ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇಂಗ್ಲೆಂಡ್ ನೆಲದಲ್ಲಿ ಟೀಮ್ ಇಂಡಿಯಾ ಸರಣಿ ಗೆಲ್ಲುವುದು ಸುಲಭದ ಮಾತಲ್ಲ. ಮುಂಬರುವ ಎರಡು ತಿಂಗಳು ಶುಭಮನ್ ಗಿಲ್ ಪಡೆ ಟೆಸ್ಟ್ ಸರಣಿ ಆಡಲಿದೆ. ಈ ಟೆಸ್ಟ್ ಸರಣಿ ಶುಭಮನ್ ಗಿಲ್ ಮುಂದಾಳತ್ವಕ್ಕೆ ಮೊದಲ ಸವಾಲು ಎದುರಿಸಲಿದೆ. ಅನುಭವಿ ಆಟಗಾರರ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡುತ್ತಿದೆ. ಈ ಅವಕಾಶವನ್ನು ಬಳಸಿಕೊಳ್ಳಲು ಯುವ ಆಟಗಾರರು ಸನ್ನದ್ಧರಾಗಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾದ ಆಟಗಾರರು ಈಗಾಗಲೇ ಅಭ್ಯಾಸ ಪಂದ್ಯವನ್ನು ಆರಂಭಿಸಿದೆ. ಈ ವೇಳೆ ಭಾರತ ಹಾಗೂ ಭಾರತ "ಎ" ತಂಡಗಳ ನಡುವಣ ಇಂಟ್ರಾಸ್ಕ್ವಾಡ್ ಪಂದ್ಯಗಳು ನಡೆದವು. ಈ ಪಂದ್ಯದಲ್ಲಿ ಅನುಭವಿ ಆಟಗಾರರು ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದಾರೆ. ಹೀಗಿರುವಾಗ ಮೊದಲ ಟೆಸ್ಟ್ ಪಂದ್ಯದಲ್ಲಿ ಪಿಚ್ ಹೇಗಿರುತ್ತದೆ, ಬ್ಯಾಟ್ಸ್‌ಮನ್‌ಗಳಿಗೆ ನೆರವಾಗುತ್ತದೋ ಅಥವಾ ಬೌಲರ್‌ಗಳು ನೆರವಾಗುತ್ತದೋ ಎಂಬುದು ಕುತೂಹಲ ಹೆಚ್ಚಿಸಿದೆ.

ಜೂನ್ 20 ರಂದು ಮೊದಲ ಪಂದ್ಯ ಹೆಡಿಂಗ್ಲೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಲಾಗುತ್ತದೆ. ಇತಿಹಾಸನ್ನು ತಿರುಚಿ ಹಾಕಿದಾಗ ಈ ಪಿಚ್ ಬ್ಯಾಟರ್‌ಗಳಿಗೆ ಕೊಂಚ ಸಹಾಯ ಮಾಡುತ್ತದೆ ಎಂದು ತಿಳಿಯುತ್ತದೆ. ಈ ಪಿಚ್ ಸ್ಪಿನ್ ಬೌಲರ್‌ಗಳಿಗೂ ನೆರವಾಗುವ ಸಾಧ್ಯತೆ ಇದೆ. ಮೊದಲ ಪಂದ್ಯದ ವೇಳೆ ಆಕಾಶದಲ್ಲಿ ಕೊಂಚ ಮೋಡಗಳು ಇರುತ್ತವೆ. ಹೀಗಿರುವಾಗ ಈ ಪಿಚ್ ವೇಗದ ಬೌಲರ್‌ಗಳಿಗೆ ನೆರವು ಸಿಗುವ ಸಾಧ್ಯತೆ ಇದೆ. ಹೀಗಾದಲ್ಲಿ ಬ್ಯಾಟರ್‌ಗಳು ಪರದಾಟವನ್ನು ನಡೆಸಬಹುದು.
ಈ ಮೈದಾನದಲ್ಲಿ ಈಗಾಗಲೇ 81 ಟೆಸ್ಟ್ ಪಂದ್ಯ ಆಡಲಾಗಿದ್ದು, ಈ ವೇಳೆ ಮೊದಲ ಬ್ಯಾಟ್ ಮಾಡಿದ ತಂಡ 29 ಬಾರಿ ಗೆಲುವು ಸಾಧಿಸಿದರೆ, ಚೇಸ್ ಮಾಡಿದ ತಂಡ 34 ಪಂದ್ಯಗಳನ್ನು ಗೆದ್ದಿದೆ. ಈ ಮೈದಾನದಲ್ಲಿ ಸವಾಲು ಎಂದೇ ಪರಿಗಣಿಸಲಾಗುವ 404 ರನ್‌ಗಳ್ನು ಸಹ ಚೇಸ್ ಮಾಡಲಾಗಿದೆ. ಈ ಐತಿಹಾಸಿಕ ಗೆಲುವು 1948 ರಲ್ಲಿ ಮೂಡಿ ಬಂದಿತ್ತು. ಈ ಪಿಚ್ ಮೇಲೆ ಮೊದಲ 2 ಇನಿಂಗ್ಸ್‌ಗಳಲ್ಲಿ ಬ್ಯಾಟರ್‌ಗಳು ಪ್ರಾಭಲ್ಯ ಸಾಧಿಸುತ್ತಾರೆ. ಮೂರನೇ ಹಾಗೂ ನಾಲ್ಕನೇ ಇನಿಂಗ್ಸ್‌ನಲ್ಲಿ ಪಿಚ್ ಬೌಲರ್‌ಗಳಿಗೆ ನೆರವು ನೀಡುತ್ತದೆ.

ಹೆಡಿಂಗ್ಲೆ ಅಂಗಳದಲ್ಲಿ ಭಾರತ ತಂಡ ಒಟ್ಟು ಏಳು ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ವೇಳೆ ಈ ಎಲ್ಲ ಪಂದ್ಯಗಳನ್ನು ಇಂಗ್ಲೆಂಡ್ ವಿರುದ್ಧವೇ ಆಡಿದೆ. ಈ ಮೈದಾನದಲ್ಲಿ 2 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲವು ಸಾಧಿಸಿದೆ ಇನ್ನು 4 ಪಂದ್ಯಗಳಲ್ಲಿ ಸೋಲು ಕಂಡಿದ್ದು, ಒಂದು ಪಂದ್ಯ ಡ್ರಾ ಆಗಿದೆ. ಇನ್ನು ಇಂಗ್ಲೆಂಡ್‌ಗೆ ಇದು ತವರು ಅಂಗಳವಾಗಿದೆ. ಇದುವರೆಗೆ ಇಂಗ್ಲೆಂಡ್ 80 ಟೆಸ್ಟ್ ಪಂದ್ಯ ಆಡಿದ್ದು, 37 ರಲ್ಲಿ ಗೆಲುವು ಸಾಧಿಸಿದೆ. ಇನ್ನು 25 ಸೋಲು ಕಂಡಿದ್ದು, 18 ಪಂದ್ಯಗಳ ಡ್ರಾ ಆಗಿವೆ.