64 ರನ್ ಸೇರಿಸಿತು. ಈ ಹಂತದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಟೀಮ್ ಸಿಫರ್ಟ್ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ 35 ರನ್ ಬಾರಿಸಿ ಔಟ್ ಆದರು. ಫಿನ್ ಅಲೆನ್ ಸಹ ಸಿಕ್ಸರ್ ನೆರವಿನಿಂದ 29 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ರಚಿನ್ ರವೀಂದ್ರ (11) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಮಾರ್ಕ್ ಚಾಪ್ಮನ್ (15) ಆದಿಲ್ ರಶೀದ್ ಅವರ ಎಸೆತದಲ್ಲಿ ದೊಡ್ಡ ಹಿಟ್ ಬಾರಿಸಲು ಹೋಗಿ ಸ್ಟಂಪ್ ಔಟ್ ಆದರು. ಡೇರಿಲ್ ಮಿಚೆಲ್ (3) ಜವಾಬ್ದಾರಿ ಮರೆತರು.

ಭರವಸೆಯ ಆಟಗಾರ ಗ್ಲೇನ್ ಫಿಲಿಪ್ಸ್ 3 ಬೌಂಡರಿ, 2 ಸಿಕ್ಸರ್ ನೆರವಿನಿಂದ 36 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications