Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್ ತಂಡದಲ್ಲೂ ದೌರ್ಬಲ್ಯಗಳು ಇವೆ: ಎದುರಾಳಿಗೆ ಕೊಹ್ಲಿ ಎಚ್ಚರಿಕೆ

England have weaknesses too and we have bowlers to exploit them says Virat Kohli

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಅಹರ್ನಿಶಿಯಾಗಿ ನಡೆಯಲಿದ್ದು ಕ್ಷಣಗಣನೆ ಆರಂಭವಾಗಿದೆ. ಅಹ್ಮದಾಬಾದ್‌ನಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಮೊಟೇರಾ ಸ್ಟೇಡಿಯಮ್ ಈ ಪಂದ್ಯಕ್ಕೆ ಆತಿಥ್ಯವನ್ನು ವಹಿಸಲಿದೆ. ವಿಶ್ವದ ಅತ್ಯಂತ ದೊಡ್ಡ ಸ್ಟೇಡಿಯಮ್ ಎಂಬ ಖ್ಯಾತಿಗೆ ಒಳಗಾಗಿರುವ ಮೊಟೇರಾ ಸ್ಟೇಡಿಯಮ್‌ನ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವೂ ಇದಾಗಿರಲಿದೆ.

ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳೀಕೆಯನ್ನು ನೀಡಿದ್ದಾರೆ. ಪಂದ್ಯಕ್ಕೂ ಮುನ್ನ ನಡೆದ ಮಾಧ್ಯಮಗೋಷ್ಠಿಯಲ್ಲಿ ಕೋಹ್ಲಿ ತಮ್ಮ ತಂಡದ ಸಾಮರ್ಥ್ಯವನ್ನು ಬಲಪಡಿಸುವತ್ತ ಚಿತ್ತ ನೆಟ್ಟಿದ್ದೇವೆ ಎಂದಿದ್ದಾರೆ. ಎದುರಾಳಿ ಇಂಗ್ಲೆಂಡ್ ಕೂಡ ದೌರ್ಬಲ್ಯಗಳನ್ನು ಹೊಂದಿದೆ. ಅದನ್ನು ಬೌಲರ್‌ಗಳ ಮೂಲಕ ಸಮರ್ಥವಾಗಿ ಬಳಸಿಕೊಳ್ಳಲಾಗುತ್ತದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

"ನಾವು ತಂಡವಾಗಿ ನಮ್ಮ ಸಾಮರ್ಥ್ಯದತ್ತ ಚಿತ್ತ ನೆಡಲಿದ್ದೇವೆ. ಎದುರಾಳಿಗಳಲ್ಲೂ ದೌರ್ಬಲ್ಯಗಳು ಇವೆ, ಅವುಗಳನ್ನು ನಮ್ಮ ಬೌಳರ್‌ಗಳ ಮೂಲಕ ಬಳಸಿಕೊಳ್ಳುತ್ತೇವೆ. ವೇಗಿಗಳಿಗೆ ಪೂರಕವಾಗಿ ಪರಿಸ್ಥಿತಿಯಿದ್ದರೆ ಅದು ಎದುರಾಳಿ ತಂಡಕ್ಕೂ ಸವಾಲಾಗಿ ಕಾಡಲಿದೆ" ಎಂದಿದ್ದಾರೆ ವಿರಾಟ್ ಕೊಹ್ಲಿ.

ಇನ್ನು ನಾಯಕನಾಗಿ ಬೌಲರ್‌ಗಳೀಮದ ಆಕ್ರಮಣಕಾರಿ ಆಟವನ್ನು ಹೊರತೆಗೆಯುವಂತೆ ಮಾಡುವುದು ನನ್ನ ಕರ್ತವ್ಯ ಎಮದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕೊಹ್ಲಿ ಅನುಭವಿ ಆರ್ ಆಶ್ವಿನ್ ಸಾಕಷ್ಟು ಚತುರ ಬೌಲರ್‌ ಆಗಿದ್ದಾರೆ. ಆದರೆ ಕೆಲ ಬಾರಿ ಅವರಿಗೆ ಬ್ಯಾಟ್ಸ್‌ಮನ್‌ನ ದೃಷ್ಟಿಕೋನದಿಂದ ಸಲಹೆಗಳನ್ನು ನೀಡುತ್ತೇನೆ ಎಮದಿಂದ್ದಾರೆ.

ವಿರಾಟ್ ಕೊಹ್ಲಿ ಅತ್ಯಂತ ಹೆಚ್ಚು ಪಂದ್ಯಗಳನ್ನು ಭಾರತದ ನೆಲದಲ್ಲಿ ಗೆಲ್ಲಿಸಿದ ನಾಯಕ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯುವ ಉತ್ಸಾಹದಲ್ಲಿದ್ದಾರೆ. ಸದ್ಯ ಭಾರತ ಟೆಸ್ಟ್ ತಂಡದ ನಾಯಕನಾಗಿ ಅತ್ಯಂತ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿದ ಆಟಗಾರರ ಪಟ್ಟಿಯಲ್ಲಿ ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಸಮಾನ ಸಾಧನೆಯನ್ನು ಮಾಡಿದ್ದಾರೆ. ಇನ್ನೊಂದು ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ಗೆದ್ದರೆ ಅದು ದಾಖಲೆಯಾಗಲಿದೆ.

Story first published: Tuesday, February 23, 2021, 15:55 [IST]
Other articles published on Feb 23, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+