ಟೆಸ್ಟ್ ಸರಣಿಯಿಂದ ಇಂಗ್ಲೆಂಡಿನ ಪ್ರಮುಖ ಆಟಗಾರ ಔಟ್!

ಲಂಡನ್, ಆಗಸ್ಟ್ 13: ಪ್ರವಾಸಿ ಟೀಂ ಇಂಡಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಮಿಂಚಿದ್ದ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರು ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದರು. ಈಗ ಮೂರನೇ ಟೆಸ್ಟ್ ಪಂದ್ಯಕ್ಕೆ ತಂಡ ಇದೀಗ ಪ್ರಕಟಿಸಲಾಗಿದ್ದು, ಮೂರನೇ ಪಂದ್ಯದಿಂದಲೂ ಸ್ಟೋಕ್ ಹೊರಗುಳಿಯಬೇಕಾಗಿದೆ.
ಆದರೆ, ಅವರ ಬದಲಿಗೆ ಬಂದ ಕ್ರಿಸ್ ವೋಕ್ಸ್ ಅದ್ಭುತ ಪ್ರದರ್ಶನ ನೀಡಿ, ಭಾರತಕ್ಕೆ ಮಾರಕವಾದರು. ಈಗ ಮೂರನೇ ಟೆಸ್ಟ್ ಪಂದ್ಯವಲ್ಲದೆ ಟೆಸ್ಟ್ ಸರಣಿಯಿಂದಲೇ ಸ್ಟೋಕ್ಸ್ ಹೊರಗುಳಿಯಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬ್ರಿಸ್ಟೋಲ್ ಕ್ರೌನ್ ಕೋರ್ಟಿನಲ್ಲಿ ಸ್ಟೋಕ್ಸ್ ವಿರುದ್ಧ ವಿಚಾರಣೆ ಇನ್ನೂ ಜಾರಿಯಲ್ಲಿದೆ. ಕೋರ್ಟಿನ ಕೇಸ್ ಏನೇ ಆದರೂ ಸ್ಟೋಕ್ಸ್ ಅವರು ಸರಣಿಯಲ್ಲಿ ಆಡುವುದು ಅನುಮಾನವೆನಿಸಿದೆ.
ಮುಂದಿನ ಬುಧವಾರ ತನಕ ವಿಚಾರಣೆ ನಡೆಯಲಿದ್ದು, ಈ ಸಮಯದಲ್ಲಿ ಮೂರನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತನ್ನ ತಂಡವನ್ನು ಪ್ರಕಟಿಸಿದ್ದು, ಲಾರ್ಡ್ಸ್ ಟೆಸ್ಟ್ ಆಡಿದ ತಂಡವನ್ನೇ ಉಳಿಸಿಕೊಳ್ಳಲಾಗಿದೆ.
27 ವರ್ಷ ವಯಸ್ಸಿನ ಆಲ್ ರೌಂಡರ್ ಅವರು ಬ್ರಿಸ್ಟೋಲ್ ನ ನೈಟ್ ಕ್ಲಬ್ ನಲ್ಲಿ ಪುಂಡಾಟಿಕೆ ನಡೆಸಿ, ಗಲಾಟೆ ಮಾಡಿದ ಆರೋಪ ಹೊತ್ತಿದ್ದಾರೆ.
ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಬರ್ಮಿಂಗ್ ಹ್ಯಾಮ್ ಪಂದ್ಯ ಗೆಲ್ಲಲು ಸ್ಟೋಕ್ಸ್ ನೆರವಾಗಿದ್ದರು. ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 159ರನ್ ಗಳಿಂದ ಗೆದ್ದಿರುವ ಇಂಗ್ಲೆಂಡ್ 2-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ.
ಇಂಗ್ಲೆಂಡ್ ತಂಡ: ಜೋ ರೂಟ್(ನಾಯಕ), ಮೋಯಿನ್ ಅಲಿ , ಜೇಮ್ಸ್ ಆಂಡರ್ಸನ್, ಜಾನಿ ಬೈರ್ಸ್ಟೋ, ಸ್ಟುವರ್ಟ್ ಬ್ರಾಡ್, ಜೋಸ್ ಬಟ್ಲರ್, ಆಲಸ್ಟರ್ ಕುಕ್, ಸ್ಯಾಮ್ ಕುರನ್, ಕೀಟನ್ ಜೆನ್ನಿಂಗ್ಸ್, ಓಲ್ಲಿ ಪೋಪ್, ಜೇಮಿ ಪೋರ್ಟರ್, ಅದಿಲ್ ರಶೀದ್, ಕ್ರಿಸ್ ವೋಕ್ಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications